Tag: AH Vishwanath

ಸರ್ವಾಧಿಕಾರ ಧೋರಣೆಯಿಂದ ಹುಣಸೂರು ನಗರ ಸಭೆಯಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್: ವಿಶ್ವನಾಥ್ ಆರೋಪ
ಮೈಸೂರು

ಸರ್ವಾಧಿಕಾರ ಧೋರಣೆಯಿಂದ ಹುಣಸೂರು ನಗರ ಸಭೆಯಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್: ವಿಶ್ವನಾಥ್ ಆರೋಪ

October 8, 2018

ಹುಣಸೂರು: ಇಲ್ಲಿನ ನಗರಸಭೆಯಲ್ಲಿ ಕಾಂಗ್ರೆಸ್‍ಗೆ ಬಹುಮತ ವಿದ್ದರೂ, ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ವಿಫಲವಾಗಿದ್ದಾರೆ. ಇದಕ್ಕೆ ಅವರ ಸರ್ವಾಧಿಕಾರವೇ ಕಾರಣವಾಗಿದೆ ಎಂದು ಶಾಸಕ ಅಡಗೂರು ಎಚ್.ವಿಶ್ವನಾಥ್ ಹೇಳಿದರು. ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಮಾಜದಲ್ಲಿ ಯಾವುದೇ ಒಂದು ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ, ಆ ಸಮುದಾಯಕ್ಕೆ ರಾಜಕೀಯ ಶಕ್ತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದ ಸಮಾಜಗಳಿಗೆ ರಾಜಕೀಯ ಶಕ್ತಿ ನೀಡಿದೆ ಎಂದರು. ಪಕ್ಷ ಸಮಾಜದ ಅತ್ಯಂತ ಸಣ್ಣಕೋಮಿಗೆ…

ಸಮನ್ವಯ ಸಮಿತಿಗೆ ಮೈತ್ರಿ ಪಕ್ಷದ ರಾಜ್ಯಾಧ್ಯಕ್ಷರನ್ನು ಸೇರಿಸಿ
ಮೈಸೂರು

ಸಮನ್ವಯ ಸಮಿತಿಗೆ ಮೈತ್ರಿ ಪಕ್ಷದ ರಾಜ್ಯಾಧ್ಯಕ್ಷರನ್ನು ಸೇರಿಸಿ

September 28, 2018

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯಲ್ಲಿ ತಮ್ಮನ್ನೂ ಒಬ್ಬ ಸದಸ್ಯನನ್ನಾಗಿ ಸೇರಿಸ ಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಇಂದಿಲ್ಲಿ ಪುನರುಚ್ಛರಿಸಿದ್ದಾರೆ. ಆಡಳಿತದಲ್ಲಿನ ಪಾಲುದಾರಿಕೆ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‍ನ ರಾಜ್ಯಾಧ್ಯಕ್ಷರುಗಳು ಸಮಿತಿಯ ಸದಸ್ಯರಾಗಿರ ಲೇಬೇಕು, ಅದನ್ನು ಈಗಲೂ ಒತ್ತಿ ಹೇಳುತ್ತೇನೆ. ಸಮನ್ವಯ ಸಮಿತಿಗೆ ಪ್ರಮುಖರಲ್ಲದೆ, ಸರ್ಕಾರ ಮತ್ತು ಪಕ್ಷದ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲು ತಮ್ಮನ್ನೂ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಸೇರಿಸಲೇಬೇಕು ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…

ಬಿಜೆಪಿಯಿಂದ ಮೈತ್ರಿ ಸರ್ಕಾರಕ್ಕೆ ಬರೀ ಕಿರಿಕಿರಿ
ಮೈಸೂರು

ಬಿಜೆಪಿಯಿಂದ ಮೈತ್ರಿ ಸರ್ಕಾರಕ್ಕೆ ಬರೀ ಕಿರಿಕಿರಿ

September 19, 2018

ಬೆಂಗಳೂರು: ಜನರ ಒಳಿತಿಗಾಗಿ ಪ್ರತಿಪಕ್ಷ ಬಿಜೆಪಿ ಕೆಲಸ ಮಾಡದೆ, ಮೈತ್ರಿ ಸರಕಾರವನ್ನು ಭಯದಲ್ಲಿರಿಸಲು ಹೊರಟಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಹೆಚ್. ವಿಶ್ವನಾಥ್ ಇಂದಿಲ್ಲಿ ದೂರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನನಿತ್ಯ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದರ ಮೂಲಕ ಸರ್ಕಾರ ಮತ್ತು ಜನರನ್ನು ದಿಕ್ಕು ತಪ್ಪಿಸುವ ಕಾರ್ಯದಲ್ಲಿ ಆ ಪಕ್ಷದ ನಾಯಕರು ನಿರತರಾಗಿದ್ದಾರೆ. ರಾಜ್ಯದಲ್ಲಿ ಒಂದು ಭಾಗ ಅತಿವೃಷ್ಟಿ, ಮತ್ತೊಂದು ಭಾಗ ಅನಾವೃಷ್ಟಿಯಿಂದ ನಲುಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಪರಿಸ್ಥಿತಿ ಅಧ್ಯಯನ ನಡೆಸಿ, ಸರ್ಕಾರದ ಕಿವಿ ಹಿಂಡುವ ಬದಲು ಅಧಿಕಾರಕ್ಕಾಗಿ…

ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚನೆಗೆ ಸಿಎಂಗೆ ಮನವಿ
ಕೊಡಗು

ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚನೆಗೆ ಸಿಎಂಗೆ ಮನವಿ

September 16, 2018

ಮಡಿಕೇರಿ: ಅತಿವೃಷ್ಟಿ ಹಾನಿ ಯಿಂದ ತತ್ತರಿಸಿರುವ ಕೊಡಗು ಜಿಲ್ಲೆ ಯಲ್ಲಿ ಮುಂದೆ ಸವಾಲಿನ ದಿನಗಳು ಎದು ರಾಗಲಿದ್ದು, ಶಾಶ್ವತ ಪರಿಹಾರದ ಚಿಂತ ನೆಗಳು ನಡೆಯಬೇಕಾಗಿದೆ. ಇದಕ್ಕಾಗಿ ರಾಜ ಕೀಯ ರಹಿತವಾದ ‘ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ’ವನ್ನು ರಚಿಸಬೇ ಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ. ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಡಗಿನಲ್ಲಿ ಸಂಭ ವಿಸಿರುವ ಅನಾಹುತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಮತ್ತು ಮುಂದೆ ಈ ಘಟನೆ…

ಬಸ್ ಸಂಚಾರಕ್ಕೆ ಶಾಸಕರಿಂದ ಚಾಲನೆ: ಬಸ್‍ನಲ್ಲೇ ಗ್ರಾಮಸ್ಥರಿಂದ ಸಮಸ್ಯೆ ಆಲಿಸಿದ ವಿಶ್ವನಾಥ್
ಮೈಸೂರು

ಬಸ್ ಸಂಚಾರಕ್ಕೆ ಶಾಸಕರಿಂದ ಚಾಲನೆ: ಬಸ್‍ನಲ್ಲೇ ಗ್ರಾಮಸ್ಥರಿಂದ ಸಮಸ್ಯೆ ಆಲಿಸಿದ ವಿಶ್ವನಾಥ್

September 9, 2018

ಹಿರೀಕ್ಯಾತನಹಳ್ಳಿ:  ಹುಣಸೂರು-ಮುಳ್ಳೂರು ಮಾರ್ಗವಾಗಿ ಕೆ.ಆರ್.ನಗರ ಹಾಗೂ ಹೆಜ್ಜೊಡ್ಲು-ರಾಯನಹಳ್ಳಿ-ಮಂಟಿಕೊಪ್ಪಲು ಮಾರ್ಗದ ಬಸ್ ಸಂಚಾರಕ್ಕೆ ಶಾಸಕ ಎಚ್.ವಿಶ್ವನಾಥ್ ಗಾವಡಗೆರೆ ಹೋಬಳಿಯ ಮುಳ್ಳೂರಿ ನಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಭಾಗದ ಬಹು ದಿನಗಳ ಬೇಡಿಕೆಯಂತೆ ಕೆ.ಆರ್.ನಗರ ಡಿಪೋದಿಂದ ಮುಳ್ಳೂರು, ತೊಂಡಾಳು, ಉಂಡುವಾಡಿ ಮಾರ್ಗ ಹುಣ ಸೂರು ಹಾಗೂ ಹುಣಸೂರು ಡಿಪೋದಿಂದ ಕೆ.ಆರ್.ನಗರ-ಹೆಜ್ಜೊಡ್ಲು-ರಾಯನ ಹಳ್ಳಿ-ಮಂಟಿಕೊಪ್ಪಲು ಮಾರ್ಗ ಹುಣ ಸೂರಿಗೆ ಸಂಪರ್ಕ ಕಲ್ಪಿಸುವ ಬಸ್‍ಗಳನ್ನು ನಿತ್ಯ ಬೆಳಿಗ್ಗೆ-ಸಂಜೆ ಎರಡು ಬಾರಿ ಒಡಾ ಡಲಿದೆ. ಜನರು…

ಕಗ್ಗತ್ತಲಲ್ಲಿ ಹುಣಸೂರು: ನಗರಸಭೆಯಲ್ಲಿ ಕಾವೇರಿದ ಚರ್ಚೆ
ಮೈಸೂರು

ಕಗ್ಗತ್ತಲಲ್ಲಿ ಹುಣಸೂರು: ನಗರಸಭೆಯಲ್ಲಿ ಕಾವೇರಿದ ಚರ್ಚೆ

September 7, 2018

ಹುಣಸೂರು: ಇಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಬೀದಿ ದೀಪ, ಕುಡಿಯುವ ನೀರು, ಸಾರ್ವ ಜನಿಕ ರಸ್ತೆ ಒತ್ತುವರಿ, ಸ್ಮಶಾನ ಅಭಿವೃದ್ಧಿ ಬಗ್ಗೆ ಸಾಕಷ್ಟು ಕಾವೇರಿದ ಚರ್ಚೆ ನಡೆಯಿತು. ಹಾಗಾಗಿ ಗದ್ದಲವೂ ಉಂಟಾಯಿತು. ನಗರಸಭಾ ಅಧ್ಯಕ್ಷ ಎಂ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಸಾಮಾನ್ಯ ಸಭೆಯಲ್ಲಿ ಮೊದಲಿಗೆ ಅಗಲಿದ ಮಾಜಿ ಪ್ರಧಾನಿ ವಾಜಪೇಯಿ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ಸಂತಾಪ ಸೂಚಿಸಲಾಯಿತು. ನಂತರ ಶಾಸಕ ಅಡಗೂರು ಹೆಚ್.ವಿಶ್ವನಾಥ್ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಲಾಯಿತು. ನಗರ…

ಸಾಹಿತಿ, ಚಿಂತಕರನ್ನು ಬಂಧಿಸಿ ದೇಶ ದ್ರೋಹಿಗಳಂತೆ ಕಾಣುತ್ತಿರುವುದು ಸರಿಯಲ್ಲ-ವಿಶ್ವನಾಥ್
ಮೈಸೂರು

ಸಾಹಿತಿ, ಚಿಂತಕರನ್ನು ಬಂಧಿಸಿ ದೇಶ ದ್ರೋಹಿಗಳಂತೆ ಕಾಣುತ್ತಿರುವುದು ಸರಿಯಲ್ಲ-ವಿಶ್ವನಾಥ್

September 5, 2018

ಹುಣಸೂರು: ಸಾಹಿತಿಗಳನ್ನು ಚಿಂತಕರನ್ನು ಬಂಧಿಸಿ ದೇಶದ್ರೋಹಿಗಳಂತೆ ನಡೆಸಿಕೊಳ್ಳುತ್ತಿರುವುದು ಕೇಂದ್ರ ಸರ್ಕಾರಕ್ಕೆ ಶೋಭಾಯಮಾನವಲ್ಲ ಒಬ್ಬ ಸಾಹಿತಿಯಾಗಿ ಮತ್ತು ಬರಹಗಾರನಾಗಿ ಕೇಂದ್ರದ ಕ್ರಮವನ್ನು ಖಂಡಿಸುತ್ತೇನೆ ಎಂದು ಶಾಸಕ ಹೆಚ್.ವಿಶ್ವನಾಥ್ ತಿಳಿಸಿದರು. ಇಂದು ಸಂಜೆ ಪ್ರೆಸ್‍ಕ್ಲಬ್‍ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಹಿತಿಗಳು ಬರಹಗಾರರು, ಚಿಂತಕರು, ಮಾಧ್ಯಮಗಳಲ್ಲಿ ಬರೆಯುವವರನ್ನು ಪಟ್ಟಿ ಮಾಡುತ್ತಿದ್ದೀರಿ. ಈ ಬೆಳವಣಿಗೆಯಿಂದ ದೇಶದಲ್ಲಿ ತುರ್ತು ಪರಿಸ್ಥಿತಿ ಇಣುಕಿ ನೋಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಂದು ಆತಂಕ ವ್ಯಕ್ತಪಡಿಸಿದರು.ಈ ಪ್ರಸ್ತುತ ವ್ಯವಸ್ಥೆಯ ವಿರುದ್ಧ ಹೋರಾಡಲು ಸಾಹಿತ್ಯ ಕ್ಷೇತ್ರದ ಸಾಹಿತಿಗಳು, ಚಿಂತಕರು, ಬರಹಗಾರರು,…

ತುರ್ತಾಗಿ ಸಮನ್ವಯ ಸಮಿತಿ ಸಭೆ ಕರೆಯಿರಿ
ಮೈಸೂರು

ತುರ್ತಾಗಿ ಸಮನ್ವಯ ಸಮಿತಿ ಸಭೆ ಕರೆಯಿರಿ

August 28, 2018

ಮೈಸೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಜನ ತತ್ತರಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಭೀಕರ ಅನಾಹುತವೇ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಸಭೆ ಕರೆದು ಚರ್ಚಿಸುವಂತೆ ಶಾಸಕ, ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಹೆಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ. ಮೈಸೂರಿನ ಖಾಸಗಿ ಹೊಟೇಲ್‍ವೊಂದರಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದೆಡೆ ನದಿಗಳು ಉಕ್ಕಿ ಹರಿಯುತ್ತಿದ್ದರೆ, ಮತ್ತೊಂದೆಡೆ ಹನಿ ಮಳೆಯೂ ಆಗದೆ ಭೀಕರ ಬರಗಾಲ ತಲೆದೋರಿದೆ. ಎಂದೂ ಕೇಳಯರಿಯದಂತಹ ಪ್ರಕೃತಿ ವಿಕೋಪಕ್ಕೆ ಕೊಡಗು ಸಾಕ್ಷಿಯಾಗಿ,…

ಕೊಡಗಿಗೆ 12 ತಂತ್ರಜ್ಞರೊಂದಿಗೆ ಎ.ಹೆಚ್.ವಿಶ್ವನಾಥ್ ಭೇಟಿ
ಕೊಡಗು

ಕೊಡಗಿಗೆ 12 ತಂತ್ರಜ್ಞರೊಂದಿಗೆ ಎ.ಹೆಚ್.ವಿಶ್ವನಾಥ್ ಭೇಟಿ

August 27, 2018

ಜಿಲ್ಲೆ ಪುನರ್‍ನಿರ್ಮಾಣ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲು ನಿರ್ಧಾರ ಮಡಿಕೇರಿ: ಸತತ ಮಳೆಯಿಂದ ಕಂಗಾಲಾಗಿರುವ ಕೊಡಗು ಜಿಲ್ಲೆಯನ್ನು ಪುನರ್ ನಿರ್ಮಾಣ ಮಾಡುವ ಕುರಿತು ಊಹಾಪೋಹದ ವರದಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರೂ ಆದ ಶಾಸಕ ಎ.ಹೆಚ್. ವಿಶ್ವನಾಥ್ ನೇತೃತ್ವ ದಲ್ಲಿ 12 ತಂತ್ರಜ್ಞರ ತಂಡ ಮಡಿಕೇರಿಗೆ ಭೇಟಿ ನೀಡಿ ಮಾಹಿತಿ ಪಡೆದಿದೆ. ಮಳೆಯ ರುದ್ರನರ್ತನದಿಂದ ಕಂಗೆಟ್ಟ ಕೊಡಗು ಜಿಲ್ಲೆಯನ್ನು ಪುನರ್ ನಿರ್ಮಾಣ ಕಾರ್ಯ ಹೇಗೆ ನಡೆಯಬೇಕು? ಈಗಿನ ಪರಿಸ್ಥಿತಿಗೆ ಏನು ಕಾರಣ? ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆಯಾಗ…

ಸಮನ್ವಯ ಸಮಿತಿಯಲ್ಲಿ ಸದಸ್ಯತ್ವಕ್ಕೆ ಆಗ್ರಹ
ಕೊಡಗು

ಸಮನ್ವಯ ಸಮಿತಿಯಲ್ಲಿ ಸದಸ್ಯತ್ವಕ್ಕೆ ಆಗ್ರಹ

August 27, 2018

ಮಡಿಕೇರಿ: ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ರಾಜ್ಯಾಧ್ಯಕ್ಷರಿಗೆ ಸದಸ್ಯ ಸ್ಥಾನ ನೀಡಲೇಬೇಕು. ಅವರು ಬೇಡ ಇವರು ಬೇಡ ಎಂದು ಸಿದ್ದರಾಮಯ್ಯ ಹಠ ಹಿಡಿದಿರೋದು ಸರಿಯಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಚ್.ವಿಶ್ವನಾಥ್, ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಎಲ್ಲಾ 22 ಮಿತ್ರ ಪಕ್ಷಗಳ ಅಧ್ಯಕ್ಷರೂ ಸಮನ್ವಯ ಸಮಿತಿಯ ಸದಸ್ಯರಾಗಿದ್ದರು. ಹೀಗಿರುವಾಗ ಎರಡು ಪಕ್ಷಗಳು ಸೇರಿರುವ ಸರ್ಕಾರದ ಸಮನ್ವಯ ಸಮಿತಿಯಲ್ಲಿ ಎರಡೂ ಪಕ್ಷಗಳ ಅಧ್ಯಕ್ಷರು ಸದಸ್ಯರಾಗಿರಲೇ ಬೇಕು…

1 2 3 4
Translate »