ಎರಡು ದಿನಗಳ ಬ್ಯಾಂಕ್ ಮುಷ್ಕರ ಅಂತ್ಯ
ಮೈಸೂರು

ಎರಡು ದಿನಗಳ ಬ್ಯಾಂಕ್ ಮುಷ್ಕರ ಅಂತ್ಯ

March 17, 2021

ಮೈಸೂರು,ಮಾ.16(ಆರ್‍ಕೆ)- ಖಾಸಗೀ ಕರಣ ವಿರೋಧಿಸಿ ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರು ನಡೆಸಿದ ಎರಡು ದಿನಗಳ ಮುಷ್ಕರಕ್ಕೆ ಮಂಗಳವಾರ ತೆರೆಬಿತ್ತು.

ಎರಡನೇ ದಿನವಾದ ಇಂದು ಮೈಸೂ ರಿನ ನಜರ್‍ಬಾದ್‍ನಲ್ಲಿರುವ ಕೆನರಾ ಬ್ಯಾಂಕ್ ವಲಯ ಕಚೇರಿ ಬಳಿ ನೂರಾರು ಮಂದಿ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರವು ಬ್ಯಾಂಕುಗಳ ಖಾಸಗೀಕರಣ ಪ್ರಸ್ತಾಪವನ್ನು ಕೈಬಿಡ ಬೇಕೆಂದು ಒತ್ತಾಯಿಸಿದರು.
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‍ಬಿಯು) ಕರೆ ನೀಡಿದ್ದ 2 ದಿನಗಳ ಬ್ಯಾಂಕ್ ನೌಕರರ ಮುಷ್ಕರದಲ್ಲಿ ಕೆಲ ಹೊಸ ಖಾಸಗಿ ಬ್ಯಾಂಕ್ ಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ನೌಕರರು ಪಾಲ್ಗೊಂಡಿದ್ದರಿಂದ ಬ್ಯಾಂಕಿಂಗ್ ವಹಿ ವಾಟು ಸಂಪೂರ್ಣ ಸ್ಥಗಿತಗೊಂಡಿತ್ತು.

ಉದ್ದಿಮೆದಾರರು, ಲೇವಾದೇವಿಗಾರರ ಹಿಡಿತದಲ್ಲಿದ್ದ ಬ್ಯಾಂಕುಗಳನ್ನು ಸಾರ್ವ ಜನಿಕರ ಹಣಕ್ಕೆ ಭದ್ರತೆ ನೀಡುವ ಉದ್ದೇಶ ದಿಂದ ರಾಷ್ಟ್ರೀಕರಣಗೊಳಿಸಿದ್ದನ್ನು ಇದೀಗ ಬ್ಯಾಂಕಿಂಗ್ ಕ್ಷೇತ್ರವನ್ನು ಖಾಸಗೀಕರಣಗೊಳಿ ಸುವುದು ಸರಿಯಲ್ಲ ಎಂದು ಪ್ರತಿಭಟನಾ ಕಾರರು ಬಲವಾಗಿ ಪ್ರತಿಪಾದಿಸಿದರು.

ಎರಡು ದಿನ ನೌಕರರ ಮುಷ್ಕರವಾದರೆ, ಅದಕ್ಕೂ ಮುನ್ನ ಎರಡನೇ ಶನಿವಾರ ಮತ್ತು ಭಾನುವಾರ ರಜಾದಿನವಿದ್ದ ಕಾರಣ ಒಟ್ಟು 4 ದಿನಗಳ ಕಾಲ ಬ್ಯಾಂಕುಗಳಿಗೆ ನಿರಂತರ ರಜೆ ಇದ್ದುದರಿಂದ ಉದ್ಯಮಿ ಗಳು, ವರ್ತಕರು, ಕರೆಂಟ್ ಅಕೌಂಟ್‍ನಲ್ಲಿ ನಿತ್ಯ ವ್ಯವಹರಿಸುತ್ತಿದ್ದ ಗ್ರಾಹಕರಿಗೆ ತೀವ್ರ ತೊಂದರೆ ಉಂಟಾಯಿತು.

ನಾಲ್ಕು ದಿನ ಬ್ಯಾಂಕ್ ಸೇವೆ ಸ್ಥಗಿತ ದಿಂದಾಗಿ ಕೆಲ ಎಟಿಎಂಗಳಲ್ಲೂ ಹಣ ಖಾಲಿಯಾಗಿದ್ದ ಕಾರಣ, ಸಾರ್ವಜನಿಕರು ಇಂದು ಪರದಾಡುವಂತಾಗಿದ್ದು, ಖಾಸಗಿ ಬ್ಯಾಂಕುಗಳ ಎಟಿಎಂಗಳನ್ನು ಅವಲಂ ಬಿಸುವಂತಾಯಿತು. ಚೆಕ್ ಕ್ಲಿಯರೆನ್ಸ್, ಡಿಡಿ ಖರೀದಿಸುವವರು, ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಹಣ ಡ್ರಾ ಮಾಡುವ ಫಲಾನುಭವಿಗಳಿಗೆ ಬ್ಯಾಂಕ್ ಮುಷ್ಕರದ ಬಿಸಿ ತಟ್ಟಿತು. ಸರ್ಕಾರಿ ಇಲಾಖೆ ಗಳ ಚೆಕ್ ಜಮಾವಣೆ, ಕ್ಲಿಯರೆನ್ಸ್ ಸಿಗದಿದ್ದರಿಂದ ಹಾಗೂ ಮುಡಾ, ನಗರ ಪಾಲಿಕೆಗಳ ಖಾತೆ, ಕಂದಾಯ, ತೆರಿಗೆ ಪಾವತಿಗಳ ಮೇಲೂ ಮುಷ್ಕರದಿಂದ ತೀವ್ರ ತೊಂದರೆಯಾಯಿತು.

ಮಂಗಳವಾರ ಬ್ಯಾಂಕ್ ಮುಷ್ಕರ ಅಂತ್ಯ ಗೊಂಡಿದ್ದು, ನಾಳೆ (ಮಾ.17)ಯಿಂದ ಎಲ್ಲಾ ಬ್ಯಾಂಕುಗಳು ಕಾರ್ಯನಿರ್ವಹಿಸ ಲಿವೆ. ನಮ್ಮ ಗ್ರಾಹಕರಿಗೆ ತೊಂದರೆ ಕೊಡುವ ಉದ್ದೇಶ ನಮ್ಮದಲ್ಲ. ಆದರೆ ಸಾರ್ವಜನಿಕ ಕ್ಷೇತ್ರದ ರಾಷ್ಟ್ರೀಕೃತ ಬ್ಯಾಂಕು ಗಳನ್ನು ರಕ್ಷಿಸಬೇಕೆಂಬ ಸದುದ್ದೇಶದಿಂದ ಮುಷ್ಕರ ಅನಿವಾರ್ಯವಾಯಿತು ಎಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಜಿಲ್ಲಾ ಸಂಚಾಲಕ ಹೆಚ್. ಬಾಲಕೃಷ್ಣ ಅವರು ತಿಳಿಸಿದ್ದಾರೆ.

Translate »