ಬಿಜೆಪಿಯಿಂದ ಮೈತ್ರಿ ಸರ್ಕಾರಕ್ಕೆ ಬರೀ ಕಿರಿಕಿರಿ
ಮೈಸೂರು

ಬಿಜೆಪಿಯಿಂದ ಮೈತ್ರಿ ಸರ್ಕಾರಕ್ಕೆ ಬರೀ ಕಿರಿಕಿರಿ

September 19, 2018

ಬೆಂಗಳೂರು: ಜನರ ಒಳಿತಿಗಾಗಿ ಪ್ರತಿಪಕ್ಷ ಬಿಜೆಪಿ ಕೆಲಸ ಮಾಡದೆ, ಮೈತ್ರಿ ಸರಕಾರವನ್ನು ಭಯದಲ್ಲಿರಿಸಲು ಹೊರಟಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಹೆಚ್. ವಿಶ್ವನಾಥ್ ಇಂದಿಲ್ಲಿ ದೂರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನನಿತ್ಯ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದರ ಮೂಲಕ ಸರ್ಕಾರ ಮತ್ತು ಜನರನ್ನು ದಿಕ್ಕು ತಪ್ಪಿಸುವ ಕಾರ್ಯದಲ್ಲಿ ಆ ಪಕ್ಷದ ನಾಯಕರು ನಿರತರಾಗಿದ್ದಾರೆ.

ರಾಜ್ಯದಲ್ಲಿ ಒಂದು ಭಾಗ ಅತಿವೃಷ್ಟಿ, ಮತ್ತೊಂದು ಭಾಗ ಅನಾವೃಷ್ಟಿಯಿಂದ ನಲುಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಪರಿಸ್ಥಿತಿ ಅಧ್ಯಯನ ನಡೆಸಿ, ಸರ್ಕಾರದ ಕಿವಿ ಹಿಂಡುವ ಬದಲು ಅಧಿಕಾರಕ್ಕಾಗಿ ನಾಲಿಗೆ ತೆಗೆದು ಕುಳಿತಿದೆ. ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಯಾವಾಗ ಅಧಿಕಾರ ಹಿಡಿಯುತ್ತೇನೆ ಎಂದು ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಕನಸು ಕಾಣುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಅವರ ಕನಸಿಗೆ ಆ ಪಕ್ಷದ ನಾಯಕರು ಕುಣಿಯುತ್ತಿದ್ದಾರೆ. ಅವರಿಗೂ ರಾಜ್ಯದ ಜನತೆಯ ಕಷ್ಟ ಸುಖಗಳು ಬೇಕಾಗಿಲ್ಲ. ಕೇಂದ್ರ ಸರ್ಕಾರ ಮಾಡದ ಕೆಲಸವನ್ನು ಮುಖ್ಯಮಂತ್ರಿಯವರು ಮಾಡಿ ತೋರಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‍ಗೆ ಎರಡು ರೂ. ಇಳಿಸಿ, ಮಾದರಿಯಾಗಿದ್ದಾರೆ.

ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ಸುಂಕ ಇಳಿಕೆ ಹಿನ್ನೆಲೆ, ಕುಮಾರಸ್ವಾಮಿ ಬದ್ಧತೆ ಪ್ರದರ್ಶಿಸಿದ್ದಾರೆ. ಪ್ರಾಂತೀಯ ಪಕ್ಷಗಳಿಗೆ ಹೈಕಮಾಂಡ್ ಕಡೆ ಮುಖ ಮಾಡುವ ಅಗತ್ಯ ಇಲ್ಲ. ಪ್ರಾಂತೀಯ ಪಕ್ಷ ಆಗಿರುವುದರಿಂದ ಮುಖ್ಯಮಂತ್ರಿಯ ವರು ಇಂಥ ದಿಟ್ಟ ನಿರ್ಧಾರ ಕೈಗೊಂಡರು, ನಾವು ನಮ್ಮ ಹೊಣೆ ಗಾರಿಕೆ ನಿಭಾಯಿಸಿದ್ದೇವೆ. ಇದರಿಂದ ಪ್ರಾದೇಶಿಕ ಪಕ್ಷಗಳ ಮಹತ್ವ ಜನರಿಗೆ ಗೊತ್ತಾಗುತ್ತೆ. ಮಾರಾಟ ತೆರಿಗೆ ಇಳಿಕೆಯಿಂದ ಪೆಟ್ರೋಲ್ ಮೇಲೆ 526 ಕೋಟಿ ರೂ., ಡೀಸೆಲ್ ಮೇಲೆ 1428 ಕೋಟಿ ರೂ. ಸಬ್ಸಿಡಿ ಜನರಿಗೆ ಕೊಟ್ಟಂತಾಗುತ್ತದೆ. ಪೆಟ್ರೋಲ್, ಡೀಸೆಲ್ ದರಗಳು ಗಗನಮುಖಿಯಾಗಿವೆ. ಬಿಜೆಪಿ ಜನರಿಗೆ ಏನು ವಾಗ್ದಾನ ಮಾಡಿದರು ಎಂದು ಪ್ರಶ್ನಿಸಿದರು. ಕೊಡಗಿನ ಬಗ್ಗೆ ಸರಕಾರದ ಗಮನ ಸೆಳೆಯಲಿಲ್ಲ, ಕನಿಷ್ಠ ಕೇಂದ್ರದ ಮೇಲೆ ಒತ್ತಡ ತಂದು ವಿಶೇಷ ಪ್ಯಾಕೇಜ್ ಕೊಡಿಸಲು ಬಿಜೆಪಿಯವರಿಂದ ಸಾಧ್ಯವಾಗಿಲ್ಲ ಎಂದರು.

Translate »