ಮೈಸೂರು, ಏ. 3- ಕೊರೊನಾ ಹರಡದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅವಶ್ಯವಾಗಿದ್ದು, ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಸೂಚಿಸಿದರು.
ಶುಕ್ರವಾರ ಅವರು ಶ್ರೀರಾಂಪುರ ಗ್ರಾಮ ಪಂಚಾ ಯಿತಿ ಪರಸಯ್ಯನಹುಂಡಿ ಗ್ರಾಮದಲ್ಲಿ ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಮುಡಾ ವತಿಯಿಂದ ಅಗ್ನಿಶಾಮಕ ದಳದವರ ಸಹಯೋಗದೊಂದಿಗೆ ರಸಾ ಯನಿಕ ಸಿಂಪಡಿಸಲು ಚಾಲನೆ ನೀಡಿ ಮಾತನಾಡಿದರು.
ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ಎಲ್ಲಾ ಹಳ್ಳಿಗಳಿಗೆ ಔಷಧಿಯನ್ನು ಸಿಂಪಡಿಸಲು ಕ್ರಮ ಕೈಗೊಳ್ಳಲಾಗಿದೆ, ಅದೇ ರೀತಿಯಾಗಿ ಪ್ರಾಧಿಕಾರದ ಸಹಯೋಗದೊಂದಿಗೆ ಕೊಪ್ಪಲೂರು, ಗೆಜ್ಜಗಳ್ಳಿ, ಬಂಡಿ ಪಾಳ್ಯ, ಹೊಸಹುಂಡಿ, ಭವಾನಿ ಲೇಔಟ್, ಟೀಚರ್ಸ್ ಲೇಔಟ್, ಶ್ರೀನಗರ, ಮಹದೇವಪುರ ರಮಾ ಬಾಯಿನಗರಕ್ಕೆ ಸಿಂಪಡಿಸಲಾಗಿದ್ದು, ಇಂದು ಶ್ರೀರಾಂ ಪುರ, ಗುರೂರು, ಪರಸಯ್ಯನಹುಂಡಿ, ಆಲನಹಳ್ಳಿ, ಲಿಂಗಾಬೂದಿಪಾಳ್ಯ, ಮೈಸೂರು ವಿ.ವಿ.ನೌಕರರ ಬಡಾವಣೆಗೆ ಸಿಂಪಡಿಸಲಾಗುವುದು ಎಂದರು.
ಸಿಂಧುವಳ್ಳಿ, ದೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಈಗಾಗಲೇ ಔಷಧಿಯನ್ನು ಸಿಂಪಡಿಸು ತ್ತಿದ್ದು, ಉಳಿದ ಗ್ರಾಮಗಳಿಗೆ ಕೂಡಲೇ ಔಷಧಿ ಸಿಂಪಡಿಸಲು ಕ್ರಮ ಕೈಗೊಳ್ಳಲಾಗುವುದು.
ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದು ಕೊಂಡು ಆಹಾರ ಪದಾರ್ಥಗಳನ್ನು ಪಡೆದುಕೊಳ್ಳ ಬೇಕು. ನ್ಯಾಯಬೆಲೆ ಅಂಗಡಿಗಳಿಂದ ಅಂತ್ಯೋ ದಯ, ಬಿ.ಪಿ.ಎಲ್, ಎ.ಪಿ.ಎಲ್. ಕಾರ್ಡ್‍ದಾರರಿಗೆ ಪ್ರತಿ ಮನೆಗಳಿಗೆ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳ ಲಾಗಿದ್ದು, ಅಂತ್ಯೋದಯ, ಬಿ.ಪಿ.ಎಲ್ ಎ.ಪಿ.ಎಲ್. ಕಾರ್ಡ್ ಇಲ್ಲದೆ ಇರುವಂತಹವರನ್ನು ಪಟ್ಟಿ ಮಾಡಲು ಸೂಚಿಸಲಾಗಿದೆ. ಅವರುಗಳಿಗೂ ಪಡಿತರ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕ್ಷೇತ್ರದಲ್ಲಿ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ, ಕೋವಿಡ್ -19 ತಡೆಗಟ್ಟುವ ಬಗ್ಗೆ ಸಾಮಾಜಿಕ ಅಂತರ ಮತ್ತು ಜಾಗೃತಿ ಮೂಡಿಸಲಾಗುತ್ತಿದೆ. ಮೈಕ್ ಮೂಲಕ ಪ್ರಚಾರ ಮಾಡಲು, ಗ್ರಾಮಗಳಲ್ಲಿ ಗುಂಪುಗಳನ್ನು ಚದುರಿಸಲು ಹಾಗೂ ಗೃಹೋಪಯೋಗಿ ಪದಾರ್ಥಗಳ ಮಾರಾ ಟದ ಅಂಗಡಿ ಮುಂಗಟ್ಟುಗಳ, ಮೆಡಿಕಲ್ ಸ್ಟೋರ್, ತರಕಾರಿ ಅಂಗಡಿಗಳಲ್ಲಿ ಅಂತರ ಕಾಯ್ದುಕೊಳ್ಳುವಂತೆ ಅರಿವು ಮೂಡಿಸಲು 12 ಗ್ರಾಮಾಂತರ ಕಮಾಂಡೋ ತಂಡಗಳನ್ನು ರಚಿಸಲಾಗಿದೆ. ಈಗಾಗಲೇ ಈ ತಂಡ ಗಳು ಕಾರ್ಯಪ್ರವೃತ್ತವಾಗಿವೆ ಎಂದರು.
ಸಾರ್ವಜನಿಕರು ಮನೆಯಿಂದ ಹೊರ ಬರದೆ ಮನೆಯಲ್ಲೇ ಇದ್ದು, ಕೊರೊನಾ ವೈರಸ್ ತಡೆಗಟ್ಟಲು ಸಹಕರಿಸುವಂತೆ ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಮಾದೇಗೌಡ, ಮುಡಾ ಆಯುಕ್ತ ಕಾಂತರಾಜು, ಗ್ರಾಮಪಂಚಾಯಿತಿ ಅಧ್ಯಕ್ಷೆ ಚೂಡಾಮಣಿ, ಉಪಾಧ್ಯಕ್ಷೆ ಉಷಾ ಸತೀಶ್, ಸದಸ್ಯರಾದ ಪರಸಯ್ಯನಹುಂಡಿ ಸುರೇಶ್, ತಹಶೀ ಲ್ದಾರ್ ರಕ್ಷಿತ್, ಇ.ಒ.ಕೃಷ್ಣಕುಮಾರ್ ಎ.ಇ.ಇ. ಭಾಸ್ಕರ್, ಎ.ಇ.ಲೋಕೇಶ್ ಸೇರಿದಂತೆ ಅಧಿಕಾರಿಗಳು ಇದ್ದರು.