ಮೈಸೂರು, ಮೇ 26(ಆರ್‍ಕೆ)- ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ ರುವ ಗ್ರಾಮಗಳಲ್ಲಿ ಮೈಕ್ರೊ ಕಂಟೈನ್ಮೆಂಟ್ ಜೋನ್ ಮಾಡಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೊರೊನಾ ನಿಯಂತ್ರಣ ಸಂಬಂಧ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಪಿಡಿಓಗಳೊಂದಿಗೆ ಸಭೆ ನಡೆಸಿದ ಮುಖ್ಯ ಮಂತ್ರಿಗಳು, ಸೋಂಕಿತರ ಸಂಖ್ಯೆ ಹೆಚ್ಚಾಗಿ ರುವ ಗ್ರಾಮಗಳಿಂದ ಯಾರೂ ಹೊರಗೆ ಬರದಂತೆ ಹಾಗೂ ಹೊರಗಿನವರು ಯಾರೂ ಗ್ರಾಮ ಪ್ರವೇಶಿಸದಂತೆ ನಿರ್ಬಂಧಿಸಿ ಎಂದು ಸೂಚನೆ ನೀಡಿದರು.
ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇ ರಿಯ ಕೆಸ್ವಾನ್ ಕೇಂದ್ರದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಶ ವರ್ಚುವಲ್ ಸಭೆಯಲ್ಲಿ ಪಾಲ್ಗೊಂ ಡರೆ, ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ರಮೇಶ, ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಾಗೂ ಪಿಡಿಓಗಳು ನಜರ್‍ಬಾದಿನ ಮಿನಿ ವಿಧಾನಸೌಧದಲ್ಲಿ ರುವ ತಾಲೂಕು ಪಂಚಾಯ್ತಿ ಇಓ ಕಚೇರಿ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಸಭೆಯ ಸಂಪರ್ಕಕ್ಕೆ ಬಂದಿದ್ದರು.
ಕಂಟೈನ್ಮೆಂಟ್ ಜೋನ್‍ಗೆ ಒಳಪಟ್ಟ ಗ್ರಾಮಗಳ ನಿವಾಸಿಗಳಿಗೆ ತರಕಾರಿ, ಹಾಲು, ಔಷಧಿ, ದಿನಸಿ ಮುಂತಾದ ಅಗತ್ಯ ವಸ್ತು ಗಳನ್ನು ಪೂರೈಸುವ ವ್ಯವಸ್ಥೆ ಮಾಡಿ, ಆಗಿಂ ದಾಗ್ಗೆ ಆರೋಗ್ಯ ತಪಾಸಣೆ, ಸ್ಯಾನಿಟೈ ಸೇಷನ್ ಮಾಡಿಸಿ ಸ್ವಚ್ಛತೆ ಕಾಪಾಡಿ ಎಂದೂ ಸಿಎಂ ನಿರ್ದೇಶನ ನೀಡಿದರು.
ಗ್ರಾಮಗಳಲ್ಲಿ ಜಾತ್ರೆ, ಸಂತೆ, ಹಬ್ಬ, ಮದುವೆ ಸಮಾರಂಭ ನಡೆಸದಂತೆ ನೋಡಿಕೊಳ್ಳಿ, ಅನಗತ್ಯವಾಗಿ ಓಡಾಡುವುದು, ಗುಂಪು ಸೇರುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿ ಸೋಂಕು ಹರಡದಂತೆ ನೋಡಿಕೊಳ್ಳಿ ಎಂದೂ ಸೂಚನೆ ನೀಡಿದರು. ವರುಣಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಜೇಶ ಅವ ರಿಗೆ ಸರದಿಯಲ್ಲಿ ಸಿಎಂ ಜತೆ ಮಾತನಾ ಡುವ ಅವಕಾಶ ಸಿಕ್ಕಿತ್ತು. ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಒಟ್ಟು ಪಾಸಿಟಿವ್, ಆಕ್ಟಿವ್ ಪ್ರಕರಣ, ಸಾವಿನ ಸಂಖ್ಯೆ, ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ರಾಜೇಶ್ ಮಾಹಿತಿ ನೀಡಿದರು.
¸
À್ಥಳೀಯ ಜನಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸಿ ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಕ್ರಮ ವಹಿಸಬೇಕು, ಹೋಂ ಐಸೊಲೇಷನ್‍ನಲ್ಲಿ ಇರುವವರ ಮೇಲೆ ನಿಗಾ ಇರಿಸಿ ಅಗತ್ಯ ಔಷಧೋಪಚಾರ ಮಾಡಬೇಕು, ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರುವವರಿಗೆ ಆಹಾರ, ದಿನಸಿ ಕಿಟ್‍ಗಳನ್ನು ತಲುಪಿಸಿ ಎಂದು ಸಲಹೆ ನೀಡಿದರು. ರೋಗ ಲಕ್ಷಣಗಳು ಕಂಡುಬಂದ ವರಿಗೆ ಮಾತ್ರ ಕೋವಿಡ್ ಟೆಸ್ಟ್ ಮಾಡಿಸಿ, ಲಸಿಕಾ ಅಭಿಯಾನವನ್ನು ಅರ್ಹರಿಗೆ ಲಭ್ಯವಾಗು ವಂತೆ ನೋಡಿಕೊಳ್ಳಿ ಎಂದು ಸಿಎಂ ಸಲಹೆ ನೀಡಿದರು. ಮೈಸೂರು ತಾಲೂಕಿನಲ್ಲಿ 10 ಗ್ರಾಮ ಪಂಚಾಯ್ತಿಗಳನ್ನು ಸಿಎಂ ಜೊತೆ ಸಂವಾದಕ್ಕೆ ಆಯ್ಕೆ ಮಾಡಲಾಗಿತ್ತಾದರೂ, ವರುಣ ಗ್ರಾಪಂ ಅಧ್ಯಕ್ಷರಿಗಷ್ಟೇ ಮಾತನಾಡಲು ಅವಕಾಶವಾಯಿತು.