ಮಾತಾ ಅಮೃತಾನಂದಮಯಿ ಮಠದಿಂದ ಸ್ವಚ್ಛತಾ ಅಭಿಯಾನ
ಮೈಸೂರು

ಮಾತಾ ಅಮೃತಾನಂದಮಯಿ ಮಠದಿಂದ ಸ್ವಚ್ಛತಾ ಅಭಿಯಾನ

September 19, 2018

ಮೈಸೂರು: ಮಾತಾ ಅಮೃತಾ ನಂದಮಯಿ ಮಠದ ವೈದ್ಯರಿಂದ ಉಚಿತ ಆರೋಗ್ಯ ಶಿಬಿರ ಹಾಗೂ ಸ್ವಚ್ಛತಾ ಸೇವಾ ಅಭಿಯಾನ ಕಾರ್ಯ ಕ್ರಮವನ್ನು ರಾಮಕೃಷ್ಣ ಸ್ವಾಮೀಜಿಯವರ ನೇತೃತ್ವದಲ್ಲಿ ಕೆ.ಹೆಮ್ಮನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಅಮೃತ ಕೃಪಾ ಆಸ್ಪತ್ರೆಯ ವೈದ್ಯರು ಕೆ. ಹೆಮ್ಮರಗಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಭಿತ್ತಿ ಪತ್ರಗಳನ್ನು ಹಿಡಿದು ಊರಿನ ಪ್ರಮುಖ ಬೀದಿಗಳಲ್ಲಿ ಜಾಗೃತಿ ನಡೆಸಲಾಯಿತು. ಅಲ್ಲದೆ, ಶಾಲಾ ಆವರಣ, ಪಶು ವೈದ್ಯಕೀಯ ಕೇಂದ್ರ ಹಾಗೂ ಊರಿನ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತೆ ಕಾರ್ಯ ಹಮ್ಮಿಕೊಳ್ಳಲಾಯಿತು.

ಕೆಲವು ದಿನಗಳ ಹಿಂದೆ ಕೊಡಗಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆರೋಗ್ಯ ಸಮಸ್ಯೆ ಬಗ್ಗೆ `ಮೈಸೂರು ಮಿತ್ರ’ ಹಾಗೂ `ಸ್ಟಾರ್ ಆಫ್ ಮೈಸೂರು’ ದಿನಪತ್ರಿಕೆಯಲ್ಲಿ ಸ್ವವಿವರ ವರದಿಗೆ ಸ್ಪಂದಿಸಿ, ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಮಾತಾ ಅಮೃತಾನಂದಮಯಿ ಮಠದ ಆಡಳಿತಾಧಿಕಾರಿ ರಾಮಕೃಷ್ಣ ಸ್ವಾಮೀಜಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಡಾ.ವಿಕಾಸ್ ಮೋದಿ, ಡಾ.ಬಿ.ಸೌಮ್ಯ, ಡಾ.ಎ.ಪಿ.ಸುಧೀರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಅಲ್ಲದೆ, ಮಹಾತ್ಮ ಗಾಂಧೀಜಿ ಅವರ ಸ್ವಚ್ಛತಾ ಆಂದೋಲನದ ಕನಸನ್ನು ನನಸಾಗಿಸುವ ದೃಷ್ಟಿಯಿಂದ ಸ್ವಚ್ಛತಾ ಸೇವಾ ಆಂದೋಲನ ಹಾಗೂ ಉಚಿತ ಆರೋಗ್ಯ ಶಿಬಿರವನ್ನು ಶ್ರೀ ರಾಮಕೃಷ್ಣ ಸ್ವಾಮೀಜಿ ಅವರ ನೇತೃತ್ವದಲ್ಲಿ ಅ.2ರವರೆಗೆ ನಡೆಸಲು ತೀರ್ಮಾ ನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »