ಚಾಮರಾಜ ಕ್ಷೇತ್ರ ಬಿಜೆಪಿ ಯುವ ಮೋರ್ಚಾದಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ
ಮೈಸೂರು

ಚಾಮರಾಜ ಕ್ಷೇತ್ರ ಬಿಜೆಪಿ ಯುವ ಮೋರ್ಚಾದಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

January 14, 2022

ಮೈಸೂರು, ಜ.13-ಚಾಮರಾಜ ವಿಧಾನಸಭಾ ಕ್ಷೇತ್ರ ಬಿಜೆಪಿ ಯುವ ಮೋರ್ಚಾ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಚೆಲುವಾಂಬ ಉದ್ಯಾ ನವನದ ಆವರಣದಲ್ಲಿರುವ ಶ್ರೀ ಸ್ವಾಮಿ ವಿವೇಕಾ ನಂದರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನಂತರ ವಾರ್ಡ್ ನಂ 23ರ(ಸುಬ್ಬರಾಯನಕೆರೆ) ದೇವರಾಜ ಬಾಲಕಿಯರ ಸರಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ವಿವೇಕಾನಂದರ ಜೀವನಾಧಾರಿತ ಪುಸ್ತಕಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಗರ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಮಾತ ನಾಡಿ, ಭಾರತದ ಯುವಕರ ಕಣ್ಮಣಿಯಾಗಿದ್ದ ಸ್ವಾಮಿ ವಿವೇಕಾನಂದರು ದೇಶದ ಯುವ ಜನತೆಯಲ್ಲಿ ರಾಷ್ಟ್ರೀ ಯತೆ ಭಾವನೆ ಮತ್ತು ಅಧ್ಯಾತ್ಮದ ಸ್ಫೂರ್ತಿ ತುಂಬು ವುದರಲ್ಲಿ ಮುಂಚೂಣಿಯಲ್ಲಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಯುವ ಸಮೂಹದ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು ಎಂದರು.

ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷರು ಹಾಗೂ ಯುವ ಮೋರ್ಚಾ ಉಸ್ತುವಾರಿ ರಮೇಶ್, ಮೈಸೂರು ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಿರಣ್ ಗೌಡ, ಚಾಮರಾಜ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಚಿನ್, ಉಪಾಧ್ಯಕ್ಷ ಕುಮಾರ್‍ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಪುನೀತ್ ಮತ್ತು ರಮೇಶ್, ಮೈಸೂರು ನಗರ ಬಿಜೆಪಿ ಎಸ್‍ಟಿ ಮೋರ್ಚಾ ಉಪಾ ಧ್ಯಕ್ಷ ರವಿ, ಮೈಸೂರು ನಗರ ಯುವ ಮೋರ್ಚಾ ಉಪಾಧ್ಯಕ್ಷರಾದ ಸಚಿನ್, ನಿತಿನ್ ಶಿವರಾಂ, ಪ್ರಮೋದ್ ಗೌಡ, ಕಿರಣ್, ಯುವ ಮೋರ್ಚಾ ಪ್ರಧಾನ ಕಾರ್ಯ ದರ್ಶಿ ಅರ್ಜುನ್ ಕುಮಾರ್ ಹಾಗೂ ಪ್ರಜ್ವಲ್ ಶ್ರೀವತ್ಸ, ಯುವ ಮೋರ್ಚಾ ಉಪಾಧ್ಯಕ್ಷರಾದ ಯೋಗೇಶ್, ಶಿವುಕುಮಾರ್, ರಾಕೇಶ್, ಪ್ರಶಾಂತ್, ಯೋಗಿ, ಆನಂದ್, ಪ್ರವೀಣ್ ಕುಮಾರ್, ವಿಜಯಾನಂದ್ ಮತ್ತು ಭೂಷಿತ್ ಮತ್ತಿತರರು ಹಾಜರಿದ್ದರು.

Translate »