ಇಂದಿನಿಂದ ರಾಜ್ಯ ಮಟ್ಟದ ಜೂನಿಯರ್, ಸಬ್ ಜೂನಿಯರ್ ಈಜು ಸ್ಪರ್ಧೆ
ಮೈಸೂರು

ಇಂದಿನಿಂದ ರಾಜ್ಯ ಮಟ್ಟದ ಜೂನಿಯರ್, ಸಬ್ ಜೂನಿಯರ್ ಈಜು ಸ್ಪರ್ಧೆ

May 31, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಈಜು ಕೊಳದಲ್ಲಿ ಗುರುವಾರದಿಂದ ಆರಂಭವಾಗಲಿರುವ ರಾಜ್ಯಮಟ್ಟದ ಜೂನಿಯರ್ ಮತ್ತು ಸಬ್ ಜೂನಿಯರ್ ಈಜು ಸ್ಪರ್ಧೆಯಲ್ಲಿ ಬೆಂಗಳೂರು ಈಜು ಸಂಶೋಧನಾ ಕೇಂದ್ರದ ಸುಮಾರು 65ಕ್ಕೂ ಹೆಚ್ಚು ಉದಯೋನ್ಮುಖ ಈಜು ಪಟುಗಳು ಭಾಗವಹಿಸಲಿದ್ದಾರೆ ಎಂದು ಬಿಎಸ್‍ಆರ್‍ಸಿ ವ್ಯವಸ್ಥಾಪನಾ ಸಮಿತಿಯ ಕಾರ್ಯದರ್ಶಿ ಮಹೇಶ್ ಕುಮಾರ್ ತಲ್ಲಂ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಬಿಎಸ್‍ಆರ್‍ಸಿ ಸಂಸ್ಥೆ ರಾಜ್ಯದಲ್ಲಿ ನಂ.1 ಈಜು ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂತರರಾಷ್ಟ್ರೀಯ ಗುಣಮಟ್ಟದ ತರಬೇತಿ ನೀಡುವ ಮೂಲಕ ನುರಿತ ಈಜು ಪಟುಗಳನ್ನು ತಯಾರು ಮಾಡುತ್ತಿದೆ. ನಮ್ಮ ಸಂಸ್ಥೆಯಲ್ಲಿ ತರಭೇತಿ ಪಡೆದ ಈಜು ಪಟುಗಳಾದ ಎ.ಪಿ.ಗಗನ್, ಉಲ್ಲಾಳ್ ಮಠ್, ಶ್ರೀಹರಿ ನಟರಾಜ್, ಶಿವಾನಿ ಕಟಾರಿಯಾ ಹಾಗೂ ಇನ್ನಿತರ ಪಟುಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದು ಗಮನ ಸೆಳೆದಿದ್ದಾರೆ ಎಂದು ಹೇಳಿದರು.

ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಈಜುಪಟುಗಳಾದ ಎಸ್.ಪ್ರದೀಪ್ ಕುಮಾರ್, ಹಿರಿಯ ಪಟು ಎ.ಸಿ.ಜಯರಾಜನ್ ಸೇರಿದಂತೆ ಹೆಸರು ಬಿ.ಎಸ್.ಆರ್.ಸಿ ಯಲ್ಲಿ ಈಜುಪಟುಗಳಿಗೆ ತರಬೇತಿ ನೀಡುತ್ತಿದ್ದಾರೆ. ಆರೋಗ್ಯವೃದ್ಧಿಗೆ ಈಜು ಪ್ರಮುಖ ಪಾತ್ರ ವಹಿಸಲಿದೆ. ಆದರೆ ಕ್ರಿಕೆಟ್‍ಗೆ ದೊರೆಯುತ್ತಿರುವ ಮನ್ನಣೆ ಈಜಿಗೆ ಸಿಗುತ್ತಿಲ್ಲ ಎಂದು ವಿಷಾಧಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಎಸ್‍ಆರ್‍ಸಿ ಅಧ್ಯಕ್ಷ ಜಿ.ಎಂ.ವಿಶ್ವೇಶ್ವರಯ್ಯ, ಉಪಾಧ್ಯಕ್ಷೆ ಡಿ.ಅನ್ನಪೂರ್ಣ, ಸದಸ್ಯರಾದ ಶೋಭಿತಾ ರಂಗಸ್ವಾಮಿ ಇದ್ದರು.

Translate »