ಮೈಸೂರು ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ
ಮೈಸೂರು

ಮೈಸೂರು ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ

September 19, 2018

ಗಮನ ಸೆಳೆದ ಶಾಲಾ ಮಕ್ಕಳ ಪಥ ಸಂಚಲನ
ಮೈಸೂರು: ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾ ಶ್ರಯದಲ್ಲಿ ಎರಡು ದಿನಗಳ ಕಾಲ ಹಮ್ಮಿ ಕೊಂಡಿರುವ ಮೈಸೂರು ಜಿಲ್ಲಾ ಮಟ್ಟದ 2018-19ನೇ ಸಾಲಿನ ಅಥ್ಲೆಟಿಕ್ಸ್ ಕ್ರೀಡಾ ಕೂಟಕ್ಕೆ ಮೈಸೂರು ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಅಚ್ಚುತಾ ನಂದ ಮಂಗಳವಾರ ಚಾಲನೆ ನೀಡಿದರು.

ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕ್ರೀಡಾ ಕೂಟವನ್ನು ಬಲೂನುಗಳನ್ನು ಹಾರಿ ಬಿಡುವ ಮೂಲಕ ಉದ್ಘಾಟಿಸಿದ ಜೆ.ಅಚ್ಚುತಾ ನಂದ ಮಾತನಾಡಿ, ಕ್ರೀಡಾ ಚಟು ವಟಿಕೆಗಳಿಗೆ ಜಿಪಂನಿಂದ ದೊರೆಯಬೇಕಾದ ಎಲ್ಲಾ ಅನುದಾನ ಹಾಗೂ ಸೌಲಭ್ಯ ಗಳನ್ನು ಸಮರ್ಪಕವಾಗಿ ಒದಗಿಸಿಕೊಡಲು ಬದ್ಧವಾಗಿರುವುದಾಗಿ ತಿಳಿಸಿದರು.

ಕ್ರೀಡಾಚಟುವಟಿಕೆಗಳು ವಿದ್ಯಾರ್ಥಿ ಗಳಿಗೆ ವಿದ್ಯೆಯಷ್ಟೇ ಮುಖ್ಯ. ಜೊತೆಗೆ ಆರೋಗ್ಯ ಕಾಯ್ದುಕೊಳ್ಳಲು ಹಾಗೂ ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಲು ಕ್ರೀಡೆ ನೆರವಾಗಲಿದೆ. ಕ್ರೀಡೆಗಳಲ್ಲಿ ಪಾಲ್ಗೊಂಡ ವೇಳೆಯಲ್ಲಿ ಎಲ್ಲರೂ ಗೆಲುವು ಕಾಣ ಲಾಗದು. ಹೀಗಾಗಿ ನಮ್ಮ ಆದ್ಯತೆ ಉತ್ತಮ ಪ್ರದರ್ಶನದತ್ತ ಇರಬೇಕು. ಸೋಲು ಮತ್ತು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘ ಹಾಗೂ ಮೈಸೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಬಿ.ಬಸವರಾಜು ಮಾತ ನಾಡಿ, ಕ್ರೀಡಾಪಟುಗಳು ನಿರಂತರವಾಗಿ ಅಭ್ಯಾಸ ಮಾಡಬೇಕು. ಈ ಎರಡು ದಿನಗಳ ಕ್ರೀಡಾಕೂಟದಲ್ಲಿ ಪ್ರತಿಯೊಬ್ಬ ಕ್ರೀಡಾಪಟುವೂ ಉತ್ತಮವಾಗಿ ತೊಡಗಿಸಿ ಕೊಳ್ಳಬೇಕು. ಜೊತೆಗೆ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸುವ ವೇಳೆ ಜಿಲ್ಲೆಗೆ ಕೀರ್ತಿ ತರುವಂತೆ ಉತ್ತಮ ಪ್ರದರ್ಶನ ನೀಡ ಬೇಕು ಎಂದು ತಿಳಿಸಿದರು.

ಆಕರ್ಷಕ ಪಥ ಸಂಚಲನ: ಇದಕ್ಕೂ ಮುನ್ನ ನಡೆದ ಪಥ ಸಂಚಲನದಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ವಿವಿಧ ಶಾಲೆಗಳ ತಂಡಗಳು ಶಿಸ್ತಿನಲ್ಲಿ ಹೆಜ್ಜೆ ಹಾಕಿ ಅತಿಥಿಗಣ್ಯ ರಿಗೆ ಗೌರವ ವಂದನೆ ಸಲ್ಲಿಸಿದರು. ಮೈಸೂ ರಿನ ಸಿಕೆಸಿ ಶಾಲೆ ತಂಡ, ಮೇದರ್ ಬ್ಲಾಕ್‍ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಂಡ, ನಿರ್ಮಲ ಕಾನ್ವೇಂಟ್‍ನ ತಂಡ ಸೇರಿದಂತೆ ವಿವಿಧ ಶಾಲೆಗಳ ತಂಡಗಳು ಆಕರ್ಷಕ ಪಥಸಂಚಲನ ನಡೆಸಿದವು. ಮೈಸೂರಿನ ಬೃಂದಾವನ ಶಾಲೆ ತಂಡದ ವಿದ್ಯಾರ್ಥಿಗಳು ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ವಸ್ತ್ರಗಳನ್ನು ಧರಿಸಿ ಹೆಜ್ಜೆ ಹಾಕುವ ಮೂಲಕ ರಾಷ್ಟ್ರದ ತ್ರಿವರ್ಣ ಧ್ವಜದ ಸಂಕೇತವಾಗಿ ಗಮನ ಸೆಳೆದರು.
ಬ್ಯಾಂಡ್ ವಾದ್ಯದ ಮೆರಗು: ವಿವಿಧ ಶಾಲೆಗಳ ತಂಡಗಳು ನಡೆಸಿದ ಪಥ ಸಂಚಲನಕ್ಕೆ ನಂಜನಗೂಡಿನ ಸಿಟಿಜûನ್ ಶಾಲೆ ತಂಡ ಬ್ಯಾಂಡ್ ವಾದ್ಯದ ಮೆರಗು ನೀಡಿತು. ಪಥಸಂಚಲನ ನಡೆಸಿದ ತಂಡಗಳು ಶಿಸ್ತಿನಿಂದ ಸಾಲಾಗಿ ಸಮಾ ವೇಶಗೊಂಡು ಅತಿಥಿಗಣ್ಯರಿಗೆ ತಮ್ಮ ಪರಿಚಯ ಮಾಡಿಕೊಂಡರು.

ತಡವಾಯ್ತು: ಕ್ರೀಡಾಕೂಟದ ಉದ್ಘಾ ಟನಾ ಕಾರ್ಯಕ್ರಮ ಮುಕ್ಕಾಲು ಗಂಟೆ ತಡವಾಗಿ ಚಾಲನೆ ಪಡೆದುಕೊಂಡಿತು. ಪಥ ಸಂಚಲನ ನಡೆಸಲು ಕ್ರೀಡಾಂಗಣ ದಲ್ಲಿ ಸಮಾವೇಶಗೊಂಡಿದ್ದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಬಿಸಿಲಿನ ತಾಪ ದಲ್ಲಿ ಒಣಗಬೇಕಾಯಿತು. ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಯಲ್ಲಿ ಮುದ್ರಿತಗೊಂಡಿದ್ದ ಜನಪ್ರತಿನಿಧಿಗಳ ಪೈಕಿ ಜಿಪಂನ ಜೆ.ಅಚ್ಚುತಾ ನಂದ ಹಾಗೂ ಮೈಸೂರು ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಹೊರತಾಗಿ ಮತ್ಯಾರು ಹಾಜರಿರಲಿಲ್ಲ. ಹಲವು ಅಧಿ ಕಾರಿಗಳ ಗೈರು ಸಹ ಎದ್ದು ಕಾಣುತ್ತಿತ್ತು.

ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಕ್ರೀಡಾಕೂಟದ ಧ್ವಜಾರೋಹಣ ನೆರ ವೇರಿಸಿದರು. ಕರ್ನಾಟಕ ರಾಜ್ಯ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಬಿ. ಅರುಣ್ ಕುಮಾರ್, ಮೈಸೂರು ಜಿಲ್ಲಾ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪಿ.ಮಹದೇವಯ್ಯ, ಶಿಕ್ಷಣ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಸಿ. ಮರಿಯಪ್ಪ, ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಪತಿ ಕೆಂಪರಾಮಯ್ಯ ಮತ್ತಿತರರು ಹಾಜರಿದ್ದರು.

Translate »