ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತಂದಿದ್ದಕ್ಕೆ ವ್ಯಥೆಯಾಗುತ್ತಿದೆ
ಮೈಸೂರು

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತಂದಿದ್ದಕ್ಕೆ ವ್ಯಥೆಯಾಗುತ್ತಿದೆ

May 27, 2021

ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ವಿಶ್ವನಾಥ್
ಜಿಂದಾಲ್‍ಗೆ ಭೂಮಿ ಮಾರಾಟ ಮಾಡದಿರಿ, ಸರ್ಕಾರಿ ಭೂಮಿ ಉಳಿಸಿ

ಮೈಸೂರು, ಮೇ 26(ಎಂಟಿವೈ)- ಸಾವಿರಾರು ಕೋಟಿ ರೂ. ಮೌಲ್ಯದ 3667 ಎಕರೆ ಸರ್ಕಾರಿ ಭೂಮಿಯನ್ನು ಜಿಂದಾಲ್ ಕಂಪನಿಗೆ ನೀಡಲು ಸರ್ಕಾರ ಮುಂದಾಗಿದೆ. ಸರ್ಕಾ ರದ ಅರಾಜಕತೆ ಕಂಡರೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಕ್ಕೆ ವ್ಯಥೆಯಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್ ವಿಷಾದಿಸಿದ್ದಾರೆ.
ಮೈಸೂರಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತ ನಾಡಿದ ವಿಶ್ವನಾಥ್, ಜಿಂದಾಲ್ ಕಂಪನಿಗೆ ನೀಡಿದ ಭೂಮಿಯ ಗುತ್ತಿಗೆ ಕರಾರನ್ನು ಬೇಕಿದ್ದರೆ ನವೀಕರಿಸಿ. ಆದರೆ ಯಾವುದೇ ಕಾರಣಕ್ಕೂ ಮಾರಾಟ ಮಾಡ ಬಾರದು ಎಂದು ಒತ್ತಾಯಿಸಿದ್ದಾರೆ. ಈ ಹಿಂದೆ ಇದೇ ಭೂಮಿ ಜಿಂದಾಲ್ ಕಂಪನಿ ವಶವಾಗುವುದನ್ನು ತಡೆದು ಸರ್ಕಾರಿ ಭೂಮಿ ಉಳಿಸಲು ನೀವೇ ದೊಡ್ಡ ಹೋರಾಟ ಮಾಡಿದ್ದೀರಿ. ಅಹೋರಾತ್ರಿ ಧರಣಿ ನಡೆಸಿದ್ದೀರಿ. ಈಗ ನೋಡಿದರೆ ನೀವೇ ಮಾರಲು ಉತ್ಸುಕರಾಗಿದ್ದೀರಿ. ಇದೆಷ್ಟು ಸರಿ? ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಪ್ರಶ್ನಿಸಿದರು.

ಈ ಬಗ್ಗೆ ಚರ್ಚಿಸಲು ನಾಳೆ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ಭೂಮಿ ಪರಭಾರೆ ತೀರ್ಮಾನ ನಿಲುವು ಪ್ರಕಟವಾಗಲಿದೆ. ಭೂಮಿ ಮಾರಾಟಕ್ಕೆ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಬಾರದು. ಅಲ್ಲಿನ ಭೂಮಿಗೆ 1 ಎಕರೆಗೆ 1 ಕೋಟಿ ರೂ. ಬೆಲೆ ಇದೆ. ಇಂತಹ ಭೂಮಿ ಯನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಲು ಹೊರಟಿರು ವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.

ಜಿಂದಾಲ್ ಕಂಪನಿಗೆ ಬೆಲೆಬಾಳುವ ಸರ್ಕಾರಿ ಭೂಮಿ ಪರಭಾರೆ ಮಾಡಲಿರುವ ಸರ್ಕಾರದ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಪೂರ್ಣಿಮಾ ಮತ್ತಿತರರು ವಿರೋಧಿಸಿದ್ದಾರೆ. ಆದರೂ ಸಿಎಂ ಬಲು ಆಸಕ್ತಿ ವಹಿಸಿ ಭೂಮಿ ಮಾರಾಟಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದೇವೆ ಎಂದರು.

ಖುರ್ಚಿ ಉಳಿಸಿಕೊಳ್ಳಲು: ನಾಯಕತ್ವ ಬದಲಾವಣೆ ಕುರಿತು ಎದ್ದಿರುವ ಕೂಗು ಗಮನಿಸಿದ್ದೇನೆ. ಇದು ಹೈಕಮಾಂಡ್‍ಗೆ ಬಿಟ್ಟ ವಿಚಾರ. ಸದ್ಯ ಖುರ್ಚಿ ಉಳಿಸಿ ಕೊಳ್ಳಲು ರಾಜ್ಯದಲ್ಲಿ ಲಾಕ್‍ಡೌನ್ ಮುಂದುವರೆಸುವ ಸಾಧ್ಯತೆ ಕಂಡು ಬರುತ್ತಿದೆ ಎಂದು ಕಿಡಿಕಾರಿದರು.

ಪರಿಹಾರ ನೀಡಿ: ಜೂ.7ರ ನಂತರವೂ ಲಾಕ್‍ಡೌನ್ ಮುಂದುವರೆಸಿದರೆ ಜನ ಭಾರೀ ಕಷ್ಟಕ್ಕೆ ಸಿಲುಕಲಿದ್ದಾರೆ. ದುಡಿಮೆ ಇಲ್ಲದೆ ಶ್ರಮಿಕ, ಕಾರ್ಮಿಕ ವರ್ಗ ಕಂಗೆಟ್ಟಿದೆ. ಸರ್ಕಾರ ಸರಿಯಾದ ಪ್ಯಾಕೇಜ್ ಘೋಷಿಸಿಲ್ಲ. ಲಾಕ್ ಡೌನ್ ಮುಂದುವರೆಸಿದರೆ ಪ್ರತಿ ಕುಟುಂಬಕ್ಕೂ 10 ಸಾವಿರ ರೂ. ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರ ಸೋಂಕು ಹರಡುವಿಕೆ ತಡೆಯುವಲ್ಲಿ ಪೂರ್ಣ ವಿಫಲವಾಗಿದೆ.

ಕೊರೊನಾ 2ನೇ ಅಲೆಯ ತೀವ್ರತೆ ಕುರಿತು ತಜ್ಞರು ನೀಡಿದ್ದ ಎಚ್ಚರಿಕೆಯನ್ನು ಸರ್ಕಾರ ಗಂಭೀರ ವಾಗಿ ಪರಿಗಣಿಸಿಲ್ಲ. ಸಂಪುಟ ಸಭೆಯಲ್ಲಿ ನಿಮ್ಮಿಷ್ಟದಂತೆ ತೀರ್ಮಾನ ಕೈಗೊಂಡ ಫಲ ಇಂದು ಸಾವಿರಾರು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಕಷ್ಟ ಅನು ಭವಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಆರೋಗ್ಯ ಖಾತೆಯನ್ನು ಇದೇ ಮೊದಲ ಬಾರಿಗೆ 5 ಭಾಗ ಮಾಡಿ ಹಂಚಲಾಗಿದೆ. ಕಂದಾಯ, ಗೃಹ ಖಾತೆಯವರು ಬೆಡ್ ಮಂತ್ರಿಗಳಾಗಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಯವರನ್ನು ಸ್ವಲ್ಪ ಅಲುಗಾಡಿಸಲೂ ನಿಮಗೆ ಆಗಲಿಲ್ಲ. ಆಕ್ಸಿಜನ್ ಮಿನಿಸ್ಟರಾದರೂ ಚೆÀನ್ನಾಗಿ ಕೆಲಸ ಮಾಡಿದರಾ? ಎಂದು ಪ್ರಶ್ನಿಸಿದ ವಿಶ್ವನಾಥ್, ಹೆಣಗಳ ಮೇಲೆ ಹಣ ಎತ್ತುವ ಕೆಲಸ ಮಾಡಬೇಡಿ ಎಂದು ಟೀಕಿಸಿದರು.

 

 

Translate »