ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರ ಪ್ರತಿಭಟನೆ
ಹಾಸನ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರ ಪ್ರತಿಭಟನೆ

May 31, 2018

ಬೇಲೂರು:  ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರ ಸಂಯುಕ್ತ ವೇದಿಕೆ ಪ್ರತಿಭಟನೆ ನಡೆಸಿತು.
ನಗರದ ಎನ್.ಆರ್.ವೃತ್ತದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. 2017 ನ.1ರಿಂದ ಬ್ಯಾಂಕ್ ಸಿಬ್ಬಂದಿಗಳ ವೇತನ ಪರಿಷ್ಕರಣೆ ಬಾಕಿ ಇದ್ದು, ಕೇಂದ್ರ ಸರ್ಕಾರವು ಈ ಅವಧಿ ಒಳಗೆ ಮುಂಚಿತವಾಗಿಯೇ ಪರಿಷ್ಕರಣೆ ಪ್ರಕ್ರಿಯೆಯನ್ನು ಪೂರ್ಣ ಗೊಳಿಸಲು ಭಾರತೀಯ ಬ್ಯಾಂಕ್ ಸಂಘಕ್ಕೆ ಹಿಂದೆಯೇ ತಾಕೀತು ಮಾಡಲಾಗಿತ್ತು. ಬ್ಯಾಂಕ್ ಸಿಬ್ಬಂದಿ ಒಕ್ಕೂಟವೂ 2017ರ ಮೇ ತಿಂಗಳಲ್ಲಿಯೇ ತನ್ನ ಬೇಡಿಕೆಯನ್ನು ಐಬಿಎಗೆ ಸಲ್ಲಿಸಿ ಅವರೊಂದಿಗೆ ಮಾತು ಕತೆ ಪ್ರಾರಂಭಿಸಿತ್ತು. ಆದರೆ ಕಳೆದ ವರ್ಷದ ಅವಧಿಯಲ್ಲಿ ಬಹಳಷ್ಟು ಸುತ್ತಿನ ಮಾತುಕತೆ ನಡೆದ ಹೊರತಾಗಿ ಐಬಿಎ ವೇತನ ವೃದ್ಧಿಗೆ ಸಂಬಂಧಿಸಿದ ಯಾವುದೇ ತರಹದ ಪ್ರಸ್ತಾಪವನ್ನು ಮುಂದೆ ಇಡಲಿಲ್ಲ ಎಂದು ದೂರಿದರಲ್ಲದೆ, ಇತ್ತೀಚಿಗೆ ಮೇ 5ರಂದು ಐಬಿಎ ಬ್ಯಾಂಕ್‍ಗಳ ದುರ್ಬಲ ಹಣಕಾಸು ಪರಿಸ್ಥಿತಿ ನೆಪ ನೀಡಿ, ಶೇ. 2ರಷ್ಟು ವೇತನ ವೃದ್ಧಿಯ ಪ್ರಸ್ತಾಪ ಮುಂದಿಟ್ಟಿದೆ. ಕೇವಲ ತೃತೀಯ ಶ್ರೇಣ ಯ ಸಿಬ್ಬಂದಿ ವರ್ಗಕ್ಕೆ ಮಾತ್ರ ಪರಿಷ್ಕರಣೆ ಸೀಮಿತಗೊಳಿಸುವುದಾಗಿ ಪ್ರಸ್ತಾಪಿಸಿದೆ ಎಂದು ಕಿಡಿಕಾರಿದರು.

1979ರಿಂದಲೂ ಪ್ರತಿ ವೇತನ ಸಂಬಂಧಿ ದ್ವಿಪಕ್ಷೀಯ ಒಡಂಬಡಿಕೆಯು 8ನೇ ಶ್ರೇಣ ಯವರೆಗಿನ ಸಿಬ್ಬಂದಿ ಎಲ್ಲರನ್ನು ಒಳ ಗೊಂಡಿತ್ತು. ಆದರೆ ಇಂದು ಐಬಿಎ ಇದನ್ನು ಕೇವಲ 3 ಶ್ರೇಣ ಗೆ ಸೀಮಿತಗೊಳಿಸುವ ಉದ್ದೇಶ ಹೊಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ನಮ್ಮ ಒಕ್ಕೂಟವು ಐಬಿಎ ಪ್ರಸ್ತಾಪಗಳನ್ನು ವಿರೋಧಿಸಿ ಮೇ 30 ಹಾಗೂ 31ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದ್ದು, ಬ್ಯಾಂಕ್ ಕೆಲಸ ಕಾರ್ಯ ಸ್ಥಗಿತಗೊಳಿಸಿ ಜಿಲ್ಲಾ ನೌಕರರು ಮುಷ್ಕರ ಬೆಂಬಲಿಸುತ್ತಿದ್ದೇವೆ ಎಂದರು.

ಕೇಂದ್ರ ಮುಖ್ಯ ಕಾರ್ಮಿಕ ಆಯುಕ್ತರು ದೆಹಲಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಐಬಿಎ ಹಣಕಾಸು ಮಂತ್ರಾಲಯ ಪ್ರತಿನಿಧಿ ಹಾಗೂ ನಮ್ಮ ಒಕ್ಕೂಟದ ನಡುವೆ ಸಂಧಾನ ಸಭೆಗೆ ಸಿದ್ಧ ಮಾಡಿದರು. ಸಭೆ ಯಲ್ಲಿ ಐಬಿಎ ಪ್ರಸ್ತಾಪಿಸಿದ್ದ ಶೇ.2ರ ಆಧಾರ ರಹಿತ ವೇತನ ವೃದ್ಧಿಯನ್ನು ಯಾವುದೇ ಕಾರಣಕ್ಕೂ ಒಪ್ಪುವಂತಿಲ್ಲ ಎಂಬುದನ್ನು ಒಕ್ಕೂಟದಿಂದ ನಿರ್ಧರಿಸಲಾಗಿದೆ. ಎಲ್ಲಾ ಬ್ಯಾಂಕ್‍ಗಳು ಲಾಭ ಗಳಿಸುತ್ತಿದ್ದು, 2016-17ರ ಸಾಲಿನಲ್ಲಿ ಲಾಭದ ಮೊತ್ತ 15,9000 ಕೋಟಿಗಳಷ್ಟಿದೆ. ವಸೂಲಾಗದ ಸಾಲದ ಬಾಬ್ತಿಗೆ ಹೊಂದಿಸಿ ಬ್ಯಾಂಕ್‍ಗಳು ನಷ್ಟದಲ್ಲಿದೆ ಎಂದು ಬಿಂಬಿಸಲಾಗುತ್ತಿದೆ. ಅಂಕಿ-ಅಂಶವನ್ನು ತಿರುಚಿ ವೇತನ ಪರಿಷ್ಕರಣೆ ನಿರಾಕರಿಸಿ ಅನ್ಯಾಯ ಮಾಡಲಾಗುತಿದ್ದು, 8ನೇ ಶ್ರೇಣ ವರೆಗೂ ಎಲ್ಲಾ ಸಿಬ್ಬಂದಿ ಒಳ ಗೊಂಡಂತೆ ವೇತನ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಚಾಲಕ ಆರ್. ಕುಮಾರ್, ವಲಯ ಕಾರ್ಯದರ್ಶಿ ಲೋಕೇಶ್, ಜಾವಿದ್, ಪರಮಶಿವಯ್ಯ, ಸಿದ್ದಯ್ಯ, ರಾಮಮೂರ್ತಿ ಇತರರಿದ್ದರು.

Translate »