ಲಯನ್ಸ್ ಕೊಡುಗೆಗೆ ಯಾವ ಪ್ರಶಸ್ತಿ ನೀಡಿದರೂ ಕಮ್ಮಿ
ಮೈಸೂರು

ಲಯನ್ಸ್ ಕೊಡುಗೆಗೆ ಯಾವ ಪ್ರಶಸ್ತಿ ನೀಡಿದರೂ ಕಮ್ಮಿ

September 19, 2018

ನೇಸರ ಉದ್ಘಾಟನೆಯಲ್ಲಿ ಜಿಲ್ಲಾ ರಾಜ್ಯಪಾಲ ಲಯನ್ ರೇಣುಕುಮಾರ್ ಅಭಿಮತ
ಮೈಸೂರು:  ಲಯನ್ಸ್ ಸಂಸ್ಥೆ ಸಮಾಜ ಸೇವೆಗೆ ಹೆಸರುವಾಸಿ ಎಂದು ಜಿಲ್ಲಾ ರಾಜ್ಯಪಾಲ ಲಯನ್ ವಿ.ರೇಣು ಕುಮಾರ್ ಅಭಿಪ್ರಾಯಪಟ್ಟರು.ಅವರು ಇತ್ತೀಚೆಗೆ ನಗರದ ಖಾಸಗಿ ಹೊಟೇಲ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ಲಯನ್ಸ್ ಕ್ಲಬ್ ಆಫ್ ಮೈಸೂರು ವಿಜಯಶ್ರೀ ಪ್ರಾಯೋಜಕತ್ವದಲ್ಲಿ ಹೊರಹೊಮ್ಮಿರುವ ಲಯನ್ಸ್ ಕ್ಲಬ್ ಆಫ್ ಮೈಸೂರು ನೇಸರ, ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ, ಜಿಲ್ಲೆ 317-ಎ, ವಲಯ-1, ಕ್ಷೇತ್ರ-9 2018-19ರ ನೂತನ ಅಧ್ಯಕ್ಷ ಲಯನ್ ಮಲ್ಲಪ್ಪ ಗೌಡ ಹಾಗೂ ಪದಾಧಿಕಾರಿಗಳ ಉದ್ಘಾ ಟನಾ ಸಮಾರಂಭದಲ್ಲಿ ಮಾತನಾಡಿದರು.

ಸೂರ್ಯನ ಹೆಸರು ‘ನೇಸರ’, ಈ ಕ್ಲಬ್ ಎಲ್ಲೆಡೆ ಸೂರ್ಯನಂತೆ ಪ್ರಕಾಶ ಮಾನವಾಗಿ ಬೆಳಗಲಿ. ಇಂದಿನ ಕಾಂiÀರ್iಕ್ರಮ ನೂತನ ಕ್ಲಬ್ಬಿನ ಉದ್ಘಾಟನಾ ಕಾರ್ಯಕ್ರಮ ಅನ್ನಿಸುತ್ತಿಲ್ಲ. ಎಲ್ಲೋ ಪ್ರಾಂತೀಯ ಸಮಾವೇಶಕ್ಕೆ ಬಂದ ಹಾಗೆ ಅನ್ನಿಸುತ್ತಿದೆ. ಏಕೆಂದರೆ ಅತಿರಥ-ಮಹಾರಥರೆಲ್ಲಾ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳು ವುದು ಬಹಳ ವಿರಳ. ಮೈಸೂರಿನಲ್ಲಿ ಲಯನ್ಸ್ ಸಂಸ್ಥೆ ಬಹಳ ಪ್ರಬುದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಬದ್ಧತೆಯಿಂದ ಸಿದ್ಧತೆ ಮಾಡಿಕೊಂಡರೆ ಆ ಸಂಸ್ಥೆ ಮೇಲೆ ಬರುತ್ತದೆ ಎಂದು ಹೇಳಿದರು.

ಪದಗ್ರಹಣ ನೆರವೇರಿಸಿ ಮಾತನಾಡಿದ ಒಂದನೇ ಉಪ ಜಿಲ್ಲಾ ರಾಜ್ಯಪಾಲ ಲಯನ್ ನಾಗರಾಜ್ ವಿ.ಬೈರಿ, ನೇಸರ ‘ಬ್ಲಾಕ್ ಬಸ್ಟರ್’ ಲಯನ್ಸ್ ಸಂಸ್ಥೆ ಶುಭಾರಂಭ ಗೊಂಡಿದೆ. ಎರಡು ತಿಂಗಳ ಹಿಂದೆ ‘ಪರಿಸರ’ ಕ್ಲಬ್ ಉದ್ಘಾಟನೆಗೊಂಡಿತು. ಇಂದು ‘ನೇಸರ’ಕ್ಕೆ ಚಾಲನೆ ದೊರೆತಿದೆ. ಈ ಕ್ಲಬ್ ಎಲ್ಲರ ನಿರೀಕ್ಷೆಗೂ ಮೀರಿ ಕೆಲಸ ಮಾಡಲಿ. ಅತಿವೃಷ್ಟಿ ಹಾನಿಯಿಂದ ತತ್ತರಿಸಿ ಹೋಗಿರುವ ಕೇರಳ ರಾಜ್ಯಕ್ಕೆ ಲಯನ್ಸ್ ಸಂಸ್ಥೆ ಯಿಂದ ಈಗಾಗಲೇ 25 ಕೋಟಿ ರೂ. ಬಿಡುಗಡೆ ಮಾಡಿ ಆಸ್ತಿ-ಪಾಸ್ತಿ ಕಳೆದು ಕೊಂಡು ನಿರ್ಗತಿಕರಾದವರಿಗೆ ಅದನ್ನು ಹಂಚಲಾಗಿದೆ. ಈ ಹಣ ಸರ್ಕಾರದ ಅಥವಾ ಇನ್ಯಾವುದೇ ಸಂಘ ಸಂಸ್ಥೆಗಳಿಂದ ಬಂದ ಹಣ ಅಲ್ಲ. ಪ್ರತಿಯೊಬ್ಬ ಲಯನ್ಸ್ ಸದ ಸ್ಯರ ಸ್ವಂತ ದುಡಿಮೆಯಿಂದ ಬಂದ ಹಣ. ಮುಂದೆ ಕೊಡಗಿಗೂ ನಮ್ಮ ಸಂಸ್ಥೆಯಿಂದ ಏನಾದರೂ ಕೈಲಾದ ಸಹಾಯ ಮಾಡ ಬೇಕೆಂಬ ಸಂಕಲ್ಪ ಇದೆ ಎಂದು ಅವರು ತಿಳಿಸಿದರು.

ನೇಸರ ಕ್ಲಬ್ಬಿನ ನೂತನ ಅಧ್ಯಕ್ಷ ಲಯನ್ ಮಲ್ಲಪ್ಪಗೌಡ ಮಾತನಾಡಿ, ಸಮಾಜ ನನಗೇನು ಕೊಟ್ಟಿತು ಎನ್ನುವು ದಕ್ಕಿಂತ ಸಮಾಜಕ್ಕೆ ನಾನೇನು ಕೊಡುಗೆ ನೀಡಿದೆ ಎಂಬುದು ಮುಖ್ಯ. ನನ್ನ ವಿದ್ಯಾ ಭ್ಯಾಸ ನಗರದ ಶಾರದಾ ವಿಲಾಸ ಕಾಲೇ ಜಿನಲ್ಲಿ ಪೂರೈಸಿತು. ನಾನು ಬಡ ಕುಟುಂಬದಿಂದ ಬಂದವನು. ಇಂದು ಒಳ್ಳೆಯ ತಂಡ ನಿರ್ಮಾಣವಾಗಿದೆ. ಲಯನ್ ಕಾರ್ಯಪ್ಪ ಹಾಗೂ ಲಯನ್ ಎಲ್.ವಿ.ಶ್ರೀನಿವಾಸರವರ ಸಹಕಾರ, ಮಾರ್ಗದರ್ಶನದಿಂದ ಕ್ಲಬ್ ಉದ್ಘಾಟನೆಗೊಂಡಿದೆ. ಅವರಿಗೆ ನಾನು ಸದಾ ಚಿರ ಋಣಿ ಎಂದು ಅವರಿಬ್ಬರನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ನನ್ನ ಅವಧಿ ಕೇವಲ ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿದೆ. ಆದುದರಿಂದ ಈ ಒಂದು ವರ್ಷದಲ್ಲಿ ಆದಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿ, ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಬೇಕೆಂಬ ಬಯಕೆ ನನ್ನದು ಎಂದು ಅವರು ಹೇಳಿದರು.

Translate »