‘ಸಾಲ ಮನ್ನಾ’ ಮಾತು ಉಳಿಸಿಕೊಳ್ಳಲಿ ಬಿಜೆಪಿ ಮುಖಂಡ, ಶಾಸಕ ಕೆ.ಎಸ್.ಈಶ್ವರಪ್ಪ ಒತ್ತಾಯ
ಹಾಸನ

‘ಸಾಲ ಮನ್ನಾ’ ಮಾತು ಉಳಿಸಿಕೊಳ್ಳಲಿ ಬಿಜೆಪಿ ಮುಖಂಡ, ಶಾಸಕ ಕೆ.ಎಸ್.ಈಶ್ವರಪ್ಪ ಒತ್ತಾಯ

May 31, 2018

ಬೇಲೂರು:  ಸಚಿವ ಸಂಪುಟ ವಿಸ್ತರಣೆಗೂ ಮುನ್ನ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸಾಲ ಮನ್ನಾ ಮಾಡಿ ಪ್ರಣಾಳಿಕೆಯಲ್ಲಿ ನೀಡಿದ ಮಾತನ್ನು ಉಳಿಸಿಕೊಳ್ಳಲಿ ಎಂದು ಬಿಜೆಪಿ ಮುಖಂಡ ಶಾಸಕ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ.

ತಾಲೂಕಿನ ಹಳೇಬೀಡು ಶ್ರೀಹೊಯ್ಸ ಳೇಶ್ವರ ದೇಗುಲಕ್ಕೆ ಭೇಟಿ ವೇಳೆ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ರಾಜ್ಯದ ಸಮ್ಮಿಶ್ರ ಸರ್ಕಾರವು ಅಪವಿತ್ರ ಮೈತ್ರಿ ಯಾಗಿದೆ. ಇದು ಇನ್ನಾರು ತಿಂಗಳಲ್ಲಿ ಕುಸಿಯ ಲಿದ್ದು, ನಂತರ ಚುನಾವಣೆ ನಡೆಯಲಿದೆ. ಇಲ್ಲವೆ ತಮ್ಮ ಪಕ್ಷವು ಅಧಿಕಾರಕ್ಕೆ ಬರು ತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆಗೂ ಮುನ್ನ ಕುಮಾರಸ್ವಾಮಿ ಕೊಟ್ಟಂತಹ ಪ್ರಣಾಳಿಕೆಯ ಭರವಸೆಯಂತೆ ರೈತರ ಸಂಪೂರ್ಣ ಸಾಲಮನ್ನಾ ಸೇರಿದಂತೆ ಇತರ ಭರವಸೆಗಳನ್ನು ಈಡೇರಿಸುವ ವಿಶ್ವಾಸ ನಮಗಿದೆ. ಒಂದು ವೇಳೆ ನಡೆದುಕೊಳ್ಳದೆ ಇದ್ದರೆ ಸಚಿವ ಸಂಪುಟ ವಿಸ್ತರಣೆಗೂ ಮುನ್ನ ಸರ್ಕಾರ ಬೀಳಲಿದೆ. ಅಂತಹ ಆಸೆ ಇದ್ದರೆ ಸಾಲ ಮನ್ನಾ ಮಾಡುವುದನ್ನು ಸ್ಥಗಿತ ಗೊಳಿಸಲಿ ಎಂದು ಸವಾಲು ಹಾಕಿದರು.

ಅಭಿವೃದ್ಧಿಗೆ ಪ್ರಧಾನಿ ಜೊತೆ ಚರ್ಚೆ: ಪ್ರಸಿದ್ಧ ಹಳೇಬೀಡಿನ ಶ್ರೀಹೊಯ್ಸಳೇಶ್ವರ ದೇಗುಲದ ಅಭಿವೃದ್ಧಿ ಹಾಗೂ ಅಲ್ಲಿನ ವಸ್ತು ಸಂಗ್ರಹಾಲಯವನ್ನು ಉನ್ನತೀಕರಣ ಗೊಳಿಸಲು ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು. ಇಲ್ಲಿನ ಅಭಿ ವೃದ್ಧಿಯ ವಿಚಾರದಲ್ಲಿ ನೀಲನಕ್ಷೆ ಹಾಗೂ ವಿವರಣೆಗಳನ್ನು ಸಂಬಂಧಪಟ್ಟವ ರಿಂದ ಪಡೆದು ಕೇಂದ್ರಕ್ಕೆ ಕಳುಹಿಸಲಾ ಗುವುದು. ಅಗತ್ಯಬಿದ್ದರೆ ಪ್ರಧಾನಿ ಅವರನ್ನು ಭೇಟಿ ಮಾಡಿ ಚರ್ಚಿಸುವುದಲ್ಲದೆ, ಕೇಂದ್ರ ಸರ್ಕಾರದಿಂದ ದೊರಕುವ ಸಹಾಯ-ಸಹಕಾರವನ್ನು ದೊರಕಿಸಿ ಕೊಡುವ ಭರವಸೆ ನೀಡಿದರು.

ತನ್ನ ಗೆಲುವಿಗಾಗಿ ಶ್ರಮಿಸಿದ ಕಾರ್ಯ ಕರ್ತರೊಂದಿಗೆ ಜೂ. 9ರಂದು ಬೇಲೂರು, ಹಳೇಬೀಡು, ಶ್ರವಣಬೆಳ ಗೊಳ ಮುಂತಾದ ಧಾರ್ಮಿಕ ಕ್ಷೇತ್ರವನ್ನು ಸಂದರ್ಶಿಸುವ ಉದ್ದೇಶ ಹೊಂದಿದ್ದೇ ನೆಂದ ಈಶ್ವರಪ್ಪ, ಪಕ್ಷವನ್ನು ಬೆಂಬ ಲಿಸಿದ ಜನತೆಗೆ ಕೃತಜ್ಞತೆ ಸಲ್ಲಿಸಿದರು. ದೇಗುಲಕ್ಕೆ ಆಗಮಿಸಿದ ಸಂದರ್ಭದಲ್ಲಿ ಈ ಪ್ರದೇಶದ ಕುರುಬ ಸಮಾಜದ ಅಧ್ಯಕ್ಷ ಬೀರೇಗೌಡ ಹಾಗೂ ವೀರಣ್ಣ ನವರು ಈಶ್ವರಪ್ಪನವರಿಗೆ ಶಾಲು ಹೊದಿಸಿ, ಹಾರ ಹಾಕಿ ಗೌರವಿಸಿದರು. ಈ ವೇಳೆ ಬಿಜೆಪಿ ಜಿಲ್ಲಾ ಮುಖಂಡ ರಾದ ನವಿಲೆ ಅಣ್ಣಪ್ಪ, ಅಡಗೂರು ಬಸವ ರಾಜ್, ಪ್ರಸನ್ನಕುಮಾರ್, ಯುವ ನಾಯಕ ಕಾಂತೇಶ್, ಹೆಚ್.ಎಂ. ಗೋವಿಂದಪ್ಪ, ಜಯದೇವ ಹಳೇಬೀಡು ಹೊಯ್ಸಳೇಶ್ವರ ಟ್ರಸ್ಟ್ ಅಧ್ಯಕ್ಷ ಜಿ. ಅನಂತರಾಮು ಮತ್ತಿತರರಿದ್ದರು.

Translate »