ಶಾರದಾದೇವಿನಗರದಲ್ಲಿ ಬಿಜೆಪಿಯಿಂದ ದಿನಸಿ ವಿತರಣೆ
ಮೈಸೂರು

ಶಾರದಾದೇವಿನಗರದಲ್ಲಿ ಬಿಜೆಪಿಯಿಂದ ದಿನಸಿ ವಿತರಣೆ

April 4, 2020

ಮೈಸೂರು,ಏ.3(ವೈಡಿಎಸ್)-ಲಾಕ್‍ಡೌನ್ ಪರಿಣಾಮ ಬಹಳ ಸಂಕಷ್ಟಕ್ಕೆ ಸಿಲುಕಿ ರುವ ಚಾಮುಂಡೇಶ್ವರಿ ಕ್ಷೇತ್ರದ ಬಡಜನರನ್ನು ಗುರುತಿಸಿ, ಬಿಜೆಪಿ ಚಾಮುಂಡೇಶ್ವರಿ (ನಗರ) ಮಂಡಲ ವತಿಯಿಂದ ದಿನಸಿ, ತರಕಾರಿಗಳನ್ನು ಶುಕ್ರವಾರ ವಿತರಿಸಲಾಯಿತು.

ಲಾಕ್‍ಡೌನ್ ಹಿನ್ನೆಲೆ ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ಶಾರದಾದೇವಿ ನಗರ ಮತ್ತು ಸುತ್ತಮುತ್ತಲಿನ 100 ಜನರಿಗೆ 5 ಕೆಜಿ ಅಕ್ಕಿ, 1 ಕೆಜಿ ಬೇಳೆ, ಎಣ್ಣೆ, ಉಪ್ಪು, ಸಕ್ಕರೆ, ಟೀಪುಡಿ, ರವೆ, ಸೋಪು, ಈರುಳ್ಳಿ, ಆಲೂಗೆಡ್ಡೆ, ಟೊಮೆಟೊ ಮೊದಲಾದ ದಿನಸಿ ಪದಾರ್ಥಗಳ ಕಿಟ್‍ಗಳನ್ನು ವಿತರಿಸಲಾಯಿತು. ಜತೆಗೆ 300 ಮಂದಿಗೆ ತರಕಾರಿ ನೀಡಲಾಯಿತು. ಈ ವೇಳೆ ಮಂಡಲದ ಅಧ್ಯಕ್ಷ ಬಿ.ಎಂ.ರಘು ಮಾತನಾಡಿ, ಮಾ.5ರ ರಾತ್ರಿ 9 ಗಂಟೆಗೆ ಪ್ರತಿಮನೆಯಲ್ಲಿಯೂ ದೀಪ ಬೆಳಗಿಸುವ ಮೂಲಕ ಪ್ರಧಾನಿಗಳ ಕರೆಯನ್ನು ಬೆಂಬಲಿಸುವಂತೆ ಕೋರಿದರು. ಕಾರ್ಯದರ್ಶಿ ರಾಜಮಣಿ, ಉಪಾಧ್ಯಕ್ಷ ಸಿದ್ದೇಶ್, ಕಾರ್ಯಾಲಯ ಕಾರ್ಯದರ್ಶಿ ಬಿ.ಸಿ.ಶಶಿಕಾಂತ್, ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಭಟ್, ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಸುಜೀತ್, ಶುಭಾಶ್ರೀ, ರಾಜಪ್ಪಾಜಿ, ಗಿರೀಶ್, ರೇವಣ್ಣ, ಎಸ್‍ಟಿ ಮೋರ್ಚಾ ಅಧ್ಯಕ್ಷ ಬೆಟ್ಟ, ಅಭಿಗೌಡ ಮತ್ತಿತರರಿದ್ದರು.