Tag: Chamarajanagar

ಬಾಲಕರಿಬ್ಬರು ಕೆರೆಯಲ್ಲಿ ಜಲಸಮಾಧಿ
ಚಾಮರಾಜನಗರ

ಬಾಲಕರಿಬ್ಬರು ಕೆರೆಯಲ್ಲಿ ಜಲಸಮಾಧಿ

October 12, 2018

ಬೇಗೂರು: ಸಮೀಪದ ಬೆಳಚಲವಾಡಿ ಗ್ರಾಮದ ಕೆರೆಗೆ ಈಜಲು ತೆರಳಿದ್ದ ಬಾಲಕರಿಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ. ಬೆಳಚಲವಾಡಿ ಗ್ರಾಮದ ಶಿವಣ್ಣ ಎಂಬುವರ ಮಗ ಬೇಗೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ 10 ನೇತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಚಂದನ್(17) ಹಾಗೂ ಇದೇ ಗ್ರಾಮದ ಮಹೇಶ್ ಎಂಬು ವರ ಮಗ 9ನೇ ತರಗತಿಯ ಪ್ರವೀಣ್ (15) ಮೃತಪಟ್ಟವರು. ಈ ಇಬ್ಬರು ಬಾಲಕರು ಬುಧವಾರ ಶಾಲೆಯಲ್ಲಿ ನಡೆದ ವಿಶ್ವಾಸ ಕಿರಣ ತರಗತಿಗೆ ಹಾಜರಾಗಿ ಮಧ್ಯಾಹ್ನ ಮನೆಗೆ ತೆರಳಿದ್ದು, ನಂತರ ಡ್ಯಾನ್ಸ್ ತರಗತಿಗೆ ತೆರಳುವುದಾಗಿ ಹೇಳಿ…

ನಾಳೆಯಿಂದ ಚಾಮರಾಜನಗರದಲ್ಲಿ ದಸರಾ
ಚಾಮರಾಜನಗರ

ನಾಳೆಯಿಂದ ಚಾಮರಾಜನಗರದಲ್ಲಿ ದಸರಾ

October 12, 2018

ಚಾಮರಾಜನಗರ: ಚಾ.ನಗರದಲ್ಲಿ ಅ.13ರಿಂದ 16ರವರೆಗೆ ಆಯೋಜಿಸಿರುವ ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆ, ರಂಗೋಲಿ ಸ್ಪರ್ಧೆ, ರೈತ ದಸರಾ, ದಸರಾ ನಡಿಗೆ ಹಾಗೂ ಚಲನಚಿತ್ರೋತ್ಸವ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು. ನಗರದ ಜಿಲ್ಲಾಡಳಿತ ಭವನದ ಜಿಪಂ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಅವರು ದಸರಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಪ್ರತಿದಿನ ಸಂಜೆ 4.30ರಿಂದ ರಾತ್ರಿ 10.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮೊದಲ…

ಪಿಂಚಣಿ ಪಾವತಿಗೆ ಒತ್ತಾಯಿಸಿ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ
ಚಾಮರಾಜನಗರ

ಪಿಂಚಣಿ ಪಾವತಿಗೆ ಒತ್ತಾಯಿಸಿ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ

October 11, 2018

ಗುಂಡ್ಲುಪೇಟೆ:  ಕಳೆದ ನಾಲ್ಕೈದು ತಿಂಗಳಿನಿಂದ ಪಿಂಚಣಿ ಪಾವತಿಸಿಲ್ಲದಿರುವ ಬಗ್ಗೆ ತಾಲೂಕಿನ ವಿವಿಧ ಗ್ರಾಮದ ಫಲಾನು ಭವಿಗಳು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಕೂಡಲೇ ಪಿಂಚಣಿ ಪಾವತಿಗೆ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಸಿ.ಭಾರತಿ ಅವರನ್ನು ಒತ್ತಾಯಿಸಿದರು. ತಾಲೂಕಿನ ಕೊಡಸೋಗೆ, ಸೋಮನಪುರ, ಕಡತಾಳಕಟ್ಟೆಹುಂಡಿ, ಶೀಲ ವಂತಪುರ ಗ್ರಾಮಗಳ ಸುಮಾರು 100ಕ್ಕೂ ಹೆಚ್ಚಿನ ಫಲಾನುಭವಿಗಳು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಬಾಕಿ ಯುಳಿದಿರುವ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲರ ಪಿಂಚಣಿ ಪಾವತಿಗೆ ಒತ್ತಾಯಿಸಿದರು. ಬ್ಯಾಂಕುಗಳಲ್ಲಿ ಶೂನ್ಯ ಖಾತೆ ಹೊಂದಿರುವವರ ಖಾತೆಗೆ ಯಾವುದೇ…

ಅ.13ರಿಂದ ಚಾಮರಾಜನಗರದಲ್ಲಿ ದಸರಾ ಮಹೋತ್ಸವ
ಚಾಮರಾಜನಗರ

ಅ.13ರಿಂದ ಚಾಮರಾಜನಗರದಲ್ಲಿ ದಸರಾ ಮಹೋತ್ಸವ

October 10, 2018

ಚಾಮರಾಜನಗರ: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಭಾಗವಾಗಿ ಚಾಮರಾಜನಗರ ದಲ್ಲೂ ಅ.13ರಂದು ಚಾಲನೆ ನೀಡಲಾಗುವುದು. ಜಿಲ್ಲಾ ಕೇಂದ್ರವಾದ ಬಳಿಕ ಚಾಮರಾಜ ನಗರದಲ್ಲಿ 5ನೇ ವರ್ಷದ ದಸರಾ ಕಾರ್ಯಕ್ರಮವನ್ನು ಇಲ್ಲಿನ ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ನಡೆಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಬೃಹತ್ ವೇದಿಕೆ ಸಿದ್ಧಗೊಳ್ಳುತ್ತಿದೆ. ಅ.13ರಿಂದ 16ರವರೆಗೆ (4 ದಿನಗಳು) ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸ್ಥಳೀಯ ಹಾಗೂ ರಾಜ್ಯ ಮಟ್ಟದ ಕಲಾವಿದರು ಪಾಲ್ಗೊಳ್ಳುತ್ತಿರುವುದರಿಂದ ಮಹೋತ್ಸವಕ್ಕೆ ಮತ್ತಷ್ಟು ಮೆರಗು ನೀಡಿದೆ. ಅ.13ರಂದು ಬೆಳಿಗ್ಗೆ 10ಗಂಟೆಗೆ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದಲ್ಲಿ…

ಕಡಜ ದಾಳಿ; ಯುವಕ ಸಾವು
ಚಾಮರಾಜನಗರ

ಕಡಜ ದಾಳಿ; ಯುವಕ ಸಾವು

October 9, 2018

ಚಾಮರಾಜನಗರ:  ಕಡಜ ದಾಳಿಯಿಂದ ತೀವ್ರವಾಗಿ ಗಾಯ ಗೊಂಡಿದ್ದ ಯುವಕ ಸಾವನ್ನಪಿರುವ ಘಟನೆ ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ಬಂಡಿಗೆರೆ ಗ್ರಾಮದಲ್ಲಿ ನಡೆದಿದೆ. ಬಂಡಿಗೆರೆ ಗ್ರಾಮದ ಸಿದ್ದರಾಜು ಎಂಬುವರ ಮಗ ಮಹೇಶ್ (22) ಕಡಜ ದಾಳಿಗೆ ಬಲಿಯಾದ ಯುವಕ. ಘಟನೆ ವಿವರ: ಭಾನುವಾರ ಸಂಜೆ ಮಹೇಶ್ ಜೆಸಿಬಿಯಲ್ಲಿ ಹರದನಹಳ್ಳಿ ಬಳಿಯ ಜಮೀನಿನಲ್ಲಿ ಗಿಡಗಳನ್ನು ಕೀಳುತ್ತಿದ್ದರು. ಈ ವೇಳೆ ಗಿಡಗಳ ಮಧ್ಯೆ ಇದ್ದ ಕಡಜ ಮಹೇಶ್ ಮೇಲೆ ದಾಳಿ ನಡೆಸಿ ಎಲ್ಲೆಡೆ ಕಚ್ಚಿತು. ಇದರಿಂದ ತೀವ್ರವಾಗಿ ಗಾಯಗೊಂಡ ಮಹೇಶ್‍ನನ್ನು ನಗರದ ಜಿಲ್ಲಾ…

ಅ.21, ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆಗೆ ನಿರ್ಧಾರ
ಚಾಮರಾಜನಗರ

ಅ.21, ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆಗೆ ನಿರ್ಧಾರ

October 9, 2018

ಚಾಮರಾಜನಗರ:  ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲರ ಸಹಕಾರದೊಂದಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜಯಂತಿ ಕಾರ್ಯಕ್ರಮವನ್ನು ಅ.21ರಂದು ಚಾ.ನಗರದಲ್ಲಿ ಅರ್ಥಪೂರ್ಣ ಹಾಗೂ ವ್ಯವಸ್ಥಿತವಾಗಿ ಆಚರಿಸಲು ತೀರ್ಮಾನಿಸಲಾಯಿತು. ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಲು ನಿರ್ಧಾರ ಮಾಡಲಾಯಿತು. ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮಾತನಾಡಿ, ಈ ಹಿಂದೆ ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಗಿತ್ತು. ಜಯಂತಿ ಕಾರ್ಯಕ್ರಮ…

ನ್ಯಾಯ ಒದಗಿಸುವಲ್ಲಿ ವಕೀಲರ ಪಾತ್ರ ಹಿರಿದು
ಚಾಮರಾಜನಗರ

ನ್ಯಾಯ ಒದಗಿಸುವಲ್ಲಿ ವಕೀಲರ ಪಾತ್ರ ಹಿರಿದು

October 8, 2018

ಚಾಮರಾಜನಗರ: ಕಕ್ಷಿದಾರರುಗಳಿಗೆ ಉತ್ತಮ ನ್ಯಾಯ ಒದಗಿಸುವಲ್ಲಿ ವಕೀಲರ ಪಾತ್ರ ಹಿರಿದು ಎಂದು ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಬಿ.ಎಂ. ಶ್ಯಾಮ್ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಇರುವ ಜಿಲ್ಲಾ ವಕೀಲರ ಸಂಘಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ವಕೀಲರನ್ನು ಉದ್ದೇಶಿಸಿ ಮಾತನಾಡಿದರು. ವಕೀಲ ವೃತ್ತಿಯು ಪವಿತ್ರ ವಾಗಿದ್ದು, ಇದಕ್ಕೆ ಅವಿರತ ಶ್ರಮವಿರಬೇಕು. ವಕೀಲರು ಸದಾಕಾಲ ಓದಿನಲ್ಲಿ ತೊಡಗಿರಬೇಕು. ವಕೀಲರು ಇಂಗ್ಲೀಷ್ ಭಾಷೆಯನ್ನು ಕಲಿಯಬೇಕು, ಭಾಷೆ ಬಳಕೆಯಲ್ಲಿ ಯಾವುದೇ…

ರಾಮಾಪುರ ಪ್ರೌಢ ಶಾಲೆಯಲ್ಲಿ ಕಿಡಿಗೇಡಿಗಳ ದಾಂಧಲೆ
ಚಾಮರಾಜನಗರ

ರಾಮಾಪುರ ಪ್ರೌಢ ಶಾಲೆಯಲ್ಲಿ ಕಿಡಿಗೇಡಿಗಳ ದಾಂಧಲೆ

October 8, 2018

ಹನೂರು:  ಸಮೀ ಪದ ರಾಮಾಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬಾಗಿಲು ಮುರಿದು ಕೊಠಡಿಯಲ್ಲಿದ್ದ ಪೀಠೋಪಕರಣ ಹಾಗೂ ಇತರ ಉಪಕರಣಗಳನ್ನು ಕಿಡಿಗೇಡಿಗಳು ನಾಶ ಪಡಿಸಿರುವ ಘಟನೆ ನಡೆದಿದೆ. ಶನಿವಾರ ರಾತ್ರಿ ಶಾಲೆಯ ಕಬ್ಬಿಣದ ಗೇಟ್ ಮತ್ತು ಮರದ ಎರಡು ಕೊಠಡಿಗಳ ಬಾಗಿಲು ಮುರಿದು ಮುಖ್ಯ ಶಿಕ್ಷಕರ ಕೊಠಡಿ ಹಾಗೂ ಸಿಬ್ಬಂದಿಗಳ ಕೊಠಡಿಯಲ್ಲಿರುವ ಪೀಠೋಪಕರಣಗಳು ಸೇರಿದಂತೆ ರೇಡಿಯೋ, ಟಿವಿ, ಕಿಟಕಿ, ಬಾಗಿಲು ಸೇರಿದಂತೆ ಲಕ್ಷಾಂತರ ಬೆಲೆ ಬಾಳುವ ಉಪಕರಣಗಳನ್ನು ನಾಶಪಡಿಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಂಡ ಭೇಟಿ ನೀಡಿ…

ಮೂವರ ಆತ್ಮಹತ್ಯೆ ಯತ್ನಕ್ಕೂ ನನಗೂ ಸಂಬಂಧ ಇಲ್ಲ
ಚಾಮರಾಜನಗರ

ಮೂವರ ಆತ್ಮಹತ್ಯೆ ಯತ್ನಕ್ಕೂ ನನಗೂ ಸಂಬಂಧ ಇಲ್ಲ

October 8, 2018

ಚಾಮರಾಜನಗರ:  ತಾಲೂಕಿನ ಬೇಡರಪುರ ಗ್ರಾಮದ ಮಲ್ಲಯ್ಯ ಅವರ ಕುಟುಂಬ ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ದ್ದಕ್ಕೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಅವರು ಮಾಡಿರುವ ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರ ವಾದದ್ದು ಎಂದು ಅದೇ ಗ್ರಾಮದ ರೈತ ಎಂ.ಶಿವಪ್ಪ ಸ್ಪಷ್ಟನೆ ನೀಡಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಭವನದಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೇಡರಪುರ ಗ್ರಾಮದ ಸರ್ವೇ ನಂ.33/2 ರಲ್ಲಿ ನನ್ನ ಸ್ವಾಧೀನ ಬಂಧದಲ್ಲಿ 4 ಎಕರೆ ಜಮೀನಿದೆ….

ಜೀರಿಗೆ ಗದ್ದೆ ಗಿರಿಜನ ಆಶ್ರಮ ಶಾಲೆಗೆ ಜಿಲ್ಲಾಧಿಕಾರಿ ಭೇಟಿ
ಚಾಮರಾಜನಗರ

ಜೀರಿಗೆ ಗದ್ದೆ ಗಿರಿಜನ ಆಶ್ರಮ ಶಾಲೆಗೆ ಜಿಲ್ಲಾಧಿಕಾರಿ ಭೇಟಿ

October 7, 2018

ಕೊಳ್ಳೇಗಾಲ:  ಹನೂರು ಕ್ಷೇತ್ರ ವ್ಯಾಪ್ತಿಯ ಜೀರಿಗೆಗದ್ದೆಯ ಗಿರಿಜನ ಆಶ್ರಮ ಶಾಲೆಗೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಭೇಟಿ ನೀಡುವ ಮೂಲಕ ಗಿರಿಜನ ಮಕ್ಕಳ ಕುಶಲೋಪರಿ ವಿಚಾರಿಸಿದರು. ಪ್ರಥಮ ಬಾರಿಗೆ ಆಶ್ರಮ ಶಾಲೆಗೆ ಆಗಮಿಸಿದ್ದ ಜಿಲ್ಲಾಧಿಕಾರಿಗಳು ಸುಮಾರು ಇಪ್ಪತ್ತು ನಿಮಿಷಗಳ ಕಾಲ ಗಿರಿಜನ ಮಕ್ಕಳ ಯೋಗಕ್ಷೇಮ ಅವರಿಗೆ ತಲುಪಬೇಕಾದ ಸವಲತ್ತು ವಿತರಿಸಲಾಗುತ್ತಿದೆಯೇ ಎಂಬ ಕುರಿತು ಮಾಹಿತಿ ಪಡೆದರು. ಖುದ್ದು ಮಕ್ಕಳು ಊಟ ಮಾಡುವವರೆವಿಗೂ ತಾಳ್ಮೆಯಿಂದ ಕಾದಿದ್ದು ಊಟೋಪಚಾರ ಸಮರ್ಪಕ ರೀತಿ ನೀಡಲಾಗುತ್ತಿದೇಯೆ ಎಂಬುದರ ಕುರಿತು ಮಕ್ಕಳಿಂದಲೇ ಮಾಹಿತಿ ಪಡೆ…

1 33 34 35 36 37 74
Translate »