ಅಕ್ಟೋಬರ್ ಮೊದಲ ವಾರ ದಸರಾ ಬಂದೋಬಸ್ತ್ ಹೆಚ್ಚುವರಿ ಪೊಲೀಸರ ಮೊದಲ ತಂಡ ಆಗಮನ
ಮೈಸೂರು

ಅಕ್ಟೋಬರ್ ಮೊದಲ ವಾರ ದಸರಾ ಬಂದೋಬಸ್ತ್ ಹೆಚ್ಚುವರಿ ಪೊಲೀಸರ ಮೊದಲ ತಂಡ ಆಗಮನ

September 19, 2018

ಮೈಸೂರು: ಅಕ್ಟೋಬರ್ ಮೊದಲ ವಾರ ದಸರಾ ಮಹೋ ತ್ಸವ ಬಂದೋಬಸ್ತ್‍ಗೆ ನಿಯೋಜನೆಗೊಂಡ ಹೊರ ಜಿಲ್ಲೆಗಳ ಹೆಚ್ಚುವರಿ ಪೊಲೀಸರ ಮೊದಲ ತಂಡ ಮೈಸೂರಿಗೆ ಆಗಮಿಸಲಿದೆ.

ಮೈಸೂರು ನಗರ ಪೊಲೀಸ್ ಕಮೀ ಷ್ನರ್ ಡಾ. ಎ. ಸುಬ್ರಹ್ಮಣ್ಯೇಶ್ವರರಾವ್ ಅವರು ದಸರಾ ಭದ್ರತೆ ಕುರಿತಂತೆ ಈಗಾ ಗಲೇ ಅಧೀನ ಅಧಿಕಾರಿಗಳೊಂದಿಗೆ ಎರಡು ಸುತ್ತಿನ ಸಭೆ ನಡೆಸಿ ಚರ್ಚಿಸಿದ್ದು, ಜಿಲ್ಲಾಡಳಿತವು ದಸರಾ ಕಾರ್ಯಕ್ರಮಗಳನ್ನು ಅಂತಿಮಗೊಳಿಸುವ ಸಂಖ್ಯೆಗನುಗುಣ ವಾಗಿ ಹೆಚ್ಚುವರಿಯಾಗಿ ಎಷ್ಟು ಮಂದಿ ಸಿಬ್ಬಂದಿ ಅಗತ್ಯವಿದೆ ಎಂಬುದರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾ ನಿಸಿದ್ದಾರೆ. ಒಂದು ವೇಳೆ ಹೆಚ್ಚು ಕಡೆ ಕಾರ್ಯಕ್ರಮಗಳಿದ್ದರೆ, ಅದಕ್ಕೆ ತಕ್ಕಂತೆ ಸಿಬ್ಬಂದಿ ಬೇಕಾಗುತ್ತದೆ. ದಸರಾಗೆ ಈ ಬಾರಿ ಹೆಚ್ಚು ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇರುವುದರಿಂದ ಯಾವ ರೀತಿಯ ಬಂದೋಬಸ್ತ್ ಸ್ಕೀಂ ಸಿದ್ಧಪಡಿಸಿಕೊಳ್ಳ ಬೇಕೆಂಬುದರ ಬಗ್ಗೆಯೂ ಕಮೀಷ್ನರ್ ಚರ್ಚಿಸಿದ್ದಾರೆ. ಕಳೆದ ಬಾರಿಯ ದಸರಾಗೆ 2500 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಹೊರಗಿನ ಜಿಲ್ಲೆಗಳಿಂದ ಕರೆಸಿಕೊಳ್ಳಲಾಗಿತ್ತು. ಈ ವರ್ಷ 3,000 ಮಂದಿಗೆ ಪ್ರಸ್ತಾವನೆ ಸಲ್ಲಿ ಸುವ ಸಾಧ್ಯತೆ ಇದೆ. ಮೊದಲ ಹಂತದ 1500 ಮಂದಿ ಹೆಚ್ಚುವರಿ ಸಿಬ್ಬಂದಿ ಅಕ್ಟೋಬರ್ 2 ಅಥವಾ 3 ರಂದು ಮೈಸೂರಿಗೆ ಆಗಮಿಸಲಿದ್ದು, ಅಕ್ಟೋಬರ್ 14 ರಂದು 2ನೇ ಹಂತದ ಪೊಲೀಸರನ್ನು ಕರೆಸಿಕೊಳ್ಳುವ ಸಾಧ್ಯತೆ ಇದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ. ವಿಷ್ಣುವರ್ಧನ ತಿಳಿಸಿದ್ದಾರೆ.

ಹೆಚ್ಚುವರಿ ಸಿಬ್ಬಂದಿಗೆ ಮಂಡಿ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ವಿವಿ ಮೊಹಲ್ಲಾ, ಹೆಬ್ಬಾಳು, ವಿಜಯನಗರ ಸೇರಿದಂತೆ ವಿವಿಧೆಡೆ ಹಾಸ್ಟೆಲ್‍ಗಳು, ಕಲ್ಯಾಣ ಮಂಟಪ, ಶಾಲಾ-ಕಾಲೇಜುಗಳು, ಸಮುದಾಯ ಭವನಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ, ಊಟ-ತಿಂಡಿ ಸೌಲಭ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.ಈಗಾಗಲೇ ಆಯಾ ವ್ಯಾಪ್ತಿಯ ಠಾಣೆ ಗಳ ಪೊಲೀಸ್ ಇನ್ಸ್‍ಪೆಕ್ಟರ್‍ಗಳು ಸಿಬ್ಬಂದಿ ವಾಸ್ತವ್ಯಕ್ಕೆ ಸ್ಥಳ ಗುರ್ತಿಸಿ, ಸಿದ್ಧತೆ ನಡೆಸು ತ್ತಿದ್ದಾರೆ ಎಂದು ಅವರು ಹೇಳಿದರು.

Translate »