ಆಹಾರವಿಲ್ಲದೆ ಬಳಲುತ್ತಿವೆ ಬೀದಿ ನಾಯಿಗಳು
ಮೈಸೂರು

ಆಹಾರವಿಲ್ಲದೆ ಬಳಲುತ್ತಿವೆ ಬೀದಿ ನಾಯಿಗಳು

April 4, 2020

ಮೈಸೂರು, ಏ.3(ಆರ್‍ಕೆ)- ಕೋವಿಡ್-19 ಮಹಾಮಾರಿ ಸೋಂಕು ನಿಯಂ ತ್ರಿಸಲು ದೇಶವನ್ನೇ ಲಾಕ್‍ಡೌನ್ ಮಾಡಿ ರುವುದರಿಂದ ಜನ ಜೀವನವಷ್ಟೇ ಅಲ್ಲದೆ, ಬೀದಿ ನಾಯಿಗಳೂ ಆಹಾರವಿಲ್ಲದೇ ಬಳ ಲುತ್ತಿವೆ. ಬಡವರು, ನಿರ್ಗತಿಕರು, ನಿರಾ ಶ್ರಿತರಿಗೆ ಜಿಲ್ಲಾಡಳಿತ, ಸಂಘ-ಸಂಸ್ಥೆಗಳು, ಸ್ವಯಂ ಸೇವಕರು ಆಹಾರ, ನೀರು, ದಿನಸಿ ಪದಾರ್ಥಗಳನ್ನು ಪೂರೈಸುತ್ತಿರುವುದ ರಿಂದ ಜನರು ಹೇಗೋ ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಅನ್ನ-ನೀರು ಸಿಗದವರು ಅಲ್ಲಿ-ಇಲ್ಲಿ ಬೇಡಿ ಹೊಟ್ಟೆ ತುಂಬಿಸಿ ಕೊಳ್ಳುತ್ತಾರೆ. ಆದರೆ ಮೂಕ ಪ್ರಾಣಿಗಳು ಏನು ಮಾಡಬೇಕು. ಅದರಲ್ಲೂ ಬೀದಿ ನಾಯಿಗಳ ಪಾಡಂತೂ ತುಂಬಾ ದಯ ನೀಯವಾಗಿದೆ.

ರಸ್ತೆ ಬದಿ ಹೋಟೆಲ್‍ಗಳು, ಚಾಟ್ಸ್ ಅಂಗಡಿ, ಮಟನ್, ಚಿಕನ್ ಅಂಗಡಿ, ಕೆಲ ಹೋಟೆಲ್ ಸಮೀಪ ಸಿಕ್ಕಿದ ಚೂರು-ಪಾರು ತಿಂಡಿ-ತಿನಿಸು ತಿಂದು ಚರಂಡಿಗಳು, ಸಣ್ಣ ಪುಟ್ಟ ಮ್ಯಾನ್‍ಹೋಲ್ ಬಳಿ ನಿಂತ ನೀರನ್ನು ಕುಡಿದು ಹೇಗೋ ಬದು ಕುತ್ತಿದ್ದ ನಾಯಿಗಳಿಗೀಗ ಬೀದಿಯಲ್ಲಿ ಯಾವುದೇ ಆಹಾರ ಅಂಗಡಿಗಳು ತೆರೆದಿಲ್ಲವಾದ್ದರಿಂದ ಹಸಿವು, ದಾಹ ದಿಂದ ಬಳಲಿ, ನಿತ್ರಾಣಗೊಂಡು ಮಲಗುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ. ರೋಗಗ್ರಸ್ಥ ಹಾಗೂ ದೈಹಿಕವಾಗಿ ಕ್ಷೀಣಿಸಿರುವ ನಾಯಿಗಳಂತೂ ಆಹಾರ, ಚಿಕಿತ್ಸೆ ಇಲ್ಲದೆ ಬಳಲಿ ಪ್ರಾಣ ಬಿಡುತ್ತಿವೆ. ಲಾಕ್‍ಡೌನ್ ಆದ ನಂತರ ಕಂಗಾಲಾಗಿರುವ ಬೀದಿ ನಾಯಿಗಳು ರಸ್ತೆಗಳಲ್ಲಿ ವಿರಳವಾಗಿ ಕಾಣಿಸಿಕೊಳ್ಳುತ್ತಿವೆ. ಎಲ್ಲೆಂದರಲ್ಲಿ  10-15 ಗುಂಪಾಗಿರುತ್ತಿದ್ದವು. ಆದರೀಗ ಅಲ್ಲೊಂದು-ಇಲ್ಲೊಂದು ಸೊರಗಿದಂತಾಗಿರುವ ಬೀದಿ ನಾಯಿಗಳು ನಿತ್ರಾಣಗೊಂಡು ಮಲಗಿರುವುದು ಕಂಡು ಬರುತ್ತಿದೆ.

ಕೆಲವು ಪ್ರಾಣಿ ಪ್ರಿಯರು ಕಾರಿನಲ್ಲಿ ಬಂದು ನಾಯಿಗಳಿಗೆ ಬಿಸ್ಕತ್, ಬ್ರೆಡ್ ಹಾಕುತ್ತಿದ್ದಾರೆ. ಆದರೆ ಅವುಗಳಿಗೆ ಬೇಕಾದಷ್ಟು ಆಹಾರ ಸಿಗುತ್ತಿಲ್ಲ. ಒಮ್ಮೆ ಬಿಸ್ಕತ್ ತಿಂದ ನಾಯಿಗಳು ಮತ್ತೆ ಅದೇ ಜಾಗದಲ್ಲಿ ಕಾಯುತ್ತಿರುತ್ತವೆ. ಆದರೆ ಯಾರೂ ಬರುವುದಿಲ್ಲ. ಪಶುಪಾಲನಾ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಪೀಪಲ್ಸ್ ಫಾರ್ ಅನಿಮಲ್ಸ್ (Pಈಂ) ಅಥವಾ ಸಂಘ-ಸಂಸ್ಥೆಯವರು ಈ ತುರ್ತು ಪರಿಸ್ಥಿತಿಯಲ್ಲಿ ಬೀದಿ ನಾಯಿಗಳಿಗೆ ಆಹಾರ ಒದಗಿಸುವ ಕಾರ್ಯ ಮಾಡಿದಲ್ಲಿ ಈ ಮೂಕ ಪ್ರಾಣಿಗಳೂ ಜೀವ ಉಳಿಸಿಕೊಳ್ಳುತ್ತವೆ. ಸ್ವಲ್ಪ ಕಾಲವಾದರೂ ಅವು ನಮ್ಮೊಂದಿಗೆ ಬದುಕಬಲ್ಲವು.

 

Translate »