ಸೆ.5ರಂದು ರಾಜ್ಯ ಮಟ್ಟದ ವಿಚಾರ ಸಂಕಿರಣ
ಮೈಸೂರು

ಸೆ.5ರಂದು ರಾಜ್ಯ ಮಟ್ಟದ ವಿಚಾರ ಸಂಕಿರಣ

September 3, 2020

ಮೈಸೂರು, ಸೆ.2(ಎಂಟಿವೈ)- ಭೂ ಸುಧಾರಣಾ ಕಾಯಿದೆ ತಿದ್ದುಪಡಿ: ಖಾಸಗೀ ಕರಣ ನೀತಿ ಪರಿಣಾಮ ಮತ್ತು ಸವಾಲು ಗಳು ಕುರಿತು ಸೆ.5ರಂದು ಮೈಸೂರಿನಲ್ಲಿ ರಾಜ್ಯ ಮಟ್ಟದ ವಿಚಾರಗೋಷ್ಠಿ-ಸಂವಾದ ನಡೆಯಲಿದ್ದು, ಸಿದ್ದಾರ್ಥ ನಗರದ ಕನಕ ಸಮುದಾಯ ಭವನದಲ್ಲಿ ಸೆ.5ರ ಬೆಳಗ್ಗೆ 10.30ಕ್ಕೆ ಉದ್ಘಾಟನೆ ನಡೆಯಲಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ ಬುಧ ವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ರೈತ ಸಂಘ-ಹಸಿರುಸೇನೆ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ, ಸ್ವರಾಜ್ ಇಂಡಿಯಾ, ಜನಾಂದೋಲನ ಮಹಾ ಮೈತ್ರಿ, ಜನಚೇತನ ಟ್ರಸ್ಟ್ ಸಹಯೋಗದಲ್ಲಿ ನಡೆಯಲಿರುವ ಗೋಷ್ಠಿಯಲ್ಲಿ ರಾಜ್ಯ ದೆಲ್ಲೆಡೆಯಿಂದ 500 ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

ಹಿರಿಯ ಸಾಹಿತಿ, ಸ್ವರಾಜ್ ಇಂಡಿಯಾ ರಾಷ್ಟ್ರೀಯ ಮುಖ್ಯಸ್ಥ ದೇವನೂರು ಮಹಾ ದೇವ ಗೋಷ್ಠಿ ಉದ್ಘಾಟಿಸಲಿದ್ದು, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಪ್ರಾಸ್ತಾವಿಕವಾಗಿ ಮಾತನಾಡುವರು. ಸೆ.21 ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ವಿಚಾರಗೋಷ್ಠಿಯ ಮರುದಿನ ಮುಂದಿನ ಹೋರಾಟಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗು ವುದು. ರೈತ-ದಲಿತ-ಕಾರ್ಮಿಕ ಐಕ್ಯ ಹೋರಾಟದ ಹೆಸರಿನಲ್ಲಿ ಸರ್ಕಾರದ ನಿಲುವು ವಿರೋಧಿಸಿ ಮೈಸೂರು, ಬೆಂಗಳೂರು ಮೊದಲಾದೆಡೆ ಉಗ್ರ ಹೋರಾಟ ಮಾಡ ಲಾಗುವುದು. ಸರ್ಕಾರ ಈ ಕಾಯಿದೆ ಕೈಬಿಡುವ ತನಕ ಹೋರಾಟ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು. ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಎ.ಗೋವಿಂದ ರಾಜು, ಕೆ.ಪಿ.ಭೂತಯ್ಯ, ಮಲ್ಲಿಕಾರ್ಜುನ ಸತ್ಯಂಪೇಟೆ, ನಾಗಪ್ಪ ಉಂಡಿ, ಮಂಜು ನಾಥಗೌಡ, ಮೂಡಿಗೆರೆ ದಂಟರಮಕ್ಕಿ ಶ್ರೀನಿ ವಾಸ, ಗಂಗನಂಜಯ್ಯ, ಹೆಚ್.ಎ.ನಂಜುಂಡ ಸ್ವಾಮಿ, ಹೆಚ್.ಸಿ.ಲೋಕೇಶ್‍ರಾಜೇ ಅರಸ್, ರಾಜಶೇಖರ್ ಹಾಸನ, ಸೋಮಣ್ಣ ಬನ್ನಳ್ಳಿ ಉಪಸ್ಥಿತಿ ಇರಲಿದೆ ಎಂದರು. ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ದಸಂಸ ಸಂಚಾಲಕ ಬೆಟ್ಟಯ್ಯಕೋಟೆ, ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ಸ್ವರಾಜ್ ಇಂಡಿಯಾ ಮೈಸೂರು ನಗರ ಅಧ್ಯಕ್ಷ ಉಗ್ರ ನರಸಿಂಹೇಗೌಡ ಮತ್ತಿತ ರರು ಸುದ್ದಿಗೋಷ್ಠಿಯಲ್ಲಿದ್ದರು.

 

 

 

 

Translate »