Tag: BJP

ಸಿಎಂ ಕುಮಾರಸ್ವಾಮಿ ಚಿತ್ತ ಬಿಜೆಪಿಯತ್ತ?
ಮೈಸೂರು

ಸಿಎಂ ಕುಮಾರಸ್ವಾಮಿ ಚಿತ್ತ ಬಿಜೆಪಿಯತ್ತ?

May 30, 2018

ಬೆಂಗಳೂರು: ಕಾಂಗ್ರೆಸ್ ಮುಖಂಡರ ವರ್ತನೆಯಿಂದ ಬೇಸತ್ತಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿಯತ್ತ ಒಲವು ತೋರಿದ್ದಾರೆ ಎಂದು ಹೇಳಲಾಗುತ್ತಿದ್ದು, ಸಂಪುಟ ವಿಸ್ತರಣೆಗೂ ಮುನ್ನವೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುರಿದು ಬೀಳುವ ಲಕ್ಷಣಗಳು ಕಂಡು ಬರುತ್ತಿವೆ. ಆರಂಭದಲ್ಲಿ ಬೇಷರತ್ ಬೆಂಬಲ ಎಂದು ಘೋಷಿಸಿದ್ದ ಕಾಂಗ್ರೆಸ್ ಮುಖಂಡರು ಖಾತೆ ಹಂಚಿಕೆ ವಿಚಾರದಲ್ಲಿ ಹಲವಾರು ಷರತ್ತುಗಳನ್ನು ವಿಧಿಸುತ್ತಿರುವುದರಿಂದ ಕುಮಾರಸ್ವಾಮಿ ಕಾಂಗ್ರೆಸ್ ಸಹವಾಸ ಸಾಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿಗಳು ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದು ಔಪಚಾರಿಕ ಎಂದು ಹೇಳಲಾಗುತ್ತಿದೆಯಾದರೂ, ಈ ವೇಳೆ…

ಮೈಸೂರಲ್ಲಿ ಸಾರಿಗೆ ಬಸ್ ತಡೆದ ಸಂಸದ, ಶಾಸಕರೂ ಸೇರಿದಂತೆ 75 ಮಂದಿ ಬಂಧನ
ಮೈಸೂರು

ಮೈಸೂರಲ್ಲಿ ಸಾರಿಗೆ ಬಸ್ ತಡೆದ ಸಂಸದ, ಶಾಸಕರೂ ಸೇರಿದಂತೆ 75 ಮಂದಿ ಬಂಧನ

May 29, 2018

ಮೈಸೂರು:  ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಬಿಜೆಪಿ ಕರೆ ನೀಡಿದ್ದ ಕರ್ನಾಟಕ ಬಂದ್ ಅನ್ನು ಮೈಸೂರಿನಲ್ಲಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆ ಬಸ್‍ಗಳ ಸಂಚಾರಕ್ಕೆ ಅಡ್ಡಿ ಪಡಿಸಲು ಮುಂದಾದ ಸಂಸದ ಪ್ರತಾಪ ಸಿಂಹ, ಶಾಸಕರುಗಳಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಸೇರಿದಂತೆ ಬಿಜೆಪಿಯ 75ಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೋಮವಾರ ಬೆಳಿಗ್ಗೆ ಪೊಲೀಸರು ಬಂಧಿಸಿ, ಮಧ್ಯಾಹ್ನ ಬಿಡುಗಡೆ ಮಾಡಿದರು. ರಾಜ್ಯ ಬಿಜೆಪಿ ಕರೆ ನೀಡಿದ್ದ ‘ಕರ್ನಾಟಕ ಬಂದ್’ ಹಿನ್ನೆಲೆಯಲ್ಲಿ ಮೈಸೂರಿನ ಬಸ್ ನಿಲ್ದಾಣ, ಬಸ್ ಡಿಪೋಗಳ…

ಸಿಎಂ ಹೆಚ್‍ಡಿಕೆ ನುಡಿದಂತೆ ನಡೆಯಲಿ
ಹಾಸನ

ಸಿಎಂ ಹೆಚ್‍ಡಿಕೆ ನುಡಿದಂತೆ ನಡೆಯಲಿ

May 29, 2018

ಅರಸೀಕೆರೆ: ನೂತನ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡ ಬೇಕೆಂದು ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಜಿ.ವಿ.ಟಿ ಬಸವರಾಜು ಆಗ್ರಹಿಸಿದರು. ತಾಲೂಕು ಬಿಜೆಪಿಯಿಂದ ನಗರದ ಪಿಪಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದ ಸಂದರ್ಭದಲ್ಲಿ ಕಾರ್ಯ ಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಹಾದಿ ಹಿಡಿದಿದ್ದು ಕೂಡಲೇ ಕುಮಾರಸ್ವಾಮಿಯವರು ತಾವು ನುಡಿ ದಂತೆ ನಡೆದುಕೊಂಡು ಸಾಲಮನ್ನಾ ಮಾಡ…

ರೈತರ ಸಾಲ ಮನ್ನಾ ಮಾಡಲು ಒತ್ತಾಯಿಸಿ ಇಂದು ಸ್ವಯಂ ಪ್ರೇರಿತ ರಾಜ್ಯ ಬಂದ್‍ಗೆ ಕರೆ ನೀಡಿದ ಬಿಜೆಪಿ: ಮೈಸೂರಲ್ಲಿ ಬಂದ್‍ಗೆ ಬೆಂಬಲ ಡೌಟು
ಮೈಸೂರು

ರೈತರ ಸಾಲ ಮನ್ನಾ ಮಾಡಲು ಒತ್ತಾಯಿಸಿ ಇಂದು ಸ್ವಯಂ ಪ್ರೇರಿತ ರಾಜ್ಯ ಬಂದ್‍ಗೆ ಕರೆ ನೀಡಿದ ಬಿಜೆಪಿ: ಮೈಸೂರಲ್ಲಿ ಬಂದ್‍ಗೆ ಬೆಂಬಲ ಡೌಟು

May 28, 2018

ಮೈಸೂರು: ರೈತರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ಮೇ 28ರಂದು ಬಿಜೆಪಿ ಕರೆ ನೀಡಿರುವ ರಾಜ್ಯಾದ್ಯಂತ ಸ್ವಯಂ ಪ್ರೇರಿತ ಬಂದ್‍ಗೆ ಮೈಸೂರು ನಗರದಲ್ಲಿ ಬೆಂಬಲ ದೊರೆಯುವುದು ಬಹುತೇಕ ಅನುಮಾನವಾಗಿದ್ದು, ಹೀಗಾಗಿ ದೈನಂದಿನ ಚಟುವಟಿಕೆಗಳು ಎಂದಿನಂತೆ ನಡೆಯುವ ಸಾಧ್ಯತೆ ಇದೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘ ಬಂದ್‍ಗೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಒಂದೆಡೆ ರೈತ ಸಂಘಟನೆಗಳೇ ಬಂದ್‍ನಿಂದ ಹಿಂದೆ ಸರಿದಿದ್ದು, ಮೈಸೂರು ಹೋಟೆಲ್ ಮಾಲೀಕರ ಸಂಘ ಸೇರಿದಂತೆ…

ಮೈಸೂರಲ್ಲಿ ಸ್ವಯಂ ಘೋಷಿತ ಬಂದ್‍ಗೆ ಬಿಜೆಪಿ ಕರೆ
ಮೈಸೂರು

ಮೈಸೂರಲ್ಲಿ ಸ್ವಯಂ ಘೋಷಿತ ಬಂದ್‍ಗೆ ಬಿಜೆಪಿ ಕರೆ

May 28, 2018

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿರುವಂತೆ ತಕ್ಷಣವೇ ರೈತರ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿ ಮೇ 28ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯಾದ್ಯಂತ ಸ್ವಯಂ ಘೋಷಿತ ಬಂದ್‍ಗೆ ಕರೆ ನೀಡಿದ್ದಾರೆ. ವಿಧಾನಸಭಾ ಚುನಾವಣೆ ಬಾಕಿ ಉಳಿದಿರುವ ಬೆಂಗಳೂರು ನಗರ ಹೊರತುಪಡಿಸಿ ರಾಜ್ಯಾದ್ಯಂತ ಸ್ವಯಂ ಘೋಷಿತ ಬಂದ್‍ಗೆ ಕರೆ ನೀಡಲಾಗಿದೆ ಎಂದು ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಚುನಾವಣಾ…

ಬಿಜೆಪಿಯಿಂದ ನಾಳೆ ಕೊಡಗು ಬಂದ್‍ಗೆ ಕರೆ
ಕೊಡಗು

ಬಿಜೆಪಿಯಿಂದ ನಾಳೆ ಕೊಡಗು ಬಂದ್‍ಗೆ ಕರೆ

May 27, 2018

ಮಡಿಕೇರಿ:  ಮುಖ್ಯಮಂತ್ರಿಯಾದರೂ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ರೈತರ ಸಾಲಮನ್ನಾ ಮಾಡದ ಕುಮಾರಸ್ವಾಮಿ ಸರ್ಕಾರದ ವಿರುದ್ದ ಮೇ.28 ರಂದು ಕೊಡಗು ಜಿಲ್ಲಾ ಬಂದ್‍ಗೆ ಬಿಜೆಪಿ ಕರೆ ನೀಡಿದೆ. ಜೆಡಿಎಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಕುಮಾರಸ್ವಾಮಿ ಅಧಿಕಾರಕ್ಕೆ ಬಂದ 24 ಗಂಟೆಯೊಳಗಾಗಿ ರಾಷ್ಟ್ರಿಕೃತ ಮತ್ತು ಸಹಕಾರ ಬ್ಯಾಂಕ್‍ಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕಿತ್ತು. ಆದರೆ ಈಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೂ ತಾನು ರೈತರಿಗೆ ನೀಡಿದ ಭರವಸೆಯನ್ನು ಮರೆತು ಬಿಟ್ಟಿದ್ದಾರೆ. ರೈತರ ಬಗೆಗಿನ ಕುಮಾರಸ್ವಾಮಿ ಕಾಳಜಿಯ ನಿಜಬಣ್ಣ…

ಮುಖಂಡರ ಒಳಒಪ್ಪಂದವೇ ಬಿಜೆಪಿ ಸೋಲಿಗೆ ಕಾರಣ: ಆಕ್ರೋಶ
ಹಾಸನ

ಮುಖಂಡರ ಒಳಒಪ್ಪಂದವೇ ಬಿಜೆಪಿ ಸೋಲಿಗೆ ಕಾರಣ: ಆಕ್ರೋಶ

May 27, 2018

ಬೇಲೂರು:  ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸೋಲಿಗೆ ಮುಖಂಡರೇ ನೇರ ಹೊಣೆಗಾರರಾಗಿದ್ದು, ತಕ್ಷಣವೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಕಾರ್ಯ ಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ಪಟ್ಟಣದಲ್ಲಿ ನಡೆಯಿತು. ಪಟ್ಟಣ ಮಂಜುನಾಥ ಕಲ್ಯಾಣ ಮಂಟಪ ದಲ್ಲಿ ಬಿಜೆಪಿ ಸೋಲಿನ ಆತ್ಮಾವಲೋಕನ ಸಭೆ ಏರ್ಪಡಿಸಲಾಗಿತ್ತು. ಬೇಲೂರು ಬಿಜೆಪಿ ಚುನಾವಣಾ ಉಸ್ತುವಾರಿ ನವಿಲೆ ಅಣ್ಣಪ್ಪ ಮಾತನಾಡುವ ವೇಳೆಯಲ್ಲಿ ಸಿಡಿಮಿಡಿ ಗೊಂಡ ಕಾರ್ಯಕರ್ತರು, ಇಲ್ಲಿನ ಮುಖಂ ಡರು ಬೇರೆ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಪ್ರಚಾರ ಕಾರ್ಯಕ್ಕೆ…

ಕಾಂಗ್ರೆಸ್‍ನಿಂದ ರಮೇಶ್ ಕುಮಾರ್, ಬಿಜೆಪಿಯಿಂದ ಸುರೇಶ್‍ಕುಮಾರ್ ಸ್ಪರ್ಧೆ
ಮೈಸೂರು

ಕಾಂಗ್ರೆಸ್‍ನಿಂದ ರಮೇಶ್ ಕುಮಾರ್, ಬಿಜೆಪಿಯಿಂದ ಸುರೇಶ್‍ಕುಮಾರ್ ಸ್ಪರ್ಧೆ

May 25, 2018

ಬೆಂಗಳೂರು: ವಿಧಾನಸಭಾ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನ ಮಾಜಿ ಸಚಿವ ರಮೇಶ್‍ಕುಮಾರ್, ಬಿಜೆಪಿಯ ಹಿರಿಯ ಸದಸ್ಯ ಸುರೇಶ್ ಕುಮಾರ್ ಪೈಪೋಟಿ ನಡೆಸಿದ್ದಾರೆ. ಸಭಾಧ್ಯಕ್ಷ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಕಡೇ ದಿನವಾದ ಇಂದು ಕಾಂಗ್ರೆಸ್, ಬಿಜೆಪಿಯ ಸದಸ್ಯರು ನಾಮಪತ್ರ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಾಳೆ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಮಾಡು ವುದಕ್ಕೂ ಮುನ್ನವೇ ಸಭಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿ ರಮೇಶ್‍ಕುಮಾರ್ ಕಣಕ್ಕಿಳಿದಿರುವುದರಿಂದ ಅವರ ಆಯ್ಕೆ ಬಹುತೇಕ ಖಚಿತ. ವಿಧಾನಸಭೆಯಲ್ಲಿ…

ಹಲವಾರು ಮಂದಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ
ಚಾಮರಾಜನಗರ

ಹಲವಾರು ಮಂದಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ

May 7, 2018

ಚಾಮರಾಜನಗರ: ತಾಲೂಕಿನ ಬ್ಯಾಡಮೂಡ್ಲು ಹಾಗೂ ದೊಳ್ಳೀಪುರ ಗೌತಮ್ ಕಾಲೋನಿಯಲ್ಲಿ 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಜಿಲ್ಲಾ ಕಾರ್ಯಕಾರಿಣ ಸದಸ್ಯ ಮಂಗಲಶಿವಕುಮಾರ್, ಮುಖಂಡ ಹನುಮಂತಶೆಟ್ಟಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ತಾಲೂಕಿನ ದೊಡ್ಡಮೋಳೆಯಲ್ಲಿ ಕಾಂಗ್ರೆಸ್‍ನ ಅಂಕಶೆಟ್ಟಿ, ಮಾದಶೆಟ್ಟಿ, ಚಿಕ್ಕಅಂಕಶೆಟ್ಟಿ, ನಾರಾಯಣಸ್ವಾಮಿ, ನಟರಾಜು, ಶ್ರೀನಿವಾಸ, ಶಿವಕುಮಾರ್, ರಂಗಸ್ವಾಮಿ, ನಿಂಗಶೆಟ್ಟಿ, ಸಿದ್ದಪ್ಪ, ನಿಂಗಶೆಟ್ಟಿ ಬಂಗಾರು ಹಾಗೂ ದೊಳ್ಳೀಪುರ ಗೌತಮ್ ಕಾಲೋನಿಯಲ್ಲಿ ಕಾಂಗ್ರೆಸ್ ಶಿವಸ್ವಾಮಿ, ಶಂಕರ್, ಮಹೇಶ್, ಕೃಷ್ಣ, ಮಹೇಶ್, ಮಹದೇವಶೆಟ್ಟಿ, ನಂಜಶೆಟ್ಟಿ, ಬಸವಣ್ಣ, ಕುಮಾರ್, ಶಿವರುದ್ದ, ಆರ್.ಮಹೇಶ್, ಸುಬ್ಬಣ್ಣಪುಟ್ಟರಾಚಶೆಟ್ಟಿ ಸೇರಿದಂತೆ…

‘ಕೈ’ ಭದ್ರಕೋಟೆಯಲ್ಲಿ `ಕಮಲ’ ಅರಳಿಸಲು ಸರ್ಕಸ್
ಚಾಮರಾಜನಗರ

‘ಕೈ’ ಭದ್ರಕೋಟೆಯಲ್ಲಿ `ಕಮಲ’ ಅರಳಿಸಲು ಸರ್ಕಸ್

May 6, 2018

ಚಾಮರಾಜನಗರ:  ಜಿಲ್ಲೆಯು ಕಾಂಗ್ರೆಸ್‍ನ ಭದ್ರಕೋಟೆ. ಇದು 2008 ಮತ್ತು 2013ರಲ್ಲಿ ವಿಧಾನಸಭಾ ಚುನಾವಣೆ ಹಾಗೂ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಈ `ಕೈ’ ಕೋಟೆಯ ಮೇಲೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಾದರೂ ‘ಕಮಲ’ ವನ್ನು ಅರಳಿಸಬೇಕು ಎಂದು ಬಿಜೆಪಿ ಅವಿರತ ಪ್ರಯತ್ನ ನಡೆಸಿದೆ. ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ `ಕೈ’ಯ ಕೋಟೆಯಾಗಿದೆ. 2008 ಮತ್ತು 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ 4 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿತ್ತು. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ…

1 11 12 13 14 15
Translate »