ಮೈಸೂರು ಕೇಕ್ ಉತ್ಸವ-2018ಕ್ಕೆ ಚಾಲನೆ
ಮೈಸೂರು

ಮೈಸೂರು ಕೇಕ್ ಉತ್ಸವ-2018ಕ್ಕೆ ಚಾಲನೆ

December 27, 2018

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಇಂದಿನಿಂದ 3 ದಿನಗಳ ಕಾಲ ಆಯೋಜಿಸಿರುವ `ಮೈಸೂರು ಕೇಕ್ ಉತ್ಸವ- 2018’ಕ್ಕೆ ಬುಧವಾರ ಚಾಲನೆ ನೀಡಲಾಯಿತು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ, ಕೃಷಿ, ಅರಣ್ಯ ಇಲಾಖೆ ಮತ್ತು ಶ್ರೀ ಚಾಮರಾಜೇಂದ್ರ ಮೃಗಾಲಯ ಸಹಯೋಗದಲ್ಲಿ ಆಯೋಜಿಸಿರುವ ಕೇಕ್ ಉತ್ಸವಕ್ಕೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಮಕ್ಕಳಿಗೆ ಕೇಕ್ ತಿನ್ನಿ ಸುವ ಮೂಲಕ ಚಾಲನೆ ನೀಡಿದರು.

ಯಾವೆಲ್ಲಾ ಕೇಕ್‍ಗಳಿವೆ: ಕೇಕ್ ತಯಾರಿಕೆಯ ಉದ್ಯಮದಲ್ಲಿ ಹೆಸರು ಮಾಡಿರುವ ಅರೋಮ, ಡಾಲ್ಫಿನ್, ಸ್ವೀಟ್ ಪ್ಯಾಲೆಸ್ ಲಾಯಲ್ ವರ್ಲ್ಡ್ ಮತ್ತು ಎಸ್‍ಪಿ ಕೆಫಿ ಸಂಸ್ಥೆಗಳು ಭಾಗವಹಿಸಿದ್ದು, ವಿವಿಧ ಬಗೆಯ ಕೇಕ್‍ಗಳನ್ನು ಪ್ರದರ್ಶನ ಮತ್ತು ಮಾರಾಟ ಕ್ಕಿಡಲಾಗಿದೆ. ವಿಶೇಷವಾಗಿ ಜಿಂಜರ್ ಹೌಸ್, ಡಾಲ್, ವೆಡ್ಡಿಂಗ್ ಕೇಕ್, ಪೇಸ್ಟ್ರಿಗಳು, ಬ್ರೆಡ್, ಬನ್, ಚಾಕೋಲೇಟ್ ಮತ್ತಿತರೆ ಸಿಹಿ ತಿನಿಸು ಲಭ್ಯವಿವೆ. ಜತೆಗೆ ಕಲ್ಯಾಣ ಮಂಟಪದ ಹೊರ ಭಾಗದಲ್ಲಿ ಹೋಳಿಗೆ, ದಾವಣಗೆರೆ ಬೆಣ್ಣೆ ದೋಸೆ, ಧಾರವಾಡ ಪೇಡ, ಮೇಲು ಕೋಟೆ ಪುಳಿಯೋಗರೆ, ಬಂಗಾರಪೇಟೆ ಪಾನಿ ಪೂರಿ, ಕಬ್ಬಿನ ಹಾಲು, ಮಂಡಕ್ಕಿ, ರುಮಾಲ್ ರೊಟ್ಟಿ, ನೆಲ್ಲಿಕಾಯಿ ಕ್ಯಾಂಡಿ, ಚಾಕೊಲೆಟ್, ನಿಪ್ಪಟ್ಟು ಮಸಾಲೆ, ಬೇಲ್ ಪೂರಿ, ಶÀರಬತ್ತು, ಐಸ್‍ಕ್ರೀಂ ಸೇರಿದಂತೆ ನಾಲಿಗೆಯಲ್ಲಿ ನೀರುಣಿ ಸುವ ಮತ್ತಿತರೆ ತಿನಿಸುಗಳು ದೊರೆಯಲಿವೆ.

ಕೇಕ್‍ನೊಂದಿಗೆ ಸೆಲ್ಫಿ: ಕೇಕ್ ಅನ್ನು ವೀಕ್ಷಿಸಲು ಆಗಮಿಸಿದ್ದ ಯುವಕ, ಯುವತಿಯರು ಮತ್ತು ಸಾರ್ವಜನಿಕರು ಕೇಕ್‍ನ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡಿದರು.

ನಂತರ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಮಾಗಿ ಉತ್ಸವದ ಅಂಗವಾಗಿ ಫಲ ಪುಷ್ಪ ಪ್ರದರ್ಶನ, ಪ್ಯಾರಾಮೋಟರಿಂಗ್, ಕೇಕ್ ಉತ್ಸವ, ಚಲನಚಿತ್ರೋತ್ಸವ, ಪಕ್ಷಿ ಉತ್ಸವ, ಬೊಂಬೆ ಆಟ, ಹಸಿರು ಸಂತೆ-ಮೈಸೂರು ಚಿತ್ರಸಂತೆ ಆಯೋಜಿಸಲಾ ಗಿದ್ದು, ಸಾರ್ವಜನಿಕರು ಮತ್ತು ಪ್ರವಾಸಿಗರು ಒತ್ತಡದ ನಡುವೆ ಬಿಡುವು ಮಾಡಿಕೊಂಡು ಬಂದು ವೀಕ್ಷಿಸಬೇಕು. ಇಂತಹ ಉತ್ಸಹ ಗಳಿಂದ ಪ್ರವಾಸೋದ್ಯಮ ಅಭಿವೃದ್ಧಿ ಯಾಗಲಿದೆ ಎಂದರು.

ಮಾತಿನ ಮೇಲೆ ಹಿಡಿತವಿರಲಿ: ಮುಖ್ಯ ಮಂತ್ರಿಗಳ ಶೂಟೌಟ್ ಹೇಳಿಕೆ ಕುರಿತು ಸಚಿವರು ಪ್ರತಿಕ್ರಿಯಿಸಿ, ಪಕ್ಷದ ನಿಷ್ಠಾವಂತ ಮುಖಂಡ ಹತ್ಯೆಯಾದ ವೇಳೆ ಮುಖ್ಯಮಂತ್ರಿ ಗಳು ಹಾಗೆ ಹೇಳಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ನಮ್ಮ ಸರ್ಕಾರದಲ್ಲಿ ಯಾವುದೇ ರೈತರ ಮೇಲೆ ಗುಂಡು ಹಾರಿಸಿಲ್ಲ, ಶೂಟೌಟ್ ಮಾಡಿಲ್ಲ. ಪಕ್ಷದ ಮುಖಂಡನಿಗೆ ಹೀಗೆ ಆಗಿದೆ ಎಂಬ ಉದ್ದೇಶದಿಂದಷ್ಟೇ ಹೇಳಿದ್ದಾರೆ. ಆದ್ದರಿಂದ ತಾವು (ಜಗದೀಶ್ ಶೆಟ್ಟರ್) ಈ ಹಿಂದೆ ಮುಖ್ಯಮಂತ್ರಿಯಾಗಿದ್ದವರು. ಮಾತ ನಾಡುವಾಗ ಮಾತಿನ ಮೇಲೆ ಹಿಡಿತ ವಿರಲಿ ಎಂದು ತಿರುಗೇಟು ನೀಡಿದರು.

ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಜಿಪಂ ಮಾಜಿ ಅಧ್ಯಕ್ಷೆ ನಯಿಮಾ ಸುಲ್ತಾನ್, ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಮತ್ತಿತರರು ಉಪಸ್ಥಿತರಿದ್ದರು.

ಚಲನಚಿತ್ರೋತ್ಸವ ಆರಂಭ: ಮಹಾರಾಜ ಕಾಲೇಜು ಮೈದಾನದಲ್ಲಿ ಮಾಗಿ ಚಲನಚಿತ್ರೋತ್ಸವ ಆರಂಭವಾಗಿದ್ದು, ಇಂದು (ಡಿ.26) `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರ ಪ್ರದರ್ಶನ ಗೊಂಡಿತು. ನಾಲ್ಕು ದಿನಗಳ ಕಾಲ ಚಲನ ಚಿತ್ರೋತ್ಸವವನ್ನು ಆಯೋಜಿಸಿದ್ದು, ಬುಧವಾರ ಪ್ರದರ್ಶನಗೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರವನ್ನು ನೂರಾರು ಮಂದಿ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿ ದಿನ ಸಂಜೆ 6.30ಕ್ಕೆ ಆರಂಭವಾಗಲಿದ್ದು, ನಾಳೆ (ಡಿ.27) `ಸೀಕ್ರೇಟ್ ಸೂಪರ್ ಸ್ಟಾರ್’, ಡಿ.28ರಂದು `ದಿ ಜಂಗಲ್ ಬುಕ್’, ಡಿ.28 ರಂದು `ಅಂಬಿ ನಿಂಗ್ ವಯಸ್ಸಾಯ್ತೋ! ಚಲನಚಿತ್ರ ಪ್ರದರ್ಶನಗೊಳ್ಳಲಿದೆ.

Translate »