ಸುಪ್ರೀಂಕೋರ್ಟ್‍ಗೆ ವಿದ್ಯಾರ್ಥಿನಿ ಮೇಲ್ಮನವಿ
News

ಸುಪ್ರೀಂಕೋರ್ಟ್‍ಗೆ ವಿದ್ಯಾರ್ಥಿನಿ ಮೇಲ್ಮನವಿ

March 16, 2022

ನವದೆಹಲಿ, ಮಾ. 15- ಶಿಕ್ಷಣ ಸಂಸ್ಥೆ ಗಳಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಕೆ ಯಾಗಿದ್ದ ವಿವಿಧ ಅರ್ಜಿಗಳನ್ನು ವಜಾಗೊಳಿ ಸಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ನಿಬಾ ನಾಜ್ ಎಂಬ ಮುಸ್ಲಿಂ ಸಮು ದಾಯದ ವಿದ್ಯಾರ್ಥಿನಿ, ವಕೀಲ ಅನಸ್ ತನ್ವೀರ್ ಅವರ ಮೂಲಕ ಸುಪ್ರೀಂಕೋರ್ಟ್‍ಗೆ ವಿಶೇಷ ಮೇಲ್ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ಶಿಕ್ಷಣ ಕಾಯಿದೆಯು ಕಾಲೇಜು ಗಳಲ್ಲಿ ಸಮವಸ್ತ್ರವನ್ನು ಕಡ್ಡಾಯಗೊಳಿಸುವು ದಿಲ್ಲ. ಹಿಜಾಬ್ ಅಗತ್ಯದ ಆಚರಣೆಯಲ್ಲ ಎಂದು ಆದೇಶವನ್ನು ಹೊರಡಿಸಲು ಸರ್ಕಾರಕ್ಕೆ ಯಾವುದೇ ಅಧಿಕಾರವನ್ನು ನೀಡುವುದಿಲ್ಲ.

ಹಿಜಾಬ್ ಧರಿಸುವ ಹಕ್ಕನ್ನು ಸಂವಿಧಾನದ 25ನೇ ವಿಧಿಯಡಿಯಲ್ಲಿ ಆತ್ಮಸಾಕ್ಷಿಯ ಹಕ್ಕಿನ ಭಾಗವಾಗಿ ರಕ್ಷಿಸಲಾಗಿದೆ ಎಂಬುದನ್ನು ಗಮನಿಸು ವಲ್ಲಿ ಹೈಕೋರ್ಟ್ ವಿಫಲವಾಗಿದೆ. ಆತ್ಮಸಾಕ್ಷಿಯ ಹಕ್ಕು ಮೂಲಭೂತವಾಗಿ ವೈಯಕ್ತಿಕ ಹಕ್ಕಾಗಿದೆ.

ಭಾರತೀಯ ಕಾನೂನು ವ್ಯವಸ್ಥೆಯು ಧಾರ್ಮಿಕ ಚಿಹ್ನೆಗಳನ್ನು ಧರಿಸುವುದು, ಕೊಂಡೊಯ್ಯು ವುದನ್ನು ಸ್ಪಷ್ಟವಾಗಿ ಗುರುತಿಸುತ್ತದೆ ಎಂಬುದನ್ನು ಗಮನಿಸುವಲ್ಲೂ ಹೈಕೋರ್ಟ್ ವಿಫಲವಾಗಿದೆ. ಮೋಟಾರು ವಾಹನ ಕಾಯಿದೆ 1988 ರ ಸೆಕ್ಷನ್ 129ರ ಪ್ರಕಾರ, ಪೇಟ ಧರಿಸಿದ ಸಿಖ್ಖರು ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ ನೀಡಿರುವುದು ಗಮನಿಸಬೇಕಾದ ಅಂಶವಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯದ ನಿಯಮಗಳ ಅಡಿಯಲ್ಲಿ ಸಿಖ್ಖರು ಕಿರ್ಪಾನ್‍ಗಳನ್ನು ವಿಮಾನ ದಲ್ಲಿ ಸಾಗಿಸಲು ಅನುಮತಿಸಲಾಗಿದೆ.

ಹಿಜಾಬ್ ಧರಿಸುವ ಹಕ್ಕು ‘ಅಭಿವ್ಯಕ್ತಿ’ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಸಂವಿಧಾನದ 19(1)(ಎ) ಪರಿಚ್ಛೇದದ ಅಡಿಯಲ್ಲಿ

ರಕ್ಷಿಸಲಾಗಿದೆ ಎಂಬುದನ್ನು ಗಮನಿಸುವಲ್ಲೂ ಹೈಕೋರ್ಟ್ ವಿಫಲವಾಗಿದೆ. ಸಮವಸ್ತ್ರಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಶಿಕ್ಷಣ ಕಾಯಿದೆ, 1983 ಮತ್ತು ಅದರ ಅಡಿಯಲ್ಲಿ ರಚಿಸಲಾದ ನಿಯಮಗಳು, ವಿದ್ಯಾರ್ಥಿಗಳು ಧರಿಸಲು ಯಾವುದೇ ಕಡ್ಡಾಯ ಸಮವಸ್ತ್ರವನ್ನು ಒದಗಿಸುವುದಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸುವ ಗೂಂಡಾ ಗಳನ್ನು ನಿಯಂತ್ರಿಸುವಲ್ಲಿ ರಾಜ್ಯ ವಿಫಲವಾಗಿದ್ದು, ಸಮಸ್ಯೆಯನ್ನು ಪರಿಹರಿಸುವಲ್ಲಿಯೂ ಹೈಕೋರ್ಟ್ ವಿಫಲವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

Translate »