ಕೊಳ್ಳೇಗಾಲ: ಜಿಲ್ಲೆಯ ಹನೂರು ತಾಲೂಕಿನ ಸುಳವಾಡಿ ಗ್ರಾಮ ದಲ್ಲಿ ಸಂಭವಿಸಿದ ದುರಂತಕ್ಕೆ ಸಂಬಂ ಧಿಸಿದಂತೆ ಆರೋಪಿಗಳ ವಿರುದ್ಧ ನಿರ್ದಾ ಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ. ಇಂತಹ ಪ್ರಕರಣ ಮರುಕಳಿಸಬಾರದು. ಜ.21 ರಿಂದ ನಡೆಯುವ ಚಿಕ್ಕಲ್ಲೂರು ಜಾತ್ರೆಯ ವೇಳೆ ಪ್ರಸಾದ ವಿತರಣೆ ವೇಳೆ ಎಚ್ಚರ ವಹಿಸಬೇಕು. ಸುಳವಾಡಿಯಂತೆ ಏನಾ ದರೂ ದುರಂತ ಸಂಭವಿಸಿದರೆ ಚಿಕ್ಕಲ್ಲೂರು ಹಳೆ ಮತ್ತು ಹೊಸ ಮಠದ ಸಮಿತಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗು ವುದು ಎಂದು ಜಿಲ್ಲಾ ಪೊಲೀಸ್ ವರಿ ಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಎಚ್ಚರಿಕೆ…
ರೈತರು ಕೃಷಿ ಇಲಾಖೆಯೊಂದಿಗೆ ಸಂಪರ್ಕ ಹೊಂದಲು ಸಲಹೆ
January 10, 2019ಗುಂಡ್ಲುಪೇಟೆ: ಕೃಷಿ ಇಲಾಖೆಯು ರೈತಾಪಿ ವರ್ಗಕ್ಕೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು, ಇದನ್ನು ಪಡೆದುಕೊಳ್ಳಲು ಕೃಷಿ ಇಲಾಖೆಯ ಜೊತೆ ರೈತರು ನಿರಂತರವಾಗಿ ಸಂಪರ್ಕ ಹೊಂದ ಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಘವಾಪುರ ದೇವಯ್ಯ ಕಿವಿ ಮಾತು ಹೇಳಿದರು. ತಾಲೂಕಿನ ರಾಘವಾಪುರ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಬೇಸಾಯ ಚಟುವಟಿಕೆಗಳು ಹಾಗೂ ಬೀಜೋಪ ಚಾರ ಆಂದೋಲನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಳೆಯಾಶ್ರಿತ ಪ್ರದೇಶವಾದ ಇಲ್ಲಿ ರೈತರು ಹವಾಮಾನಕ್ಕೆ ಅನುಗುಣವಾಗಿ ಬೆಳೆ ಬೆಳೆ ಯುವ ಪದ್ಧತಿ…
ವಿಷಪ್ರಾಶನ ಪ್ರಕರಣ: ಮತ್ತೆ 6 ಮಂದಿ ಆಸ್ಪತ್ರೆಗೆ ದಾಖಲು
January 10, 2019ಕೊಳ್ಳೇಗಾಲ: ಹನೂರು ತಾಲೂಕಿನ ಸುಳವಾಡಿ ಕಿಚ್ಗುತ್ ಮಾರಮ್ಮ ದೇವಾಲಯದ ವಿಷ ಪ್ರಸಾದ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ವಸ್ಥಗೊಂಡು ಮೈಸೂರಿನ ಖಾಸಗಿ ಆಸ್ಪ ತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಹಿಂತಿರುಗಿದ್ದವರ ಪೈಕಿ ಮತ್ತೆ 6 ಮಂದಿ ಅಸ್ವಸ್ಥಗೊಂಡು ಪಟ್ಟಣ ಸರ್ಕಾರಿ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂ.ಜಿ.ದೊಡ್ಡಿ ಗ್ರಾಮದ ರೇಖಾ, ಮಲ್ಲಿಗೆ, ಪಳನಿಯಮ್ಮ, ವೀರಮ್ಮ, ಪಳನಿ ಹಾಗೂ ಕಮಲ ಎಂಬುವವರು ಬುಧವಾರ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾದವರು. ಈ 6 ಮಂದಿಗೂ ಮಂಗಳವಾರ ಮಧ್ಯರಾತ್ರಿ ಹೊಟ್ಚೆ…
ಪತ್ನಿ ಆತ್ಮಹತ್ಯೆ: ಪತಿ, ಅತ್ತೆಗೆ 3ವರ್ಷ ಸಜೆ
January 10, 2019ಚಾಮರಾಜನಗರ: ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾ ಗಿದ್ದ ಪತಿ ಹಾಗೂ ಅತ್ತೆಗೆ 3ವರ್ಷ ಸಾದಾ ಸಜೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ನಗರದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದ ಎಸ್.ಆರ್.ರಂಗಯ್ಯ ಅವರ ಮಗ ಗೋಪಾಲಸ್ವಾಮಿ ಹಾಗೂ ಇವರ ತಾಯಿ ಚಿನ್ನಮ್ಮ ಶಿಕ್ಷೆಗೆ ಒಳಗಾದವರು. ಘಟನೆಯ ವಿವರ: ಸೋಮಹಳ್ಳಿ ಗ್ರಾಮದ ಗೋಪಾಲಸ್ವಾಮಿ ತನ್ನ ಪತ್ನಿ ತ್ರಿವೇಣಿಗೆ ಕೆಟ್ಟ ಶಬ್ದಗಳಿಂದ ನಿಂದಿಸಿ ಜಗಳ ಮಾಡುತ್ತಿದ್ದನು. ಪತ್ನಿಯ ಶೀಲ…
ಭಾರತ್ ಬಂದ್: 2ನೇ ದಿನ ಜಿಲ್ಲಾದ್ಯಂತ ನೀರಸ ಪ್ರತಿಕ್ರಿಯೆ
January 10, 2019ಜಿಲ್ಲಾ ಕೇಂದ್ರದಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ಮೆರವಣಿಗೆ, ಎಂದಿನಂತೆ ಜನ ಜೀವನ ಚಾಮರಾಜನಗರ: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡನೇ ದಿನದ ಭಾರತ್ ಬಂದ್ಗೆ ಜಿಲ್ಲೆಯಲ್ಲಿ ಬಹುತೇಕ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಗಳವಾರ ರಜೆ ಘೋಷಣೆಯಾಗಿದ್ದ ಶಾಲಾ-ಕಾಲೇ ಜುಗಳು ಇಂದು ತೆರೆದಿತ್ತು. ಬಸ್-ಆಟೋ ಸಂಚಾರ ಸಹಜವಾಗಿತ್ತು. ಬ್ಯಾಂಕ್, ಸರ್ಕಾರಿ ಕಚೇರಿ, ಪೆಟ್ರೋಲ್ಬಂಕ್, ಚಿತ್ರ ಮಂದಿರ, ಹೊಟೇಲ್ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಜಿಲ್ಲೆಯ ಚಾಮರಾಜನಗರ, ಕೊಳ್ಳೇ ಗಾಲದಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಉಳಿದಂತೆ ಯಳಂ ದೂರು,…
ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ನಗರಸಭೆಗೆ ಮುತ್ತಿಗೆ
January 8, 2019ಕೊಳ್ಳೇಗಾಲ: ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಇಲ್ಲಿನ ನಗರಸಭೆಗೆ ಮುತ್ತಿಗೆ ಹಾಕಿದ 1ನೇ ವಾರ್ಡ್ ನಿವಾಸಿಗಳು, ಸಿಬ್ಬಂದಿಯನ್ನು ಹೊರ ಕಳುಹಿಸಿ ಕಚೇರಿ ಬಾಗಿಲು ಹಾಕಿ ಪ್ರತಿಭಟಿಸಿದರು. ನಗರಸಭೆ ಎದುರು ಜಮಾಯಿಸಿದ 1ನೇ ವಾರ್ಡ್ ನಿವಾಸಿಗಳು ವಿವಿಧ ಸಂಘಟನೆ ಗಳ ಮುಖಂಡರ ನೇತೃತ್ವದಲ್ಲಿ ನಗರಸಭೆ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರಲ್ಲದೆ, ಕರ್ತವ್ಯದಲ್ಲಿದ್ದ ನೌಕರ ರನ್ನು ಹೊರ ಕಳಿಹಿಸಿ ಕಚೇರಿ ಬಾಗಿಲು ಹಾಕಿದರು. ಇದೇ ವೇಳೆ ಖಾಲಿ ಕೊಡ ಪ್ರದರ್ಶಿಸಿ, ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿದರು. ಆರು…
ಕೆಲ ದೃಶ್ಯ ಮಾಧ್ಯಮಗಳ ವಿರುದ್ಧ ಉಪ್ಪಾರರ ಪ್ರತಿಭಟನೆ
January 8, 2019ಚಾಮರಾಜನಗರ: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟ ರಂಗಶೆಟ್ಟಿ ಅವರನ್ನು ಅಸಂವಿಧಾನಿಕ ಪದಗಳನ್ನು ಬಳಸಿ ನಿಂದಿಸಿರುವ ಕೆಲವು ಸುದ್ದಿ ಚಾನಲ್ಗಳ ಮಾನ್ಯತೆಯನ್ನು ರದ್ದು ಮಾಡಬೇಕು ಹಾಗೂ ವಾರ್ತಾ ವಾಚಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಉಪ್ಪಾರ ಸಮಾಜದಿಂದ ನಗರದಲ್ಲಿ ಸೋಮವಾರ ಭಾರೀ ಪ್ರತಿಭಟನೆ ನಡೆಯಿತು. ಜಿಲ್ಲಾ ಉಪ್ಪಾರ ಯುವಕರ ಸಂಘದ ಆಶ್ರಯದಲ್ಲಿ ಇಲ್ಲಿನ ಪ್ರವಾಸಿ ಮಂದಿರದ ಆವರಣದಲ್ಲಿ ಜಮಾಯಿಸಿದರ ಉಪ್ಪಾರ ಸಮಾಜದವರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಸಚಿವ…
ದೇಶವ್ಯಾಪಿ ಬಂದ್: ವಿವಿಧ ಸಂಘಟನೆಗಳ ಬೆಂಬಲ
January 8, 2019ಚಾಮರಾಜನಗರ: ಕಾರ್ಮಿಕ ಸಂಘಟನೆಗಳ ಬಂದ್ ಕರೆ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಜ.8 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಆದೇಶ ಹೊರಡಿಸಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಜ.8, 9ರಂದು ದೇಶವ್ಯಾಪಿ ಬಂದ್ಗೆ ಕರೆ ನೀಡಿದ್ದು, ಮುನ್ನೆಚ್ಚರಿಕಾ ದೃಷ್ಟಿಯಿಂದ ಜಿಲ್ಲೆಯಲ್ಲಿ ಎಲ್ಲಾ ಶಾಲಾ-ಕಾಲೇಜುಗಳಿಗೆ ಜ.8 ರಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ರಜೆ ಘೋಷಿಸಿದ್ದಾರೆ. ದೇಶವ್ಯಾಪಿ ಬಂದ್ ಹಿನ್ನೆಲೆ ಜಿಲ್ಲೆಯಲ್ಲೂ ಸಹ ಕಾರ್ಮಿಕ ಸಂಘ ಟನೆಗಳು ಬಂದ್ಗೆ ಕರೆ ನೀಡಿದ್ದು, ಸಾರಿಗೆ ನೌಕರರು ಬೆಂಬಲ ಸೂಚಿಸಿದ್ದಾರೆ….
ಬೆಂಬಲ ಬೆಲೆಯಡಿ ರಾಗಿ ಖರೀದಿಗೆ ನೋಂದಣಿ ಆರಂಭ
January 4, 2019ಚಾಮರಾಜನಗರ: ಜಿಲ್ಲೆಯಲ್ಲಿ ಕನಿಷ್ಠ ಬೆಂಬಲಬೆಲೆ ಯೋಜನೆಯಡಿ 2018- 19ನೇ ಸಾಲಿನ ಮುಂಗಾರು ಋತುವಿನಲ್ಲಿ ರೈತರಿಂದ ನೇರವಾಗಿ ರಾಗಿ ಖರೀದಿಸಲು ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಜ. 15ರವರೆಗೆ ನೋಂದಣಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದ್ದಾರೆ. ರಾಗಿಯನ್ನು ಪ್ರತಿ ಕ್ವಿಂಟಾಲ್ಗೆ 2,897 ರೂ.ಗಳಂತೆ ದರವನ್ನು ಸರ್ಕಾರ ನಿಗದಿ ಪಡಿಸಿದೆ. ಸಣ್ಣ ಮತ್ತು ಅತಿ ಸಣ್ಣ ರೈತ ರಿಂದ ಮಾತ್ರ ರಾಗಿ ಖರೀದಿಸಲಾಗು ತ್ತಿದ್ದು, ಗರಿಷ್ಠ 75 ಕ್ವಿಂಟಾಲ್ಗೆ ಮೀರದಂತೆ ರೈತರಿಂದ ಖರೀದಿ ಮಾಡಲಾಗುತ್ತದೆ. ರೈತರು ಬೆಳೆದಿರುವ ರಾಗಿಯನ್ನು ನೋಂದಣಿ…
ಹಾಲಹಳ್ಳಿಯಲ್ಲಿ ಹೆಚ್ಎಸ್ಎಂ 2ನೇ ವರ್ಷದ ಪುಣ್ಯಾರಾಧನೆ
January 4, 2019ಗುಂಡ್ಲುಪೇಟೆ: ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ಹೆಚ್.ಎಸ್.ಮಹದೇವಪ್ರಸಾದ್ ಅವರ 2ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮ ಗುರುವಾರ ನಡೆಯಿತು. ಹಾಲಹಳ್ಳಿಯಲ್ಲಿರುವ ಮಾಜಿ ಸಚಿವ ಮಹದೇವಪ್ರಸಾದ್ ಅವರ ಸ್ವಗೃಹದಲ್ಲಿ ಬೆಳಿಗ್ಗೆ ಮಾದಾಪಟ್ಟಣ ಮಠಾಧ್ಯಕ್ಷ ಸದಾ ಶಿವ ಸ್ವಾಮೀಜಿಗಳ ಪಾದಪೂಜೆಯೊಂದಿಗೆ ಆರಾಧನೆ ಕಾರ್ಯಕ್ರಮ ನಡೆಸಲಾಯಿತು. ನಂತರ ಗ್ರಾಮದ ಹೊರವಲಯದಲ್ಲಿ ರುವ ಬೊಗ್ಗನಪುರ ನರ್ಸರಿ ಫಾರಂ ನಲ್ಲಿರುವ ಮಹದೇವಪ್ರಸಾದ್ ಅವರ ಸಮಾ ಧಿಗೆ ಮಾಜಿ ಸಚಿವೆ ಡಾ.ಗೀತಾಮಹದೇವ ಪ್ರಸಾದ್, ಪುತ್ರ ಹೆಚ್.ಎಂ.ಗಣೇಶಪ್ರಸಾದ್ ಮತ್ತು ಕುಟುಂಬಸ್ಥರು ತೆರಳಿ ಪುಷ್ಪನಮನ ಸಲ್ಲಿಸಿದರು. ಈ ವೇಳೆ…










