ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ, ಪೋಷಣ್ ಮಾಸಾಚರಣೆಗೆ ನಾಳೆ ಚಾಲನೆ
ಮೈಸೂರು

ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ, ಪೋಷಣ್ ಮಾಸಾಚರಣೆಗೆ ನಾಳೆ ಚಾಲನೆ

September 2, 2020

ಮೈಸೂರು, ಸೆ.1(ಪಿಎಂ)- ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಹಾಗೂ `ಪೋಷಣ್ ಮಾಸ’ ಆಚರಣೆಯ ಉದ್ಘಾಟನೆ ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯ ಮಟ್ಟದಲ್ಲಿ ಸೆ.3ರಂದು ಜರುಗಲಿದೆ.

ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆ ಜಂಟಿ ಆಶ್ರಯದಲ್ಲಿ ಪ್ರತಿವರ್ಷ ಸೆ.1ರಿಂದ 7ರವರೆಗೆ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹದಲ್ಲಿ ಪೌಷ್ಟಿಕ ಆಹಾರ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಕಳೆದ ವರ್ಷದಿಂದ ಸೆಪ್ಟೆಂಬರ್‍ನಲ್ಲಿ `ಪೋಷಣ್ ಮಾಸ’ ಆಚ ರಿಸಲಾಗುತ್ತಿದೆ. ಮಹಿಳೆಯರು, ಮಕ್ಕಳು, ಯುವತಿಯರನ್ನು ಕೇಂದ್ರೀಕರಿಸಿ, ಅವರಿಗೆ ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ಜಾಗೃತಿ ಉಂಟು ಮಾಡಲಾಗುತ್ತ್ತಿದೆ. ಮೈಸೂರಿನ ವಿಜಯನಗರದಲ್ಲಿರುವ ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಸೆ.3ರ ಬೆಳಗ್ಗೆ 11ಕ್ಕೆ ಸಪ್ತಾಹ ಹಾಗೂ ಮಾಸಾಚರಣೆಗೆ ಜಿಲ್ಲಾ ಮಟ್ಟ ದಲ್ಲಿ ಚಾಲನೆ ನೀಡಲಾಗುತ್ತಿದೆ.

ಮೈಸೂರಿನ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ(ಪಿಹೆಚ್‍ಸಿ) ಅಂಗನವಾಡಿ ಕೇಂದ್ರಗಳಲ್ಲಿ ಸಪ್ತಾಹದ ಅಂಗವಾಗಿ ಪೌಷ್ಟಿಕ ಆಹಾರದ ಬಗ್ಗೆ ಪ್ರಾತ್ಯಕ್ಷಿಕೆ ಸೇರಿದಂತೆ ನಾನಾ ಕಾರ್ಯಕ್ರಮಗಳ ಮೂಲಕ ಪೌಷ್ಟಿಕ ಆಹಾ ರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಬನ್ನಿಮಂಟಪ ಪಿಹೆಚ್‍ಸಿ: ಬನ್ನಿಮಂಟ ಪದ (ಹನುಮಂತನಗರ) ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹದಂಗವಾಗಿ ಹೈವೇ ವೃತ್ತದ ಬಳಿ ಇರುವ ಅಂಗನವಾಡಿ ಕೇಂದ್ರ ದಲ್ಲಿ ಪೌಷ್ಟಿಕ ಆಹಾರ ಸೇವನೆ ಕುರಿತಂತೆ ಗರ್ಭಿಣಿಯರು, ಬಾಣಂತಿಯರಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು.

ಈ ಸಂದರ್ಭ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಬನ್ನಿಮಂಟಪ ಪಿಹೆಚ್‍ಸಿ ಕಿರಿಯ ಆರೋಗ್ಯ ಸಹಾಯಕಿ ಖದೀಜಾ, ಪೌಷ್ಟಿಕ ಆಹಾರ ಕುರಿತು ವರ್ಷವಿಡೀ ಕಾರ್ಯಕ್ರಮ ನಡೆಯುತ್ತವೆ. ಸಪ್ತಾಹದಲ್ಲಿ ಹೆಚ್ಚಿನ ಒತ್ತು ಕೊಟ್ಟು ಜಾಗೃತಿ ಮೂಡಿಸಲಾಗುತ್ತದೆ. ಅಂಗನವಾಡಿ ಕೇಂದ್ರ ಹಾಗೂ ಸಮು ದಾಯ ಭವನದಲ್ಲಿ ಕಾರ್ಯಕ್ರಮ ಏರ್ಪ ಡಿಸಿ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸ ಲಾಗುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆಗೆ ಒತ್ತು ಕೊಟ್ಟು ಕಾರ್ಯಕ್ರಮ ನಡೆಸು ತ್ತಿದ್ದೇವೆ ಎಂದರು.

ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ ಮೈಸೂರು ಜಿಲ್ಲಾ ಉಪ ನಿರ್ದೇಶಕಿ ಕೆ.ಪದ್ಮಾ, ಜಿಲ್ಲಾ ಮಟ್ಟದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹಕ್ಕೆ ಸೆ.3ರಂದು ಚಾಲನೆ ನೀಡಲಾಗು ವುದು. ರಾಜ್ಯ ಮಟ್ಟದಲ್ಲಿ ಇಂದು ಕಾರ್ಯ ಕ್ರಮ ಏರ್ಪಡಿಸಲಾಗಿತ್ತು. ಆದರೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನದ ಹಿನ್ನೆಲೆ ಯಲ್ಲಿ ಸೆ.3ಕ್ಕೆ ಮುಂದೂಡಲಾಗಿದೆ. ಪ್ರಧಾನ ಮಂತ್ರಿಗಳು ಈ ತಿಂಗಳನ್ನು `ಪೋಷಣ್ ಮಾಸಾಚರಣೆ’ ಎಂದು `ಮನ್ ಕಿ ಬಾತ್’ನಲ್ಲಿ ಘೋಷಣೆ ಮಾಡಿದ್ದಾರೆ. ಹೀಗಾಗಿ ಈ ತಿಂಗಳಿಡೀ ವಿವಿಧ ರೀತಿ ಜಾಗೃತಿ ಕಾರ್ಯ ಕ್ರಮ ನಡೆಸುತ್ತೇವೆ ಎಂದರು.

Translate »