ರಸ್ತೆಗೆ ಭತ್ತ ಸುರಿದು ಕಬ್ಬು  ಬೆಳೆಗಾರರ ಸಂಘದ ಆಕ್ರೋಶ
ಮೈಸೂರು

ರಸ್ತೆಗೆ ಭತ್ತ ಸುರಿದು ಕಬ್ಬು ಬೆಳೆಗಾರರ ಸಂಘದ ಆಕ್ರೋಶ

December 27, 2018

ಮೈಸೂರು:  ರೈತರು ಭತ್ತ ಕಟಾವು ಮಾಡಿ ದಾಸ್ತಾನು ಮಾಡಿದ್ದರೂ ಸರ್ಕಾರ ಖರೀದಿ ಕೇಂದ್ರ ಆರಂಭಿಸಿ ಭತ್ತ ಖರೀದಿಸಲು ಕ್ರಮ ಕೈಗೊಳ್ಳದೆ ಮಧ್ಯವರ್ತಿ ಗಳಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಭತ್ತವನ್ನು ರಸ್ತೆಗೆ ಸುರಿಯುವ ಮೂಲಕ ಬುಧವಾರ ಪ್ರತಿಭಟಿಸಿದರು.

ಮೈಸೂರಿನ ಗನ್‍ಹೌಸ್ ಬಳಿಯಿರುವ ಕಬ್ಬು ಬೆಳೆ ಗಾರರ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಆಗಮಿ ಸಿದ ಪ್ರತಿಭಟನಾಕಾರರು ರಸ್ತೆಗೆ ಭತ್ತ ಸುರಿದು ಆಕ್ರೋಶ ವ್ಯಕ್ತಪಡಿಸಿದರು. ಮೈಸೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭತ್ತ ಕಟಾವು ನಡೆಯುತ್ತಿದೆ. ಈಗಾಗಲೇ ಒಕ್ಕಣೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ರೈತರು ಭತ್ತವನ್ನು ದಾಸ್ತಾನು ಮಾಡಿಕೊಂಡು ಖರೀದಿ ಕೇಂದ್ರಕ್ಕಾಗಿ ಕಾಯುತ್ತಿದ್ದಾರೆ. ಆದರೆ ಸರ್ಕಾರ ಇದುವರೆಗೂ ಖರೀದಿ ಕೇಂದ್ರ ತೆರೆಯದೆ ಬರೀ ನೋಂದಣಿ ಪ್ರಕ್ರಿಯೆಯಲ್ಲಿ ನಿರತವಾಗಿದೆ. ಇದರಿಂದ ಹಳ್ಳಿ ಹಳ್ಳಿಗೆ ಮಧ್ಯವರ್ತಿಗಳು ಹೋಗಿ ರೈತರಿಂದ ಭತ್ತ ಖರೀದಿಸುತ್ತಿದ್ದಾರೆ. ಹಲವಾರು ಕಠಿಣ ನಿರ್ಬಂಧಗಳನ್ನು ವಿಧಿಸಿ ಭತ್ತ ಖರೀದಿ ಕೇಂದ್ರ ಗಳನ್ನು ಸ್ಥಾಪಿಸಿದ್ದರೂ ಭತ್ತ ಖರೀದಿ ಮಾಡುತ್ತಿಲ್ಲ. ದಿನೇ ದಿನೇ ಭತ್ತದ ಬೆಲೆ ಕುಸಿಯುತ್ತಿದೆ. ಕಷ್ಟಪಟ್ಟು ಭತ್ತ ಬೆಳೆದ ರೈತರು ನೋಂದಣಿ ಮಾಡಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಕನಿಷ್ಠ ಬೆಂಬಲ ಬೆಲೆ 1770 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸುವ ವ್ಯಾಪಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂಬ ಎಚ್ಚರಿಕೆ ನೀಡ ಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಖರೀದಿ ಕೇಂದ್ರಗಳಲ್ಲಿ ಇಂದಿನಿಂದಲೇ ಭತ್ತ ಖರೀದಿಗೆ ಕ್ರಮ ಕೈಗೊಳ್ಳಬೇಕು. ವಿಳಂಬವಾದರೆ ಸÀರ್ಕಾರವೇ ದಲ್ಲಾಳಿಗಳು, ಖರೀದಿದಾರ ರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ದೂರಿದರು.

ಕಬ್ಬು: ಬಣ್ಣಾರಿ ಸಕ್ಕರೆ ಕಾರ್ಖಾನೆ ಕಬ್ಬು ಕಟಾವು ಸೇರಿ ದಂತೆ ಸಾಗಾಣಿಕೆಗೆ ವಿಳಂಬ ಮಾಡುತ್ತಿದೆ. ಅಲ್ಲದೆ ಕಟಾವು ಕೂಲಿ ಏರಿಕೆ ಮಾಡಿದೆ. ಕಾನೂನುಬದ್ಧ ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿ ಮಾಡುವ ಬಗ್ಗೆ ಯಾವುದೇ ಕ್ರಮ ಕೈಗೊಂ ಡಿಲ್ಲ. ಈ ಸಂಬಂಧ ಜಿಲ್ಲಾಡಳಿತ ನೀಡಿದ್ದ ಸೂಚನೆ ಯನ್ನೂ ನಿರ್ಲಕ್ಷಿಸಿದೆ. ಕೂಡಲೇ ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾ ಧ್ಯಕ್ಷ ಕುರುಬೂರು ಶಾಂತಕುಮಾರ್, ಜಿಲ್ಲಾಧ್ಯಕ್ಷ ಪಿ.ಸೋಮ ಶೇಖರ್, ತಾಲೂಕು ಅಧ್ಯಕ್ಷ ಕುರುಬೂರು ಸಿz್ದÉೀಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಹಾಡ್ಯ ರವಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »