ಬೆಂಗಳೂರು, ಸೆ.6- ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ವೇಳೆ ಬಿಬಿಎಂಪಿ ಕಾಪೆರ್Çೀರೇಟರ್ ಕೇಶವಮೂರ್ತಿ ಮಗ ಯಶಸ್ ಹೆಸರು ಕೇಳಿಬಂದಿತ್ತು. ಯಶಸ್‍ಗೆ ಡ್ರಗ್ಸ್ ಪೆಡ್ಲರ್ ಜತೆ ನಂಟಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಎನ್‍ಸಿಬಿ ಅಧಿಕಾರಿಗಳು ಯಶಸ್‍ಗೆ ನೋಟಿಸ್ ನೀಡಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಕಾಂಗ್ರೆಸ್ ಕಾಪೆರ್Çೀರೇಟರ್ ಕೇಶವಮೂರ್ತಿ ಪುತ್ರ ಯಶಸ್‍ಗೆ ಮುಂಬೈ ಡ್ರಗ್ಸ್ ಜಾಲದ ನಂಟಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಶವಮೂರ್ತಿ ಮನೆ ಮೇಲೆ ದಾಳಿ ನಡೆಸಿ ಪುತ್ರ ಯಶಸ್‍ಗೆ ನೋಟಿಸ್ ನೀಡಿದೆ. ಸುಶಾಂತ್ ಆತ್ಮಹತ್ಯೆ ಪ್ರಕರಣ ಸಂಬಂಧ ಡ್ರಗ್ಸ್ ಮಾಫಿಯಾ ನಂಟಿದೆ ಎಂಬುದು ಪತ್ತೆಯಾದ ನಂತರ ಎನ್‍ಸಿಬಿ ಅಖಾಡಕ್ಕೆ ಇಳಿದಿತ್ತು. ಮುಂಬೈನ ಡ್ರಗ್ ಪೆಡ್ಲರ್ ಮೊಹಮ್ಮದ್ ಜೊತೆ ಸಂಪರ್ಕ ಹೊಂದಿದ್ದ. ಸುಶಾಂತ್ ಗೆಳತಿ ರಿಯಾಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಮೊಹಮ್ಮದ್‍ನ ವಿಚಾರಣೆ ವೇಳೆ ಯಶಸ್ ಹೆಸರು ಹೇಳಿ ರುವುದರಿಂದ ಯಶಸ್‍ಗೆ ನೋಟಿಸ್ ನೀಡಿದೆ.

ಮೈಸೂರು