‘ಹಂಸ’ರ ಸಂಗೀತ ಲಯ ತಪ್ಪಿದೆ
ಮೈಸೂರು

‘ಹಂಸ’ರ ಸಂಗೀತ ಲಯ ತಪ್ಪಿದೆ

November 22, 2021

ಮೈಸೂರು, ನ.21(ಎಂಕೆ)- ‘ಹಂಸ’ರ ಸಂಗೀತ ಲಯ ತಪ್ಪಿದರೆ, ಹರಿದಾಸರ ಸಂಗೀತ-ಸಾಹಿತ್ಯ ಸ್ಮರಣೆ ಮಾಡಿದ ರಾಘವೇಂದ್ರ ಸ್ವಾಮೀಜಿಗಳ ಸಂಗೀತ ಎಂದಿಗೂ ಲಯ ತಪ್ಪಲಿಲ್ಲ ಎಂದು ಉಡುಪಿ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದ ಸ್ವಾಮೀಜಿ ಹೇಳಿದರು.

ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಹರಿದಾಸ ಸಂಗೀತ ಸಾಹಿತ್ಯೋ ತ್ಸವ ಸಮಿತಿ ವತಿಯಿಂದ ಆಯೋಜಿಸಿದ ‘ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 350ನೇ ಆರಾಧನೆಯ ಸಂವತ್ಸರ ಸಂಸ್ಮರಣೆ’ ಹಾಗೂ ‘ರಾಘವೇಂದ್ರ ವೈಭವ- ನಮ್ಮ ನಡೆ ರಾಯರ ಕಡೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೌಲ್ಯಾಧಾರಿತ, ಸಾಹಿತ್ಯವಿಲ್ಲದ ಸಂಗೀತ ಲಯ ತಪ್ಪುತ್ತದೆ ಎಂಬುದಕ್ಕೆ ಇತ್ತೀಚೆಗೆ ಪೇಜಾವರ ಶ್ರೀಗಳು ಕುರಿತು ಲಯತಪ್ಪಿ ಮಾತನಾಡಿರುವುದು ಸಾಕ್ಷಿಯಾಗಿದೆ. ಸಂಗೀತದಿಂದಲೇ ಗೌರವ ಪಡೆಯುತ್ತಿದ್ದವರಿಗೆ ಇನ್ಯಾರು ಗೌರವ ನೀಡುವರು. ‘ಹಂಸ’ರ ಸಂಗೀತ ಲಯತಪ್ಪಿದರೆ, ಲಯ ತಪ್ಪದ ಸಂಗೀತ ಹರಿದಾಸರ ಸಂಗೀತ, ಸಾಹಿತ್ಯವಾಗಿದೆ ಎಂದು ತಿಳಿಸಿದರು.

ಹರಿದಾಸರ ಸಂಗೀತ, ಸಾಹಿತ್ಯದಿಂದಾಗಿ ನಮ್ಮ ಮನಸ್ಸು ಹಗುರವಾಗುವು ಜೊತೆಗೆ ಜೀವನದಲ್ಲಿ ಸಂತೋಷ ಹೆಚ್ಚಾ ಗುತ್ತದೆ. ಅಲ್ಲದೆ ನಮ್ಮ ಜೀವನದಲ್ಲಿ ಶಕ್ತಿ ತುಂಬುವ ಕೆಲಸವನ್ನು ಹರಿದಾಸರ ಸಂಗೀತ ಮಾಡುತ್ತದೆ. ಕೊರೊನಾ ಉಂಟು ಮಾಡಿದ್ದ ಭಯದ ವಾತಾವರಣ ದೂರಾಗಬೇಕಾದರೂ ದಾಸರ ಸಂಗೀತ ಬೇಕಾಗಿದೆ ಎಂದರು.

ಯುವ ಪ್ರತಿಭಾವಂತ ಗಾಯಕರಿಂದ ಪ್ರಸ್ತುತಪಡಿಸಿದ ದಾಸ ಕಾರಂಜಿ ಸಂಗೀತ ಗಾಯನ ಎಲ್ಲರ ಮನಸೆಳೆಯಿತು. ಗಾಯಕ ರಾದ ಸುಮುಖ ಮೌದ್ಗಲ್ಯ, ಅನನ್ಯ ಆರ್.ಭಟ್, ಅಮೂಲ್ಯ ಆರ್. ಭಟ್, ವೈ.ಎನ್.ಮದ್ವೇಶ, ವೈಷ್ಣವಿ ದತ್ತಾ, ಆರ್.ನಿತ್ಯಶ್ರೀ, ಹೆಚ್. ರಾಕೇಶ್ ಐಯ್ಯರ್, ಅಶ್ವಿನಿ ಹಾಗೂ ಧನ್ಯ ನಾಗರಾಜ್ ಸುಶ್ರಾವ್ಯ ವಾಗಿ ಹಾಡಿ ರಂಜಿಸಿದರು. ಇದೇ ವೇಳೆ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್ ಅವರನ್ನು ಸನ್ಮಾನಿಸಲಾಯಿತು. ವಿದ್ವಾಂಸ ಡಾ.ಬೆ.ನಾ.ವಿಜ ಯೀಂದ್ರಾಚಾರ್ಯ, ಡಾ. ವಿಠೋಬಾಚಾರ್ಯ, ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿಯ ಎಸ್.ರವಿಕುಮಾರ್, ಚಂದ್ರಿಕಾ ಕೀರ್ತಿನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.

Translate »