ಸುಷ್ಮಾ ಸ್ವರಾಜ್ ರಾಜತಾಂತ್ರಿಕತೆಯ ಬಹುದೊಡ್ಡ ಶಕ್ತಿಯಾಗಿದ್ದರು
ಮೈಸೂರು

ಸುಷ್ಮಾ ಸ್ವರಾಜ್ ರಾಜತಾಂತ್ರಿಕತೆಯ ಬಹುದೊಡ್ಡ ಶಕ್ತಿಯಾಗಿದ್ದರು

August 7, 2020

`ಉತ್ತಮ ಸ್ನೇಹಿತೆ’ಯನ್ನು ಸ್ಮರಿಸಿದ ಮಾಲ್ಡೀವ್ಸ್ ಸಚಿವ ಅಬ್ದುಲ್ ಶಾಹೀದ್
ನವದೆಹಲಿ, ಆ.6- ಸುಷ್ಮಾ ಸ್ವರಾಜ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜವಾಬ್ದಾರಿ ವಹಿಸಿಕೊಂಡ ಮೇಲೆ ಅದರ ಕಾರ್ಯ ವೈಖ ರಿಯೇ ಬದಲಾಗಿತ್ತು. ಆ ಇಲಾಖೆಗೆ ಮಾನವೀಯತೆಯ ಸ್ಪರ್ಶ ಕೊಟ್ಟವರು ಅವರು. ಜಗತ್ತಿನ ವಿವಿಧ ರಾಷ್ಟ್ರಗಳ ವಿದೇಶಾಂಗ ಸಚಿವರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದರು.

ಕಳೆದ ವರ್ಷ ಸುಷ್ಮಾ ಸ್ವರಾಜ್ ಅವರು ಮೃತಪಟ್ಟಾಗ ಪಾಕಿಸ್ತಾನದ ವಿದೇಶಾಂಗ ಸಚಿವರಿಂದ ಹಿಡಿದು ಹಲವು ರಾಷ್ಟ್ರಗಳ ಪ್ರಮುಖರು, ಭಾರತದಲ್ಲಿರುವ ವಿದೇಶಿ ರಾಯಭಾರಿಗಳು ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು, ಅವರ ಕಾರ್ಯ ವೈಖರಿ ಶ್ಲಾಘಿಸಿದ್ದರು. ಸುಷ್ಮಾ ಅವರು ಮೃತಪಟ್ಟು 1 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ ವಿದೇಶಾಂಗ ವ್ಯವಹಾರ ಗಳ ಸಚಿವ ಅಬ್ದುಲ್ಲಾ ಶಾಹೀದ್ ಗುರುವಾರ ಟ್ವೀಟ್ ಮಾಡಿ ಸುಷ್ಮಾ ಸ್ವರಾಜ್ ಅವರನ್ನು ನೆನಪಿಸಿಕೊಂಡಿದ್ದಾರೆ. ಒಂದು ವಿಡಿಯೋವನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿ ರುವ ಶಾಹೀದ್, ಭಾರತದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಗೌರವ ಅರ್ಪಿಸುತ್ತಿದ್ದೇನೆ. ಅವರು ನನ್ನ ಉತ್ತಮ ಸ್ನೇಹಿತೆಯಾಗಿದ್ದರು. ಹಾಗೇ ರಾಜ ತಾಂತ್ರಿಕತೆಯಲ್ಲಿ ಮಹಾನ್ ಶಕ್ತಿಯಾಗಿದ್ದರು. ಭಾರತ-ಮಾಲ್ಡೀವ್ಸ್ ನಡುವಿನ ಪಾಲುದಾರಿಕೆ, ಸಂಬಂಧವನ್ನು ಬಲಪಡಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು. ಶ್ಲಾಘನೀಯ ಪ್ರಯತ್ನಗಳನ್ನು ಮಾಡಿದ್ದರು ಎಂದು ಬಣ್ಣಿಸಿದ್ದಾರೆ.

Translate »