ಮೈಸೂರು, ಜೂ. 24(ಆರ್‍ಕೆ)- ಮನೆ ಮನೆಗೆ ತೆರಳಿ ನೀರಿನ ತೆರಿಗೆ ಸಂಗ್ರಹಿಸುವ ಹಾಗೂ ವಿವಿಧ ಬಡಾವಣೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಮೊಬೈಲ್ ಆರ್‍ಓ ಪ್ಲಾಂಟ್(ಮಿನಿ ಟ್ಯಾಂಕರ್) ವಾಹನಗಳಿಗೆ ಮೈಸೂರು ಮೇಯರ್ ತಸ್ನೀಂ, ಇಂದು ಚಾಲನೆ ನೀಡಿದರು.
ಮೈಸೂರು ಮಹಾನಗರ ಪಾಲಿಕೆ ವತಿ ಯಿಂದ ಯಾದವಗಿರಿಯಲ್ಲಿರುವ ವಾಣಿ ವಿಲಾಸ ವಾಟರ್ ವಕ್ರ್ಸ್ ಆವರಣದಲ್ಲಿ ನಾಗ ರಿಕ ಸೇವೆ ಪೂರೈಸುವ ವಾಹನಗಳಿಗೆ ಚಾಲನೆ ನೀಡಿದ ಅವರು, ನವೀಕೃತ ಎಕ್ಸಿ ಕ್ಯೂಟಿವ್ ಇಂಜಿನಿಯರ್ ಕಚೇರಿ ಹಾಗೂ ಸುಸಜ್ಜಿತ ಸಭಾಂಗಣವನ್ನು ಟೇಪು ಕತ್ತರಿ ಸುವ ಮೂಲಕ ಸೇವೆಗೆ ಸಮರ್ಪಿಸಿದರು.
ಈ ವಾಹನಗಳಲ್ಲಿ ತೆರಳುವ ವಾಣಿ ವಿಲಾಸ ವಾಟರ್‍ವಕ್ರ್ಸ್ ಸಿಬ್ಬಂದಿ, ನೀರಿನ ಬಿಲ್ ನೀಡಿ, ಗ್ರಾಹಕರು ಕೂಡಲೇ ಬಿಲ್ ಪಾವತಿಸಲು ಇಚ್ಛಿಸಿದರೆ ಓಪಿಎಸ್ (ಪಾಯಿಂಟ್ ಆಫ್ ಸೇಲ್) ಉಪಕರಣದ ನೆರವಿನಿಂದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‍ನಲ್ಲಿ ಡಿಜಿಟಲ್ ಮೋಡ್ ಮೂಲಕ ನೀರಿನ ಬಿಲ್ ಪಾವತಿಸಿಕೊಳ್ಳುವರು ಎಂದು ಪಾಲಿಕೆ ಆಯುಕ್ತ ಗುರುದತ್ತ ಹೆಗ್ಡೆ ತಿಳಿಸಿದರು.
ಮೈಸೂರು ನಗರದಾದ್ಯಂತ ಬಾಕಿ ಇರುವ 180ಕೋಟಿ ರೂ. ನೀರಿನ ತೆರಿಗೆ ವಸೂಲಿ ಮಾಡಲು ಪಾಲಿಕೆಯಿಂದ ಕಾವೇರಿ ಮತ್ತು ಕಬಿನಿ ಎಂಬ ಹೆಸರಿನ ಎರಡು ವಾಹನ ಗಳನ್ನು ಒದಗಿಸಿದ್ದು, ಅದರಲ್ಲಿ ಪ್ರತೀ ದಿನ ವಸತಿ ಬಡಾವಣೆಗೆ ತೆರಳುವ ಸಿಬ್ಬಂದಿ ಬಾಕಿ ಬಿಲ್ ಪಾವತಿಸುವಂತೆ ನೋಟಿಸ್ ನೀಡಿ, ನಂತರವೂ ಪಾವತಿಸದಿದ್ದಲ್ಲಿ ವಾಹನ ದಲ್ಲೇ ಇರುವ ಸಾಧನಗಳಿಂದ ಅಂತಹ ಗ್ರಾಹಕರ ನೀರಿನ ಸಂಪರ್ಕವನ್ನು ಕಡಿತ ಗೊಳಿಸುವರು ಎಂದು ತಿಳಿಸಿದರು.
ಮಿನಿ ಟ್ಯಾಂಕರ್: ಮೈಸೂರಿನ ಮೂರೂ ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲಿ ಶುದ್ಧ ಕುಡಿ ಯುವ ನೀರಿನ ಘಟಕ ಇಲ್ಲವೇ ಅಂತಹ ಕೆಲವು ವಸತಿ ಬಡಾವಣೆಗಳಿಗೆ ನೀರು ಪೂರೈಸಲು ಮೈಸೂರು ಮಹಾನಗರ ಪಾಲಿಕೆ 6 ಮೊಬೈಲ್ ಆರ್‍ಓ ಪ್ಲಾಂಟ್(ಮಿನಿ ಟ್ಯಾಂಕರ್) ವಾಹನಗಳನ್ನು ಒದಗಿಸಿದೆ.
ಒಂದೊಂದು ಕ್ಷೇತ್ರದಲ್ಲಿ ತಲಾ ಎರಡು ವಾಹನಗಳು ಕಾರ್ಯಾಚÀರಿಸಿ, ಆರ್‍ಓ ಪ್ಲಾಂಟ್ ಇಲ್ಲದಿರುವ ಹಾಗೂ ಸಣ್ಣ ಪುಟ್ಟ ರಸ್ತೆಗಳ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರನ್ನು ಉಚಿತವಾಗಿ ಸರಬರಾಜು ಮಾಡುವ ಕಾರ್ಯಕ್ಕೂ ಚಾಲನೆ ನೀಡಲಾಯಿತು.
ನವೀಕೃತ ಸಭಾಭವನ: ವಾಣಿವಿಲಾಸ ವಾಟರ್ ವಕ್ರ್ಸ್ ಆವರಣದಲ್ಲಿರುವ ಎಕ್ಸಿಕ್ಯೂ ಟಿವ್ ಇಂಜಿನಿಯರ್ ಕಚೇರಿ, ಸಭಾಭವನ ವನ್ನು 26 ಲಕ್ಷ ರೂ. ವೆಚ್ಚದಲ್ಲಿ ನವೀ ಕರಿಸಿದ್ದು, ಮೇಯರ್ ತಸ್ನೀಂ ಇದೇ ಸಂದರ್ಭ ಉದ್ಘಾಟಿಸಿದರು. ವಾಣಿ ವಿಲಾಸ ವಾಟರ್ ವಕ್ರ್ಸ್ ಎಕ್ಸಿಕ್ಯೂಟಿವ್ ಇಂಜಿನಿಯರ್ ನಾಗ ರಾಜ ಮೂರ್ತಿ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮುಸ್ತಫಾ, ಕಾರ್ಪೋ ರೇಟರ್‍ಗಳಾದ ಸುಬ್ಬಯ್ಯ, ಬಿ.ವಿ.ಮಂಜು ನಾಥ, ಪೈ.ಶ್ರೀನಿವಾಸ್ ಸೇರಿದಂತೆ ಹಲ ವರು ಈ ಸಂದರ್ಭ ಉಪಸ್ಥಿತರಿದ್ದರು