ಕಲಾಪ ಬಹಿಷ್ಕರಿಸಿ ಭಾರತ್ ಬಂದ್‍ಗೆ ಮೈಸೂರು ವಕೀಲರ ಬೆಂಬಲ
ಮೈಸೂರು

ಕಲಾಪ ಬಹಿಷ್ಕರಿಸಿ ಭಾರತ್ ಬಂದ್‍ಗೆ ಮೈಸೂರು ವಕೀಲರ ಬೆಂಬಲ

September 11, 2018

ಮೈಸೂರು: ಸೋಮವಾರ ಮೈಸೂರಿನ ವಕೀಲರು ನ್ಯಾಯಾಲಯದ ಕಲಾಪವನ್ನು ಬಹಿಷ್ಕ ರಿಸಿ, ಭಾರತ್ ಬಂದ್ ಬೆಂಬಲಿಸಿದರು.

ತೈಲ ಹಾಗೂ ಅಡುಗೆ ಅನಿಲ ಬೆಲೆ ಹೆಚ್ಚಳ ವಿರೋಧಿಸಿ ಬಂದ್ ನಡೆಸಿದ ಪರಿಣಾಮ ಇಂದು ಬೆಳಿಗ್ಗೆ ಮೈಸೂರಿನ ವಕೀಲರ ಸಂಘದ ಅಧ್ಯಕ್ಷ ರಾಮಮೂರ್ತಿ ಅಧ್ಯಕ್ಷತೆಯಲ್ಲಿ ವಕೀಲರ ಸಂಘದ ಆವ ರಣದಲ್ಲಿ ವಿಶೇಷ ಸಭೆ ನಡೆಸಿದ ವಕೀ ಲರು, ಇಂದು ಕಲಾಪದಿಂದ ದೂರ ಉಳಿಯುವ ಮೂಲಕ ಭಾರತ್ ಬಂದ್‍ಗೆ ನೈತಿಕ ಬೆಂಬಲ ನೀಡಲು ನಿರ್ಧರಿಸಿ ದರು. ಇದರಿಂದ ಇಂದು ಮೈಸೂರಿನ ಎಲ್ಲಾ ನ್ಯಾಯಾಲಯದಲ್ಲಿ ಯಾವುದೇ ಕಲಾಪಗಳು ನಡೆಯಲಿಲ್ಲ. ನಡೆಯ ಬೇಕಾಗಿದ್ದ ವಿವಿಧ ಪ್ರಕರಣಗಳ ವಿಚಾರಣೆ ಗಳು ಮುಂದೂಡಿದ ಪರಿಣಾಮ ಕಕ್ಷಿದಾರರು ಪರದಾಡುವಂತಾಯಿತು.

ಕಲಾಪ ಬಹಿಷ್ಕಾರ ನಂತರ ಮೈಸೂ ರಿನ ವಕೀಲರ ಸಂಘದ ಅಧ್ಯಕ್ಷ ರಾಮ ಮೂರ್ತಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ನಮ್ಮ ಸಂಘ ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುವುದ ಕ್ಕಾಗಿ ಕಲಾಪ ಬಹಿಷ್ಕರಿಸಲು ನಿರ್ಧರಿ ಸಿಲ್ಲ. ತೈಲ ಹಾಗೂ ಅಡುಗೆ ಅನಿಲದ ಬೆಲೆ ಹೆಚ್ಚಳದಿಂದ ಜನ ಸಾಮಾನ್ಯರು ತೊಂದರೆಗೀಡಾಗಿರುವುದರಿಂದ ಬಂದ್‍ಗೆ ಬೆಂಬಲ ನೀಡಿ ಕಲಾಪದಿಂದ ದೂರವುಳಿದಿದ್ದೇವೆ. ಸಂಘದ ಸದಸ್ಯರು ಯಾವುದೇ ಪ್ರತಿಭಟನೆಯಲ್ಲಿ ಪಾಲ್ಗೊ ಳ್ಳದೆ, ಬಂದ್‍ಗೆ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.

Translate »