ಅಧಿಕಾರಿಗಳ ನಡುವೆ ತಂದಿಡುವ ಕೆಲಸ ನಿಲ್ಲಿಸಿ…!
ಮೈಸೂರು

ಅಧಿಕಾರಿಗಳ ನಡುವೆ ತಂದಿಡುವ ಕೆಲಸ ನಿಲ್ಲಿಸಿ…!

May 27, 2021

ಜಿಲ್ಲೆಯ ಜನಪ್ರತಿನಿಧಿಗಳ ಇಬ್ಬಗೆ ನೀತಿ: ಸ್ವಪಕ್ಷೀಯರ ವಿರುದ್ಧವೇ ವಿಶ್ವನಾಥ್ ವಾಗ್ದಾಳಿ

`ಜಿಲ್ಲಾಧಿಕಾರಿ ನಡೆ-ಹಳ್ಳಿಗಳ ಕಡೆ’ ಕಾರ್ಯಕ್ರಮ ತಡೆದವರೇ
ಈಗ `ಡಿಸಿ ಹಳ್ಳಿಗೆ ಹೋಗಲಿ’ ಎನ್ನುತ್ತಿದ್ದಾರೆ

ಇಷ್ಟು ದಿನ `ಇಂಥ ಡಿಸಿ ಎಲ್ಲೂ ಇಲ್ಲ’ ಎಂದು ಹೇಳಿದ್ದವರೇ ಈಗ ಡಿಸಿ ವಿರುದ್ಧವೇ ತಿರುಗಿ ಬಿದ್ದಿದ್ದೇಕೆ?

ಮೈಸೂರು, ಮೇ 26(ಎಂಟಿವೈ)- `ಜಿಲ್ಲಾಧಿಕಾರಿ ನಡೆ-ಹಳ್ಳಿಗಳ ಕಡೆ’ ಎಂದು ಗ್ರಾಮೀಣ ಪ್ರದೇಶಕ್ಕೆ ಹೋಗಿ ಅಹವಾಲು ಆಲಿಸುತ್ತಿದ್ದ ಜಿಲ್ಲಾಧಿಕಾರಿಯನ್ನು ಆಗ ತಡೆಹಿಡಿದಿದ್ದು ನೀವೇ. ಈಗ ಡಿಸಿ ಗ್ರಾಮೀಣ ಭಾಗಕ್ಕೆ ಹೋಗಬೇಕು ಎಂದು ಒತ್ತಾಯಿಸುವವರೂ ನೀವೇ. ಇಂಥ ಇಬ್ಬಗೆ ನೀತಿ ಏಕೆ? ಎಂದು ಸ್ವಪಕ್ಷೀಯ ನಾಯಕರನ್ನೇ ವಿಧಾನ ಪರಿಷತ್ ಸದಸ್ಯ ಎ.ಹೆಚ್. ವಿಶ್ವನಾಥ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಮೈಸೂರಲ್ಲಿ ಪತ್ರಕರ್ತರ ಜತೆ ಬುಧವಾರ ಮಾತ ನಾಡಿದ ಅವರು, ಇಷ್ಟು ದಿನ `ಇಂಥ ಡಿಸಿ ಎಲ್ಲೂ ಇಲ್ಲ’ ಎಂದು ಹೊಗಳುತ್ತಿದ್ದವರೇ ಈಗ ಡಿಸಿ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಹಳ್ಳಿ ಹಕ್ಕಿ ಕುಟುಕಿತು.

ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಬಗ್ಗೆ ನಾನು ಈ ಮೊದಲೇ ಎಚ್ಚರಿ ಸಿದ್ದೆ. ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈಗ ಜಿಲ್ಲಾಧಿ ಕಾರಿಯನ್ನು ಗ್ರಾಮೀಣ ಪ್ರದೇಶಕ್ಕೆ ಹೋಗಿ ಎಂದು ಹೇಳುವುದರ ಹಿಂದಿನ ಮರ್ಮವೇನು? ಎಂದು ಪ್ರಶ್ನಿಸಿದರು. ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಮೈಸೂರಿಗೆ ಕರೆತಂದು, ಡಿಸಿ ಗ್ರಾಮಕ್ಕೆ ಹೋದರೆ ಶಾಸಕ, ಸಚಿವರ ಸ್ಥಾನಮಾನ ಕುಗ್ಗುತ್ತದೆ ಎಂದು ದೂರು ಹೇಳಿ, ಡಿಸಿಗಳು ಹಳ್ಳಿಗೆ ಹೋಗ ದಂತೆ ತಡೆಯಿರಿ ಎಂದು ಒತ್ತಾಯಿಸಿದ್ದು ನೀವೇ ಅಲ್ಲವೇ? ಈಗ ಗ್ರಾಮೀಣ
ಭಾಗಕ್ಕೆ ಹೋಗಿ ಹೋಗಿ ಎಂದು ಒತ್ತಾಯಿಸುತ್ತಿರುವುದೇಕೆ? ಎಂದು ವ್ಯಂಗ್ಯ ವಾಡಿದರು. ಜಿಲ್ಲಾಧಿಕಾರಿಯನ್ನು ಟೀಕಿಸಿ ಮತ್ತೊಬ್ಬ ಅಧಿಕಾರಿಯನ್ನು ಹೊಗಳುತ್ತಿದ್ದಾರೆ. ಇದರಿಂದ ಇಬ್ಬರೂ ಐಎಎಸ್ ಅಧಿಕಾರಿಗಳ ನಡುವೆ ಸಂಘರ್ಷ ವಾಗಬಹುದು. ಪಾಲಿಕೆ ಆಯುಕ್ತರ ಹೆಗಲ ಮೇಲೆ ಗನ್ ಇಟ್ಟು ಡಿಸಿ ಕಡೆಗೆ ಹೊಡೆಯುವಂತೆ ಕಾಣುತ್ತಿದೆ ಎಂದು ಟೀಕಿಸಿದ ವಿಶ್ವನಾಥ್, ಇನ್ನಾದರೂ ಅಧಿಕಾರಿ ಗಳ ನಡುವೆ ತಂದಿಡುವ ಕೆಲಸ ನಿಲ್ಲಿಸಿ ಎಂದರು.
ಕಿಮ್ಮತ್ತಿಲ್ಲ: ಜಿಲ್ಲೆಯಲ್ಲಿ ಸೋಂಕು ನಿಯಂತ್ರಣ ಕ್ಕಾಗಿ ರಚಿಸಿದ ಟಾಸ್ಕ್‍ಫೋರ್ಸ್‍ಗೆ ಕಿಮ್ಮತ್ತಿಲ್ಲ. ಟಾಸ್ಕ್‍ಫೋರ್ಸ್ ರಚನೆಗೆ ನೋಟಿಫಿಕೇಷನ್ ಆಗಬೇಕು. ದಸರಾ ಸಮಿತಿ ರೀತಿ ಟಾಸ್ಕ್‍ಪೆÇೀರ್ಸ್ ರಚಿಸಲಾಗಿದೆ. ಸಹಿ ಮಾಡಬೇಕಾದ ಜಿಲ್ಲಾಧಿಕಾರಿಯನ್ನೇ ಹೊರಗಿಟ್ಟು ಟಾಸ್ಕ್‍ಫೋರ್ಸ್ ರಚಿಸಿದ ಔಚಿತ್ಯವೇನು? ಎಂದರು.

ಅರ್ಥವೇ ಆಗದು: ಕೋವಿಡ್ ಕೇರ್ ಸೆಂಟರ್‍ಗೆ ಒಂದೇ ಪಕ್ಷದವರನ್ನು ಹಾಕಿಕೊಳ್ಳು ವುದು ಸರಿಯೇ? ವಿರೋಧ ಬಂದಿದ್ದರಿಂದಲೇ ಕೆಲ ಕೇಂದ್ರಗಳನ್ನು ಜಿಲ್ಲಾಡಳಿತ ಮುಚ್ಚಿಸಿದೆ. ಈ ಮೊದಲು ಶಾಸಕ ಸಾ.ರಾ.ಮಹೇಶ್, `ಉಸ್ತುವಾರಿ ಮಂತ್ರಿ ಬದುಕಿದ್ದಾರಾ?’ ಎಂದು ಪ್ರಶ್ನಿಸಿದ್ದರು. ಆದರೆ ಕೆ.ಆರ್.ನಗರಕ್ಕೆ ಹೋಗಿದ್ದ ಸಚಿವ ಎಸ್.ಟಿ.ಸೋಮಶೇಖರ್, ಸಾ.ರಾ.ಮಹೇಶ್‍ನನ್ನು ಹೊಗಳಿದರು. ಇದೆಲ್ಲ ನೋಡಿದರೆ ಜಿಲ್ಲೆಯಲ್ಲಿ ಏನು ನಡೆಯುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಅಣಕವಾಡಿದರು.

ಪ್ರಾಣವಾಯು: ಸರ್ಕಾರ, ಜಿಲ್ಲಾಡಳಿತ ಎರಡೂ ನಿಯಂತ್ರಣ ಕಳೆದುಕೊಂಡಿವೆ. ಪಾರದರ್ಶಕತೆ ಇರದಿದ್ದರೆ ಆಡಳಿತಕ್ಕೆ ಪ್ರಾಣವಾಯು ಎಲ್ಲಿ ಸಿಗುತ್ತದೆ. ಸಿಎಂ ಎಲ್ಲವನ್ನೂ ಬೇರೆಯವರಿಗೆ ವಹಿಸಿಕೊಟ್ಟು ಸುಮ್ಮನೆ ಕುಳಿತಿದ್ದಾರೆ ಎಂದು ಲೇವಡಿಯಾಡಿದರು.
ಡಿಸಿಗೆ ಪರಮಾಧಿಕಾರ: ಪ್ರಧಾನಿ ಮೋದಿ ಇತ್ತೀಚೆಗೆ ಎಲ್ಲಾ ರಾಜ್ಯಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದಾಗ ಕೋವಿಡ್ ನಿಯಂತ್ರಣ ವಿಚಾರದಲ್ಲಿ ಜಿಲ್ಲಾಧಿಕಾರಿಗಳಿಗೇ ಪರಮಾಧಿಕಾರ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವರ ಜತೆ ಪ್ರಧಾನಿ ಮಾತಾಡಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಪದ್ಧತಿ ನಮ್ಮಲ್ಲಷ್ಟೇ ಇದೆ. ಬೇರೆ ರಾಜ್ಯಗಳಲ್ಲಿ ಜಿಲ್ಲಾಧಿಕಾರಿಯೇ ಸುಪ್ರೀಂ ಎಂದರು.

 

 

Translate »