ಕೂಡಲ ಸಂಗಮದಲ್ಲಿ ಬಸವಣ್ಣನ ವಿವಿ ಸ್ಥಾಪನೆ ಸೂಕ್ತ
ಮೈಸೂರು

ಕೂಡಲ ಸಂಗಮದಲ್ಲಿ ಬಸವಣ್ಣನ ವಿವಿ ಸ್ಥಾಪನೆ ಸೂಕ್ತ

May 4, 2022

ಮೈಸೂರು,ಮೇ 3(ಎಂಟಿವೈ)- 12ನೇ ಶತಮಾನದಲ್ಲಿ ಅಸ್ಪøಶ್ಯತೆ ತೊಡೆದು ಹಾಕಲು ದೊಡ್ಡ ಕ್ರಾಂತಿ ಮಾಡಿದ ಬಸವಣ್ಣನವರ ಹೆಸರನ್ನು ಯಾವುದಾದರೂ ವಿಶ್ವ ವಿದ್ಯಾನಿಲಯಕ್ಕೆ ನಾಮಕರಣ ಮಾಡುವಂತೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಒತ್ತಾಯಿಸಿದ್ದಾರೆ.

ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಖಿಲ ಭಾರತ ವೀರ ಶೈವ-ಲಿಂಗಾಯತ ಮಹಾಸಭಾ ಹಾಗೂ ವಿವಿಧ ಬಸವ ಬಳಗಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರ ತತ್ವ ಸಂದೇಶ
ಸರ್ವ ಕಾಲಕ್ಕೂ ಪ್ರಸ್ತುತ. ವಿಜ್ಞಾನ, ತಂತ್ರಜ್ಞಾನ ಮುಂದುವರೆದಿರುವ ಈ ಕಾಲದಲ್ಲೂ ಅಸ್ಪøಶ್ಯತೆ ಆವರಿಸಿ, ಆದರೆ 12ನೇ ಶತ ಮಾನದಲ್ಲಿಯೇ ಶೋಷಿತ ಸಮುದಾಯ ಗಳು ಅನುಭವಿಸುತ್ತಿದ್ದ ಅಸ್ಪøಶ್ಯತೆಯನ್ನು ನಿವಾರಿಸಲು ಬಸವಣ್ಣನವರ ಪ್ರಯತ್ನ ಅಮೋಘ. ಒಂದೆಡೆ ಬುದ್ಧ, ಬಸವ, ಮತ್ತೊಂದೆಡೆ ಡಾ.ಬಿ.ಆರ್.ಅಂಬೇಡ್ಕರ್ ಪ್ರಾತಃಸ್ಮರಣೀಯರಾಗಿದ್ದಾರೆ. ಈ ಮಹಾನ್ ನಾಯಕರು ಸಮಾನತೆಗಾಗಿ ದೊಡ್ಡ ಕ್ರಾಂತಿಯನ್ನೇ ಮಾಡಿ ಸಮ-ಸಮಾಜ, ಅಸ್ಪøಶ್ಯತೆ, ಮೇಲು-ಕೀಳು ವ್ಯವಸ್ಥೆ ತೊಡೆದು ಹಾಕಲು ಶ್ರಮಿಸಿದರು. ಹಾಗಾಗಿ ನಾನು ಪ್ರತಿದಿನ ಬೆಳಗ್ಗೆ ಈ ಇಬ್ಬರನ್ನು ಸ್ಮರಿಸುತ್ತೇನೆ ಎಂದರು.

ಬಸವಣ್ಣನವರು ಎಂದೆಂದಿಗೂ ಆದರ್ಶ ಎನಿಸುತ್ತಾರೆ. ರಾಜ್ಯ ಸರ್ಕಾರ ಹೊಸದಾಗಿ 9 ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಮುಂದಾಗಿದೆ. ಅವುಗಳಲ್ಲಿ ಒಂದು ವಿವಿಗೆ ಬಸವಣ್ಣನವರ ಹೆಸರಿಡಬೇಕು. ಆ ಮೂಲಕ ವಿದ್ಯಾರ್ಥಿಗಳಿಗೆ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಮನವರಿಕೆ ಮಾಡಿಕೊಡಬೇಕು. ಬಸವಣ್ಣ ಹೆಸರಿನಲ್ಲಿ ವಿವಿ ಸ್ಥಾಪಿಸಲು ಕೂಡಲ ಸಂಗಮ ಪ್ರಾಶಸ್ತವಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನಸ್ಸು ಮಾಡಬೇಕು. ಬಸವ ತತ್ವಗಳ ಬಗ್ಗೆ ನಾವು ಭಾಷಣ ಮಾಡಿದರೆ ಪ್ರಯೋಜನ ವಾಗದು. ಬಸವಣ್ಣನವರ ವಚನಗಳು ಸದಾ ಕಾಲ ಜನರಲ್ಲಿ ಜಾಗೃತಿ ಮೂಡಿಸುವಂತೆ ಮಾಡುವ ಕಾರ್ಯಕ್ರಮಗಳನ್ನು ರೂಪಿಸಲು ವಿವಿ ಸ್ಥಾಪನೆ ಅಗತ್ಯವಿದೆ. ಚಾಮರಾಜ ನಗರದಲ್ಲಿ ಅಂಬೇಡ್ಕರ್ ವಿವಿ, ಕೊಡ ಗಿನಲ್ಲಿ ಕ್ರೀಡಾ ವಿವಿ, ಹಾಗೆಯೇ ಬಾಗಲಕೋಟೆಯಲ್ಲಿ ಬಸವಣ್ಣ ವಿವಿ ಸ್ಥಾಪಿಸಬೇಕು. ಈಗ ಆರಂಭವಾಗಿರುವ ಬಾಗಲಕೋಟೆ ತೋಟಗಾರಿಕೆ ವಿವಿಗೆ ಬಸವಣ್ಣ ಹೆಸರು ನಾಮಕರಣ ಮಾಡಬೇಕೆಂದು ಸಲಹೆ ನೀಡಿದರು.
ವೀರಶೈವ ಜಾತಿಯಲ್ಲ, ಧರ್ಮ: ವೀರಶೈವ ಜಾತಿ ಅಲ್ಲ, ಅದೊಂದು ಧರ್ಮ. ಬದುಕಿಗೆ ದಾರಿ ತೋರುವ, ಮೋಕ್ಷಕ್ಕೆ ಕೊಂಡೊ ಯ್ಯುವ ಬೇಕಾದ ಎಲ್ಲ ರೀತಿಯ ಚಿಂತನೆಗಳು ಬಸವಣ್ಣ ಪ್ರತಿಪಾದಿಸಿದ ಧರ್ಮದಲ್ಲಿದೆ. ಅದು ಮಾನವ ಧರ್ಮ. ಎಲ್ಲ ಜೀವಾತ್ಮಗಳ ಲೇಸನ್ನು ಬಯಸಿದ ಧರ್ಮ ಸಾಧಾರಣ ಅಲ್ಲ. ಇಡೀ ಜಗತ್ತಿನಲ್ಲೇ ದೊಡ್ಡ ಧರ್ಮ ಹೆಸರು ಪಡೆದಿದೆ ಎಂದರು.

ಜೈನ, ಸಿಖ್ ಧರ್ಮಗಳ ರೀತಿಯಲ್ಲಿ ಬಸವಣ್ಣ ಪ್ರತಿಪಾದಿಸಿದ ವೀರಶೈವ-ಲಿಂಗಾಯತ ಧರ್ಮ, ವೈದಿಕ ಧರ್ಮದ ವಿರುದ್ಧ ಸಿಡಿದೆದ್ದ ಧರ್ಮವಾಗಿದೆ. ಎಲ್ಲ ಜಾತಿಯ ಶರಣರು ಕಾಣಬಹುದಾದ ಯಾವುದಾದರೂ ಧರ್ಮ ಇದ್ದರೆ ಅದು ವೀರಶೈವ ಧರ್ಮ ಎಂದು ತಿಳಿಸಿದರು. ಸಪ್ತಸಾಗರಗಳನ್ನು ದಾಟಿ ಹೋಗಬೇಕಾದ ಧರ್ಮ ಇಲ್ಲೇ ಉಳಿದದ್ದು ವಿಷಾದವೆನಿಸುತ್ತದೆ. ಬಿಜ್ಜಳನ ಆಸ್ಥಾನ ತೊರೆದು ಬಂದ ಬಸ ವಣ್ಣ ಸಾಮಾನ್ಯರಂತೆ ಬದುಕಿದರು. ಈಗ ಕಿರೀಟ ಧರಿಸಿ ಕುದುರೆ ಮೇಲೆ ಕುಳಿತ ಬಸವಣ್ಣರ ಚಿತ್ರಗಳು ನೋವು ತರುತ್ತವೆ. ವೈದಿಕ ಧರ್ಮದಲ್ಲಿ ಹುಟ್ಟಿದರೂ ವೈದಿಕ ಧರ್ಮ ವ್ಯವಸ್ಥೆಯ ವಿರುದ್ಧ ಸಿಡಿದೆದ್ದರು. ಅವರ ವಚನ, ಸಾಹಿತ್ಯಗಳು ಚಿಂತನೆ ಮಾಡುವಂತದ್ದು ಎಂದರು.

ಶೋಷಿತ ಸಮುದಾಯಗಳ ಸ್ವಾಮೀಜಿ ಕಂಡ ಏಕೈಕ ಧರ್ಮ: ವೀರಶೈವ ಧರ್ಮ ಶೋಷಿತ ಸಮುದಾಯಗಳ ಸ್ವಾಮೀಜಿ ಗಳನ್ನು ಕಂಡಿರುವ ಏಕೈಕ ಧರ್ಮ. ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಹರಳಯ್ಯ ಸೇರಿದಂತೆ ಇನ್ನಿತರ ಶೋಷಿತ ಸಮು ದಾಯವನ್ನು ಪ್ರತಿನಿಧಿಸುವ ಶರಣರನ್ನು ವೀರಶೈವ ಧರ್ಮ ಕಂಡಿದೆ. ಚಪ್ಪಲಿ ಹೊಲಿಯುವ ಸಮುದಾಯದ ಶರಣ ರನ್ನು ಬಸವಣ್ಣನವರು ಬಹುವಚನದಿಂದ ಮಾತನಾಡಿಸಿದ್ದರು. ಇದರಿಂದಲೇ ಬಸ ವಣ್ಣನವರ ಚಿಂತನೆ ಏನಿತ್ತು ಎಂಬುದನ್ನು ಅರಿತುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಗಮನ ಸೆಳೆದ ಕ್ರಾಂತಿ ಯೋಗಿ ಆಲ್ಬಮ್: ಇದಕ್ಕೂ ಮುನ್ನ ಮಂಡ್ಯ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಧಿಕಾರಿ ಸೋಮ ಶೇಖರ್ ಎಸ್.ಜಿಗಣಿ ಅವರು ವಿದ್ವತ್ ಇನ್ನೋವೇಟಿವ್ ಸಲ್ಯೂಷನ್ಸ್ ಸಂಸ್ಥೆ ಯೊಂದಿಗೆ ನಿರ್ಮಿಸಿರುವ ಬಸವಣ್ಣ ಅವರ ಜೀವನ ಚರಿತ್ರೆ ಮೂಡಿಸುವ ನೀತು ನಿನಾದ್ ಸಂಗೀತ ಸಂಯೋಜಿಸಿರುವ `ಕ್ರಾಂತಿ ಯೋಗಿ’ ವಿಡಿಯೋ ಆಲ್ಬಮ್ ಲೋಕಾರ್ಪಣೆ ಮಾಡಲಾಯಿತು. ಅಣ್ಣ ಬಸವಣ್ಣ ಹಾಡು ಪ್ರಸಾರಗೊಂಡಾಗ ಸಭಿಕರಿಂದ ಭಾರೀ ಕರತಾಡನವಾಯಿತು. ಇದೇ ವೇಳೆ ಪತ್ರಕರ್ತ ಗಣೇಶ್ ಅಮೀನ ಗಡ ಅವರ ಬಣ್ಣದ ಬದುಕಿನ ಚಿನ್ನದ ದಿನಗಳು ಪುಸ್ತಕ 8ನೇ ಆವೃತ್ತಿ ಬಿಡುಗಡೆ ಹಾಗೂ ಮೂಗೂರು ನಂಜುಂಡಸ್ವಾಮಿ ಅವರು `ಕನ್ನಡ ಬೆಳಕು’ ಪತ್ರಿಕೆ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಹಂಗಾಮಿ ಮೇಯರ್ ಸುನಂದಾ ಪಾಲನೇತ್ರ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ವಿಧಾನಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಮೈಲ್ಯಾಕ್ ಅಧ್ಯಕ್ಷ ಎನ್.ವಿ. ಫಣೀಶ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವ ಸ್ವಾಮಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್.ನಂದೀಶ್ ಹಂಚೆ, ಜಿಲ್ಲಾಧಿ ಕಾರಿ ಡಾ.ಬಗಾದಿ ಗೌತಮ್, ಜಿಪಂ ಸಿಇಒ ಪೂರ್ಣಿಮಾ, ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್, ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ, ಎಸ್‍ಪಿ ಆರ್.ಚೇತನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಚನ್ನಪ್ಪ, ಎಲ್.ಎಸ್.ಮಹದೇವಸ್ವಾಮಿ, ಡಿ.ಎ. ಮಹದೇವಸ್ವಾಮಿ, ಕೆ.ಕೆ.ಖಂಡೇಶ್, ಟಿ.ಲೋಕೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »