ಶ್ರೀ ರಾಮಾಯಣ ದರ್ಶನಂ ಕೇವಲ ಕಾವ್ಯವಲ್ಲ, ಅದೊಂದು ವರ್ತಮಾನ ಬದುಕಿನ ಕನ್ನಡಿ
ಮೈಸೂರು

ಶ್ರೀ ರಾಮಾಯಣ ದರ್ಶನಂ ಕೇವಲ ಕಾವ್ಯವಲ್ಲ, ಅದೊಂದು ವರ್ತಮಾನ ಬದುಕಿನ ಕನ್ನಡಿ

September 19, 2018

ಮೈಸೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಕುವೆಂಪು ಅವರು, ಸಾಮಾಜಿಕ ಬದಲಾವಣಿಗೆ ಸಾಹಿತ್ಯ ಉಪಕರಣವಾಗಬೇಕೆಂದು ಅನೇಕ ಬಾರೀ ಪ್ರತಿಪಾದಿಸಿದ್ದರು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಭಿಪ್ರಾಯಪಟ್ಟರು.

ಮೈಸೂರು ಅರಮನೆ ಕಸಾಪ ಸಭಾಂಗಣದಲ್ಲಿ ಜಿಲ್ಲಾ ಕಸಾಪ ಹಾಗೂ ಅಖಿಲ ಕರ್ನಾಟಕ ಗಮಕ ಪರಿಷತ್ ಸಹಯೋಗದೊಂದಿಗೆ ನಡೆದ ಗಮಕ ಸೌರಭ ಶೀರ್ಷಿಕೆಯಡಿ ಕುವೆಂಪು ಅವರ `ಶ್ರೀರಾಮಾಯಣ ದರ್ಶನಂ’ನ `ಶಬರಿಗಾದನು ಅತಿಥಿ ದಾಶರಥಿ’ ಕಾವ್ಯ ಭಾಗದ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕುವೆಂಪು ಬರಹಗಳು ತಳ ಸಮುದಾಯದ ನೋವು-ನಲಿವು ಹಾಗೂ ಅವರ ಜೀವನ ಕ್ರಮವನ್ನು ಪರಿಚಯಿಸಿ, ಸಾಹಿತ್ಯದ ಮೂಲಕ ದ್ವನಿಯಾಗಿದ್ದರು. `ಶ್ರೀ ರಾಮಯಾಣ ದರ್ಶನಂ’ ಕೇವಲ ಕಾವ್ಯವಾಗದೇ, ಅದೊಂದು ವರ್ತಮಾನ ಬದುಕಿನ ಕನ್ನಡಿ ಎಂದರು.
ಮಹಾರಾಜ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಟಿ.ಕೆ.ಕೆಂಪೇಗೌಡ ಮಾತನಾಡಿ, ಕುವೆಂಪು ಅವರ `ರಾಮಾಯಣ ದರ್ಶನಂ’ ಭಾಗವಾದ `ಶಬರಿಗಾದನು ಅತಿಥಿ ದಾಶರಥಿ’ ರಾಮ-ಶಬರಿ ನಡುವಿನ ಪಾತ್ರವನ್ನು ಅಮೋಘವಾಗಿ ರಚಿಸಿದ್ದಾರೆ.

ಈ ಪಾತ್ರದ ಮೂಲಕ ಮೇಲ್ವರ್ಗದವರಿಗೆ ಮಾತ್ರ ದೇವರು, ಪೂಜೆ, ಪುನಸ್ಕಾರಗಳಿಗೆ ಸೀಮಿತವಾಗಿದ್ದ ಕಾಲದಲ್ಲಿ ತಳ ಸಮುದಾಯಕ್ಕೆ ಸೇರುವ ಶಬರಿಯೂ ತನ್ನ ದೈವಭಕ್ತಿಯಿಂದ ರಾಮನಿಗೆ ಅನುಕೂಲ ಮಾಡಿಕೊಟ್ಟ ಪ್ರಸಂಗವನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ ಎಂದರು. ಇಂದಿನ ಗಮಕ ಸೌರಭದಲ್ಲಿ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಆಯ್ದ ಕಾವ್ಯಗಳಿಗೆ ಗಮಕ ವಾಚನ-ವ್ಯಾಖ್ಯಾನ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ವೇದಿಕೆಯಲ್ಲಿ ಮುಕ್ತಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಸ್.ರಾಮಪ್ರಸಾದ್, ಗಮಕಿ ವಿದ್ವಾನ್ ವಿದ್ಯಾಶಂಕರ್, ವ್ಯಾಖ್ಯಾನಕಾರ ಕೃ.ಪಾ.ಮಂಜುನಾಥ್, ಹಿರಿಯ ಸಾಹಿತಿ ಡಾ. ಜಯಪ್ಪ ಹೊನ್ನಾಳಿ, ರಾಜಶೇಖರ ಕದಂಬ, ಮೂಗೂರು ನಂಜುಂಡಸ್ವಾಮಿ, ಮಾಜಿ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್, ಎಂ.ಚಂದ್ರಶೇಖರ್ ಸೇರಿದಂತೆ ಇತರರಿದ್ದರು.

Translate »