Tag: BJP

ರಂಗೂಪುರ ಪಿಎಸಿಸಿ ಬಿಜೆಪಿ ತೆಕ್ಕೆಗೆ
ಚಾಮರಾಜನಗರ

ರಂಗೂಪುರ ಪಿಎಸಿಸಿ ಬಿಜೆಪಿ ತೆಕ್ಕೆಗೆ

July 17, 2018

ಬೇಗೂರು:  ರಂಗೂ ಪುರ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರು ಜಯ ಭೇರಿ ಬಾರಿಸಿದ್ದು, ಕಾಂಗ್ರೆಸ್ ಬೆಂಬಲಿ ಗರು ಎಲ್ಲಾ ಕ್ಷೇತ್ರಗಳಲ್ಲಿ ಸೋಲು ಕಂಡು ಭಾರೀ ಮುಖಭಂಗ ಅನುಭವಿಸಿದ್ದಾರೆ. ಬ್ಯಾಂಕ್ ಕಚೇರಿಯಲ್ಲಿ ನಡೆದ ಚುನಾವಣೆ ಯಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿ ಗರು ಗೆದ್ದರೆ, 12 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಬೆಂಬಲಿಗರು ಸೋಲು ಕಂಡಿದ್ದಾರೆ. ಬ್ಯಾಂಕ್‍ನ ಮಾಜಿ ಅಧ್ಯಕ್ಷ ಆರ್.ಎಸ್.ನಾಗರಾಜು, ಆರ್.ಎಸ್.ರಾಜು, ವೈ.ಎಚ್.ಸಿದ್ದನಾಯಕ, ಸಿದ್ದಯ್ಯ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಆರ್.ಪಿ.ಲಿಂಗಣ್ಣ…

ನಾನಲ್ಲ, ನನ್ನ ಹೆಣವೂ ಬಿಜೆಪಿ ಬಳಿ ಸುಳಿಯಲ್ಲ: ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ
ಮೈಸೂರು

ನಾನಲ್ಲ, ನನ್ನ ಹೆಣವೂ ಬಿಜೆಪಿ ಬಳಿ ಸುಳಿಯಲ್ಲ: ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ

July 14, 2018

ಮೈಸೂರು: ಗೆದ್ದಾಗ ಒಂದು ಪಕ್ಷ, ಸೋತಾಗ ಮತ್ತೊಂದು ಪಕ್ಷಕ್ಕೆ ಹಾರಲು ರಾಜಕೀಯವೇನು ಮರಕೋತಿ ಆಟವಲ್ಲ. ಈ ಹಿಂದಿನಿಂದಲೂ ತನ್ನದೇ ಆದ ರಾಜಕೀಯ ಸಿದ್ಧಾಂತದಿಂದ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಕೋಮುವಾದಿ ಪಕ್ಷದ ಸಮೀಪಕ್ಕೂ ನಾನಲ್ಲ, ನನ್ನ ಹೆಣವು ಸುಳಿಯುವುದಿಲ್ಲ ಎಂದು ಮಾಜಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಅವರು ತಿಳಿಸುವ ಮೂಲಕ ಬಿಜೆಪಿ ಸೇರಲಿದ್ದಾರೆ ಎಂದು ಹರಡಿರುವ ವದಂತಿಯನ್ನು ತಳ್ಳಿ ಹಾಕಿದರು. ಮೈಸೂರಿನ ಶ್ರೀರಾಂಪುರದಲ್ಲಿರುವ ಧನ್ವಂತರಿ ಆಸ್ಪತ್ರೆಯ ಬಳಿ ಗುರುವಾರ ಬೆಳಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ…

ಲೋಕಸಭಾ ಚುನಾವಣೆಗೆ ಬಿಜೆಪಿ ರೆಡಿ
ಮೈಸೂರು

ಲೋಕಸಭಾ ಚುನಾವಣೆಗೆ ಬಿಜೆಪಿ ರೆಡಿ

July 13, 2018

ಬೆಂಗಳೂರು: ಮುಂಬ ರುವ ಲೋಕಸಭೆ ಚುನಾವಣೆಗೆ ಬೇರು ಮಟ್ಟದಿಂದ ಪಕ್ಷ ಸಂಘಟನೆ, ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಈ ತಿಂಗಳ 28ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ವಿಧಾನಸಭಾ ಚುನಾವಣೆ ನಂತರ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸುತ್ತಿರುವ ಷಾ, ಲೋಕಸಭಾ ಚುನಾವಣೆಗೂ ಹೊಸ ತಂತ್ರಗಳನ್ನು ರೂಪಿಸುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಪಕ್ಷದ ಸ್ಥಿತಿಗತಿ, ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದ ವೈಫಲ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ…

ಬಜೆಟ್ ಅಸಮತೋಲನ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಗೆ ನಾಂದಿ: ಶ್ರೀರಾಮುಲು
ಮೈಸೂರು

ಬಜೆಟ್ ಅಸಮತೋಲನ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಗೆ ನಾಂದಿ: ಶ್ರೀರಾಮುಲು

July 10, 2018

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ಬಜೆಟ್, ಪ್ರಾದೇಶಿಕ ಅಸಮತೋಲನದಿಂದ ಕೂಡಿದೆ. ಇದನ್ನು ಸರಿಪಡಿಸದಿದ್ದರೆ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಗೆ ಪುಷ್ಠಿ ನೀಡಿದಂತಾಗುತ್ತದೆ ಎಂದು ಮಾಜಿ ಸಚಿವ ಶ್ರೀರಾಮುಲು ಅಭಿಪ್ರಾಯಪಟ್ಟರು. ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸೋನಾರ್ ಬೀದಿಯ ಅವಧೂತ ಪೀಠದ ಶ್ರೀ ಅರ್ಜುನ್ ಗುರೂಜಿ ಯವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಹೆಚ್‍ಡಿಕೆ ಮಂಡಿಸಿರುವ ಬಜೆಟ್, ಕೇವಲ ಹಳೇ ಮೈಸೂರು ಪ್ರಾಂತ್ಯಕ್ಕೆ ಮಾತ್ರ ಸಿಮಿತವಾಗಿದೆ ಎಂಬ ಭಾವನೆ ಉತ್ತರ ಕರ್ನಾಟಕದ ಜನರಲ್ಲಿ ಮೂಡಿದೆ….

ಚಿತ್ರ ನಗರಿ ರಾಮನಗರಕ್ಕೆ ಸ್ಥಳಾಂತರಿಸಿದರೆ ಹೋರಾಟ: ಬಿಜೆಪಿ ಮುಖಂಡ ಜೆಪಿ ಎಚ್ಚರಿಕೆ
ಮೈಸೂರು

ಚಿತ್ರ ನಗರಿ ರಾಮನಗರಕ್ಕೆ ಸ್ಥಳಾಂತರಿಸಿದರೆ ಹೋರಾಟ: ಬಿಜೆಪಿ ಮುಖಂಡ ಜೆಪಿ ಎಚ್ಚರಿಕೆ

July 10, 2018

ಮೈಸೂರು:  ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿ ಗುರುತಿಸಲ್ಪಟ್ಟ ಸ್ಥಳದಲ್ಲಿಯೇ `ಫಿಲ್ಮ್ ಸಿಟಿ’ ನಿರ್ಮಾಣ ಮಾಡಬೇಕು. ರಾಜಕೀಯ ಪ್ರಭಾವದಿಂದ ರಾಮನಗರಕ್ಕೆ ಸ್ಥಳಾಂತರ ಮಾಡಲು ಮುಂದಾದರೆ ಚಲನಚಿತ್ರ ಕಲಾವಿದರು ಹಾಗೂ ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಬಿಜೆಪಿ ಮುಖಂಡ ಎಸ್.ಜಯಪ್ರಕಾಶ್ ಎಚ್ಚರಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರನಗರಿಗೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಿಮ್ಮಾವು ಬಳಿ 114…

ಮೈತ್ರಿ ಸರ್ಕಾರಕ್ಕೆ ಸದನದಲ್ಲಿ ಸೆಡ್ಡು ಹೊಡೆಯಲು ಬಿಜೆಪಿ ನಿರ್ಧಾರ
ಮೈಸೂರು

ಮೈತ್ರಿ ಸರ್ಕಾರಕ್ಕೆ ಸದನದಲ್ಲಿ ಸೆಡ್ಡು ಹೊಡೆಯಲು ಬಿಜೆಪಿ ನಿರ್ಧಾರ

July 3, 2018

ಬಿಜೆಪಿ ಶಾಸಕರ ಸಂಪರ್ಕದಲ್ಲಿರುವ ಕಾಂಗ್ರೆಸ್ ಎಚ್ಚರದಿಂದಿರಲು ತಮ್ಮವರಿಗೆ ಬಿಎಸ್‍ವೈ ಸೂಚನೆ ಬೆಂಗಳೂರು: ಅಧಿವೇಶನ ಆರಂಭಗೊಂಡ ಹಿನ್ನೆಲೆಯಲ್ಲಿ ಬಿಎಸ್ ಯಡಿಯೂರಪ್ಪನವರು ಸಮ್ಮಿಶ್ರ ಸರ್ಕಾರದ ವಿರುದ್ಧ ಪಕ್ಷದ ಹೋರಾಟ ಯಾವ ರೀತಿ ಇರಬೇಕು ಎನ್ನುವುದನ್ನು ಶಾಸಕರಿಗೆ ಹೇಳಿದ್ದಾರೆ. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಬಹುತೇಕ ಶಾಸಕರು ಭಾಗಿಯಾಗಿದ್ದರು. ಮಂಗಳವಾರ ದಿಂದ ಸದನದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಹಿನ್ನೆಲೆ ಯಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಯಾವೆಲ್ಲಾ ವಿಚಾರಗಳನ್ನು ಪ್ರಸ್ತಾಪಿಸಬೇಕೆಂಬ ಮಹತ್ವದ ಚರ್ಚೆ ನಡೆಸಲಾಯಿತು ಅಲ್ಲದೇ ನೂತನ ಶಾಸಕರಿಗೆ…

ಮಂಡ್ಯ ಲೋಕಸಭಾ ಕ್ಷೇತ್ರದ ಮೇಲೆ ಸಾಫ್ಟ್ ವೇರ್ ಉದ್ಯಮಿಗಳ ಕಣ್ಣು
ಮಂಡ್ಯ

ಮಂಡ್ಯ ಲೋಕಸಭಾ ಕ್ಷೇತ್ರದ ಮೇಲೆ ಸಾಫ್ಟ್ ವೇರ್ ಉದ್ಯಮಿಗಳ ಕಣ್ಣು

July 3, 2018

ಮಂಡ್ಯ: ಲೋಕಸಭಾ ಕ್ಷೇತ್ರದ ಮೇಲೆ ಐಟಿ ಉದ್ಯಮಿಗಳ ಕಣ್ಣು ಬಿದ್ದಿದೆ. ಕ್ಷೇತ್ರದ ಮೇಲೆ ಒಬ್ಬೊಬ್ಬರೇ ಒಲವು ತೋರುತ್ತಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣ ವಾಗಿದೆ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋಲು ಅನುಭವಿಸಿರೋ ಉದ್ಯಮಿ, ರೈತ ನಾಯಕ ದಿವಂಗತ ಕೆ.ಎಸ್. ಪುಟ್ಟಣ್ಣಯ್ಯ ಪುತ್ರ ದರ್ಶನ್ ಪುಟ್ಟಣ್ಣಯ್ಯ ಸ್ಪರ್ಧೆಗೆ ರೈತ ಸಂಘದ ಕೆಲ ಕಾರ್ಯಕರ್ತರು ಒತ್ತಡ ಹಾಕುತ್ತಿದ್ದಾರೆ. ದರ್ಶನ್ ಪುಟ್ಟಣ್ಣಯ್ಯ ತಮ್ಮ ಅಮೆರಿಕಾ ಕಂಪನಿಯನ್ನು ಮಾರಾಟ ಮಾಡಿ, ಮೈಸೂರಿನಲ್ಲಿ ವ್ಯವಹಾರ ಮಾಡೋ ಜೊತೆಗೆ ರೈತ ಹೋರಾಟ…

ಸ್ವಯಂಕೃತ ಅಪರಾಧದಿಂದ ಬಿಜೆಪಿಗೆ ಬಹುಮತ ಬರಲಿಲ್ಲ
ಮೈಸೂರು

ಸ್ವಯಂಕೃತ ಅಪರಾಧದಿಂದ ಬಿಜೆಪಿಗೆ ಬಹುಮತ ಬರಲಿಲ್ಲ

June 30, 2018

 ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಷಾದ ರಾಜ್ಯಪಾಲರು ನೀಡಿದ ಸಮಯಾವಕಾಶದಲ್ಲಿ ಬಹುಮತ ಸಾಬೀತುಪಡಿಸಬಹುದಿತ್ತು ಆದರೆ ಕೋರ್ಟ್ ಆದೇಶದಿಂದ ಕೈತಪ್ಪಿತು ಪಕ್ಷದ ಕಾರ್ಯಕಾರಣ ಯಲ್ಲಿ ವಿಚಾರ ಪ್ರಸ್ತಾಪ ಬೆಂಗಳೂರು: ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತಕ್ಕೆ ಬೇಕಾದ ಅಗತ್ಯ ಸಂಖ್ಯೆಯನ್ನು ಪಡೆಯ ದಿರಲು ಪಕ್ಷದ ಸ್ವಯಂಕೃತ ಅಪರಾಧವೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರು ಶುಕ್ರವಾರ ವಿಷಾದ ವ್ಯಕ್ತಪಡಿಸಿದ್ದಾರೆ. ಇಂದು ಬಿಜೆಪಿ ರಾಜ್ಯ ಕಾರ್ಯಕಾರಣ ಉದ್ಘಾಟಿಸಿ ಮಾತನಾಡಿದ ಬಿಎಸ್‍ವೈ, ವಿಧಾನಸಭೆ ಚುವಾವಣೆ…

ಸಿದ್ದರಾಮಯ್ಯ  ಸೈಲೆಂಟ್ ಬಾಂಬ್… ಬಿಜೆಪಿಗೆ ಪಥ್ಯ!?
ಮೈಸೂರು

ಸಿದ್ದರಾಮಯ್ಯ ಸೈಲೆಂಟ್ ಬಾಂಬ್… ಬಿಜೆಪಿಗೆ ಪಥ್ಯ!?

June 27, 2018

ಬೆಂಗಳೂರು: ಧರ್ಮಸ್ಥಳದ ಶಾಂತಿವನದಲ್ಲಿ ವಿಶ್ರಾಂತಿ ಪಡೆಯುತ್ತಿ ರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈತ್ರಿ ಸರ್ಕಾರದ ಬಗ್ಗೆ ನೀಡುತ್ತಿರುವ ಹೇಳಿಕೆಗಳು ಹತ್ತು-ಹಲವು ಅನುಮಾನ ಹಾಗೂ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಸಿದ್ದರಾಮಯ್ಯರ ಸೈಲೆಂಟ್ ಬಾಂಬ್‍ಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ಅಪಥ್ಯವಾದರೆ, ಬಿಜೆಪಿ ನಾಯಕರಿಗೆ ಪಥ್ಯವೆಂಬಂತೆ ಕಂಡುಬರುತ್ತಿದೆ. ಸಿದ್ದರಾಮಯ್ಯನವರ ಹೇಳಿಕೆಗಳ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ರಾಜಕೀಯ ವಿದ್ಯಮಾನಗಳು ಗರಿಗೆದರಿವೆ. ಸಿದ್ದರಾಮಯ್ಯನವರ ಹೇಳಿಕೆಯ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷರೂ ಆದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು…

ಲೋಕಸಭಾ ಚುನಾವಣೆಗೆ 28 ಕ್ಷೇತ್ರಕ್ಕೂ ಬಿಜೆಪಿ ಸಂಭವನೀಯರ ಪಟ್ಟಿ ರೆಡಿ
ಮೈಸೂರು

ಲೋಕಸಭಾ ಚುನಾವಣೆಗೆ 28 ಕ್ಷೇತ್ರಕ್ಕೂ ಬಿಜೆಪಿ ಸಂಭವನೀಯರ ಪಟ್ಟಿ ರೆಡಿ

June 26, 2018

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಿರುವ ರಾಜ್ಯ ಬಿಜೆಪಿ 28 ಲೋಕ ಸಭಾ ಕ್ಷೇತ್ರಗಳಿಗೂ ಸಂಭವನೀಯ ಪಟ್ಟಿ ಅಂತಿಮಗೊಳಿಸಿದೆ. ರಾಜ್ಯ ಮುಖಂಡರು ಆರ್‍ಎಸ್‍ಎಸ್ ನಾಯಕರೊಟ್ಟಿಗೆ ಚುನಾವಣೆ ಸಂಬಂಧ ಸುದೀರ್ಘ ಚರ್ಚೆ ನಡೆಸಿ, ಅಭ್ಯರ್ಥಿ ಗಳ ಆಯ್ಕೆಯನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ. ಬಹುತೇಕ ಹಾಲಿ ಸಂಸದರಿಗೆ ಮತ್ತೆ ಚುನಾವಣೆಗೆ ಸ್ಪರ್ಧಿ ಸಲು ಅವಕಾಶ ನೀಡಿದ್ದು, ಕಳೆದ ಚುನಾವಣೆಯಲ್ಲಿ ಜಯ ಗಳಿಸದ ಕ್ಷೇತ್ರಗಳಿಗೆ ಗೆಲ್ಲುವ ಅಭ್ಯರ್ಥಿಗೆ ಒತ್ತು ನೀಡಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ 17 ಸಂಸದರು ಗೆದ್ದಿದ್ದ ಬಿಜೆಪಿಗೆ ಈ…

1 9 10 11 12 13 15
Translate »