ಪತ್ನಿ ಪೀಡಿಸಿದ ಬೀದಿ ಕಾಮಣ್ಣನಿಗೆ ಪತಿಯಿಂದ ಗೂಸಾ
ಮೈಸೂರು

ಪತ್ನಿ ಪೀಡಿಸಿದ ಬೀದಿ ಕಾಮಣ್ಣನಿಗೆ ಪತಿಯಿಂದ ಗೂಸಾ

September 11, 2018

ಮೈಸೂರು: ತನ್ನ ಪತ್ನಿಗೆ ರೇಗಿಸಿದ ಬೀದಿಕಾಮಣ್ಣನಿಗೆ ಪತಿ ಗೂಸಾ ನೀಡಿ, ಮೇಟಗಳ್ಳಿ ಠಾಣಾ ಪೊಲೀಸರಿಗೆ ಒಪ್ಪಿಸಿರುವ ಘಟನೆ ಮೈಸೂರಿನ ಬೃಂದಾವನ ಬಡಾವಣೆ ಯಲ್ಲಿ ಸೋಮವಾರ ನಡೆದಿದೆ. ಮಂಜು ಎಂಬಾತ ಗೃಹಿಣಿಯನ್ನು ಕೆಣಕಿ ಗೂಸಾ ತಿಂದ ಬೀದಿ ಕಾಮಣ್ಣ. ಕೆಆರ್‍ಎಸ್ ರಸ್ತೆಯಲ್ಲಿರುವ ಕಲ್ಯಾಣಮಂಟಪವೊಂದ ರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ, ಕೆಲಸ ಮುಗಿಸಿ ಸಂಜೆ ವೇಳೆ ಮನೆಗೆ ವಾಪಸಾಗುತ್ತಿದ್ದಾಗ ಮಂಜು ಕಳೆದ ನಾಲ್ಕೈದು ದಿನದಿಂದ ಹಿಂಬಾಲಿಸಿ, ರೇಗಿಸಿದ್ದಾನೆ. ಈ ವರ್ತನೆ ಇಂದು ಸಹ ಮುಂದುವರೆದಿದೆ. ಈ ಘಟನೆ ಯಿಂದ ವಿಚಲಿತರಾದ ಗೃಹಿಣಿ, ಈ ಬಗ್ಗೆ ತನ್ನ ಪತಿ ರಮೇಶ್‍ಗೌಡನಿಗೆ ವಿಷಯ ಮುಟ್ಟಿಸಿದ್ದಾರೆ. ಪತ್ನಿಯ ಮಾಹಿತಿ ಮೇರೆಗೆ ಆರೋಪಿ ಮಂಜುನನ್ನು, ರಮೇಶ್‍ಗೌಡ ಹಿಂಬಾಲಿಸಿ, ಬೃಂದಾವನ ಬಡಾವಣೆ ಬಳಿ ಮಂಜುವಿಗೆ ಗೂಸ ನೀಡಿದ್ದಾರೆ. ಇವರ ಜೊತೆಗೆ ಪತ್ನಿಯೂ ಕೈ ಜೋಡಿಸಿ ದ್ದಾರೆ. ತದನಂತರ ಮೇಟಗಳ್ಳಿ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿ, ದೂರು ನೀಡಿದ್ದಾರೆ.

Translate »