ರಾಜ್ಯ ಮಟ್ಟದ ಖಾದಿ ಉತ್ಸವ-2018ಕ್ಕೆ ಚಾಲನೆ
ಮೈಸೂರು

ರಾಜ್ಯ ಮಟ್ಟದ ಖಾದಿ ಉತ್ಸವ-2018ಕ್ಕೆ ಚಾಲನೆ

November 16, 2018

ಮೈಸೂರು: ಮೈಸೂರು ಜೆ.ಕೆ.ಮೈದಾನದಲ್ಲಿ ಇಂದಿ ನಿಂದ ನ.29ರವರೆಗೆ ಆಯೋಜಿಸಿರುವ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ `ಖಾದಿ ಉತ್ಸವ-2018’ಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋ ದ್ಯೋಗ ಮಂಡಳಿ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಸಂಯುಕ್ತಾಶ್ರಯ ದಲ್ಲಿ ಆಯೋಜಿಸಿರುವ ಖಾದಿ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಸಚಿವ ಜಿ.ಟಿ.ದೇವೇ ಗೌಡ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಸ್ವತಃ ಚರಕದಲ್ಲಿ ನೇಯ್ದ ಖಾದಿಯನ್ನು ಧರಿಸುತ್ತಿದ್ದರು. ವಿದೇಶಿ ಬಟ್ಟೆಗಳ ವ್ಯಾಮೋಹಕ್ಕೆ ಒಳಗಾಗದೆ, ಖಾದಿ ಗ್ರಾಮೋ ದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಿದರು. ಹಾಗೆಯೇ ನಂಜನಗೂಡು ತಾಲೂಕಿನ ಬದನವಾಳು ಗ್ರಾಮಕ್ಕೆ ಬಂದು ಖಾದಿ ಗ್ರಾಮೋದ್ಯೋಗ ವನ್ನು ಪರಿಚಯಿಸಿದರು ಎಂದರು.

ಸ್ವಾತಂತ್ರ್ಯದ ಸಂಕೇತವಾಗಿರುವ ಖಾದಿಯನ್ನು ಸ್ವಾತಂತ್ರ್ಯ ಹೋರಾಟಗಾರರು, ಹಿರಿಯರು ಧರಿಸುತ್ತಿದ್ದರು. ಆದರೆ ಇಂದಿನ ಯುವಕರು ಆಧುನಿಕ ಉಡುಪುಗಳನ್ನು ಹೆಚ್ಚು ಧರಿಸುತ್ತಿರುವುದರಿಂದ ಖಾದಿಬಟ್ಟೆ ಬಳಸು ವವರ ಸಂಖ್ಯೆ ಕಡಿಮೆ ಇದೆ. ದೇಶದ ಎಲ್ಲರೂ ಖಾದಿ ಬಟ್ಟೆಗಳ ಧರಿಸಿದರೆ ನೇಕಾರರಿಗೆ ಉದ್ಯೋಗ ಸಿಕ್ಕಿದಂತಾಗುತ್ತದೆ. ಬಡವರು ಆರ್ಥಿಕವಾಗಿ ಮೇಲೆ ಬರಲು ಸಹಾಯ ವಾಗುತ್ತದೆ ಎಂದು ಹೇಳಿದರು.

ಖಾದಿ ಬಟ್ಟೆ, ಗ್ರಾಮೋದ್ಯೋಗದ ಬಗ್ಗೆ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ವಸ್ತುಪ್ರದರ್ಶನವನ್ನು ಆಯೋಜಿಸುವ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು. ಜತೆಗೆ ಯುವಕ-ಯುವತಿಯರು ಖಾದಿ ಯನ್ನು ಬಳಸುವ ಕುರಿತು ಜಾಗೃತಿ ಮೂಡಿ ಸಬೇಕು. ಖಾದಿ ಬಟ್ಟೆ ಧರಿಸುವುದರಿಂದ ಸ್ವಾತಂತ್ರ್ಯಕ್ಕೆ ಗೌರವ ನೀಡಿದಂತಾಗುತ್ತದೆ ಎಂದರು.ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಯಿಂದ ನೀಡುವ ಸೌಲಭ್ಯಗಳನ್ನು ಕರಕುಶಲ ಕರ್ಮಿಗಳು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.

ಖಾದಿ ಬಟ್ಟೆ ನೀಡಲು ಒತ್ತು: ಗುಜರಾತ್ ನಲ್ಲಿ ಶಾಲಾ ಮಕ್ಕಳಿಗೆ ಖಾದಿ ಸಮವಸ್ತ್ರ ನೀಡುತ್ತಿದ್ದು, ಅದರಂತೆ ರಾಜ್ಯದಲ್ಲೂ ಖಾದಿ ಸಮವಸ್ತ್ರ ನೀಡುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಶಾಲಾ ಮಕ್ಕಳು ಖಾದಿ ವಸ್ತ್ರಗಳನ್ನು ಬಳಸಬೇಕೆಂಬ ಅರಿವು ಮೂಡಿಸಿ ಖಾದಿ ಬಟ್ಟೆಗಳನ್ನು ನೀಡಲು ಹೆಚ್ಚು ಒತ್ತು ನೀಡಲಾಗುವುದು ಎಂದರು.

ಉತ್ಸವದಲ್ಲಿ ಏನೇನಿದೆ: ಅರಳೆ ಖಾದಿ, ಪಾಲಿಸ್ಟರ್ ಖಾದಿ, ರೇಷ್ಮೆ ಖಾದಿ, ರಾಷ್ಟ್ರ ದ್ವಜಗಳು, ಸಿದ್ದ ಉಡುಪುಗಳು, ಉಣ್ಣೆ ಖಾದಿ, ಬಳ್ಳಾರಿ ಸಿಲ್ಕ್, ಅಪ್ಪಟ ರೇಷ್ಮೆ ಸೀರೆ, ಕಾಟನ್ ಸೀರೆಗಳು, ಜೀನ್ಸ್ ಪ್ಯಾಂಟ್, ಕಾಟನ್ ಕುರ್ತಾ, ರೇಷ್ಮೆ ಚೂಡಿದಾರ್, ಚನ್ನ ಪಟ್ಟಣ ಬೊಂಬೆ, ಅರಣ್ಯ ಗಿಡಮೂಲಿಕೆ ಗಳಿಂದ ತಯಾರಾದ ಔಷಧ ಉತ್ಪನ್ನಗಳು, ವಿವಿಧ ಬಗೆಯ ಉಪ್ಪಿನಕಾಯಿ, ಜ್ಯೂಸ್, ಬಾದಾಮಿ ಪೌಡರ್, ಜೇನುತುಪ್ಪ, ಮರದ ಕರಕುಶಲ ಉತ್ಪನ್ನಗಳು, ಹಪ್ಪಳಗಳು, ಚರ್ಮೋ ದ್ಯೋಗ ಉತ್ಪನ್ನಗಳು, ಆಯುರ್ವೇದಿಕ್ ಉತ್ಪನ್ನಗಳು ದೊರೆಯಲಿವೆ. ಉತ್ಸವದಲ್ಲಿ 91 ಮಳಿಗೆಗಳಿದ್ದು, 40 ಖಾದಿ ಮತ್ತು 41 ಗ್ರಾಮೋದ್ಯೋಗ ಮಳಿಗೆಗಳಿವೆ. ಅವುಗಳಲ್ಲಿ ಮೈಸೂರಿನ 3, ಧಾರವಾಡದ 3, ಬಳ್ಳಾರಿಯ 2, ಕೋಲಾರದ 2, ಚಿಕ್ಕಬಳ್ಳಾಪುರದ 5, ದಾವಣಗೆರೆಯ 1 ಜಮ್ಮು ಕಾಶ್ಮೀರದ 10, ಪಶ್ಚಿಮ ಬಂಗಾಳದ 2, ಮಹಾರಾಷ್ಟ್ರ ಹಾಗೂ ಹರಿಯಾಣದ ತಲಾ ಒಂದು ಮಳಿಗೆ ಗಳಿವೆ. ಶಾಸಕ ಎಲ್.ನಾಗೇಂದ್ರ, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ ನಜೀರ್ ಅಹ ಮದ್, ಎಸ್‍ಬಿಐನ ಮುಖ್ಯ ವ್ಯವಸ್ಥಾಪಕ ವೆಂಕಟಾಚಲಪತಿ, ಬ್ಯಾಂಕ್ ಅಧಿಕಾರಿ ಜಗ ನ್ನಾಥ್, ಮಂಡಳಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಮಹಾಂತೇಶ್ ನಿ.ಕರೂರ ಉಪಸ್ಥಿತರಿದ್ದರು.

Translate »