ಚಾಮರಾಜನಗರ: ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆ ಚುನಾವಣೆಗೆ ದಿನಾಂಕ ನಿಗದಿ ಆಗುತ್ತಿದ್ದಂತೆಯೇ ಸ್ಥಳೀಯ ರಾಜಕೀಯ ಚುರುಕುಗೊಂಡಿದೆ. ನಾಮಪತ್ರ ಸಲ್ಲಿಕೆ ಆ.10ರಿಂ ಆರಂಭವಾಗಲಿದ್ದು, ನಂತರ ಸ್ಥಳೀಯ ರಾಜಕೀಯ ಮತ್ತಷ್ಟು ಚುರುಕುಗೊಳ್ಳಲಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು, ಗುತ್ತಿಗೆ ದಾರರು ಹಾಗೂ ಲೇವಾದೇವಿದಾರರು ಅಭ್ಯರ್ಥಿಗಳಾಗಲು ಉತ್ಸಾಹ ತೋರಿದ್ದಾರೆ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಯಿಂದ ಸ್ಪರ್ಧಿಸಲು ಆಕಾಂಕ್ಷಿಗಳು ಮುಗಿಬಿದ್ದಿದ್ದಾರೆ. ಒಂದೊಂದು ವಾರ್ಡ್‍ಗೆ ಮೂರು-ನಾಲ್ಕು ಮಂದಿ ಆಕಾಂಕ್ಷಿಗಳು ಇರುವುದು ಆ ಪಕ್ಷದ ವರಿಷ್ಠರಿಗೆ ತಲೆ ಬಿಸಿ ತರಿಸಿದೆ. ಕೊಳ್ಳೇಗಾಲದಲ್ಲಿ ಬಿಎಸ್‍ಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿ…
ಹರವೆಯಲ್ಲಿ ಜಾಗತಿಕ ಸ್ತನ್ಯಪಾನ ಸಪ್ತಾಹ ಆಚರಣೆ
August 9, 2018ಚಾಮರಾಜನಗರ: ತಾಲೂಕಿನ ಹರವೆ ಗ್ರಾಮದಲ್ಲಿ ಮಂಗಳವಾರ 26ನೇ ಜಾಗತಿಕ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಯಿತು. ಚಾಮರಾಜನಗರ ರೋಟರಿ ಸಂಸ್ಥೆ, ರೋಟರಿ ಸಿಲ್ಕ್ ಸಿಟಿ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಹರವೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಸಪ್ತಾಹವನ್ನು ಆಚ ರಿಸಲಾಯಿತು. ಸ್ತನ್ಯಪಾನ ಸಪ್ತಾಹದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು. ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿಗಳು ತಾಯಿಯ ಎದೆ ಹಾಲಿನ ಮಹತ್ವವನ್ನು ತಿಳಿಸುವ ಕಿರು ನಾಟಕವನ್ನು ಪ್ರದರ್ಶಿಸಿದರು. ಇದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು. 53 ಮಂದಿ…
ನೈತಿಕ ಶಿಕ್ಷಣದಿಂದ ಗೌರವ ಇಮ್ಮಡಿ
August 9, 2018ಚಾಮರಾಜನಗರ: ಜ್ಞಾನದ ಜತೆ ನೈತಿಕ ಶಿಕ್ಷಣವನ್ನು ಪಡೆದಾಗ ಸಿಗುವ ಗೌರವ ಇಮ್ಮಡಿಯಾಗಲಿದೆ ಎಂದು ಜೆಎಸ್‍ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಎ.ಜಿ.ಶಿವಕುಮಾರ್ ಅಭಿಪ್ರಾಯಪಟ್ಟರು. ನಗರದ ಜೆಎಸ್‍ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ನಡೆದ ‘ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗಳಿಗೆ ಹಮ್ಮಿ ಕೊಂಡಿದ್ದ’ ಸ್ವಾಗತ ಕಾರ್ಯಕ್ರಮ (ಫ್ರೆಶರ್ಸ್ ಡೇ)ದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿ, ಅಭ್ಯಾಗತರನ್ನು ಸತ್ಕರಿಸುವ ಸಂಪ್ರದಾಯ ಭಾರತೀಯ ಸಂಸ್ಕøತಿಯಲ್ಲಿ ಶತಶತಮಾನಗಳಿಂದಲೂ ಹಾಸುಹೊಕ್ಕಾಗಿದೆ, ಇದನ್ನು ಪ್ರತಿವರ್ಷ ಕಾಲೇಜಿನಲ್ಲಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ, ಶಿಕ್ಷಣ ಎಂದರೆ…
ಮೈಕೊಡವಿ ಎದ್ದ ಸಂಚಾರಿ ಠಾಣೆ ಪೊಲೀಸರು: ಅಡ್ಡಾದಿಡ್ಡಿ ಬೈಕ್ ನಿಲುಗಡೆಗೆ ಬ್ರೇಕ್, ಫುಟ್‍ಪಾತ್‍ಗಳ ತೆರವು
August 8, 2018ಚಾಮರಾಜನಗರ: ಜಿಲ್ಲಾ ಕೇಂದ್ರ ವಾದ ಚಾಮರಾಜನಗರದಲ್ಲಿ ವಾಹನ ಮಾಲೀಕರೇ, ನಿಮ್ಮ ಬೈಕ್-ಮೊಪೆಡನ್ನು ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ನಿಲ್ಲಿಸಬೇಡಿ, ನಿಲ್ಲಿಸಿದರೆ ನಿಮ್ಮ ವಾಹನ ಪೊಲೀಸರ ವಶವಾಗಲಿದೆ. ಅಂಗಡಿ ಮಾಲೀಕರೇ, ಫುಟ್‍ಪಾತ್ ಮೇಲೆ ಯಾವುದೇ ವಸ್ತುಗಳನ್ನು ಇಡಬೇಡಿ. ಇಟ್ಟರೆ ನಿಮ್ಮ ಪದಾರ್ಥಕ್ಕೆ ದಂಡ ತೆರಬೇಕಾಗುತ್ತದೆ. ತಳ್ಳುವ ಗಾಡಿ ವ್ಯಾಪಾರಿಗಳೇ ಎಲ್ಲೆಂದಲ್ಲಿ ನೀವೂ ಸಹ ನಿಲ್ಲುವಂತಿಲ್ಲ… ಜೋಕೆ….ಜೋಕೆ…. ಚಾಮರಾಜನಗರದಲ್ಲಿ ಕಳೆದ ಒಂದು ವಾರದಿಂದ ಸಂಚಾರ ಠಾಣೆ ಪೊಲೀ ಸರು ಮೈಕೊಡವಿ ಎದ್ದಿದ್ದಾರೆ. ನಗರದ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಜೋಡಿ…
ನಗರಸಭೆ ಚುನಾವಣೆ: ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸಲು ಸೂಚನೆ
August 8, 2018ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆಗೆ ನಿಯೋಜಿತರಾಗಿ ರುವ ಅಧಿಕಾರಿಗಳು ಅತ್ಯಂತ ಹೊಣೆ ಗಾರಿಕೆಯಿಂದ ಕರ್ತವ್ಯ ನಿರ್ವಹಿಸ ಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಗರಸಭೆ ಚುನಾವಣೆಗೆ ನೇಮಕವಾಗಿರುವ ಚುನಾವಣಾ ಅಧಿಕಾರಿ, ಮಾದರಿ ನೀತಿಸಂಹಿತೆ ಪಾಲನೆ ತಂಡ, ಸೆಕ್ಟರ್ ಅಧಿಕಾರಿಗಳು, ಚುನಾವಣಾ ವೆಚ್ಚ ನಿರ್ವಹಣಾ ತಂಡದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊಳ್ಳೇಗಾಲ ಹಾಗೂ ಚಾಮರಾಜನಗರ…
ರಂಗಾಸಕ್ತಿಗಾಗಿ 30 ಜಿಲ್ಲೆಗಳಲ್ಲಿ ‘ಮಕ್ಕಳ ನಾಟಕ’ ಪ್ರದರ್ಶನ
August 7, 2018ಚಾಮರಾಜನಗರ: ‘ರಂಗಭೂಮಿಯ ಬಗ್ಗೆ ಮಕ್ಕಳಿಗೆ ಆಸಕ್ತಿ ಮೂಡಿಸಿ ಮಕ್ಕಳ ರಂಗಭೂಮಿ ಚಟುವಟಿಕೆಯನ್ನು ರಾಜ್ಯವ್ಯಾಪ್ತಿ ವಿಸ್ತರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಎಲ್ಲ ಜಿಲ್ಲೆಗಳಲ್ಲಿ ಮಕ್ಕಳ ನಾಟಕ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಮೈಸೂರಿನ ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ದನ್ (ಜನ್ನಿ) ಹೇಳಿದರು. ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸೋಮವಾರ ಅಭಿರುಚಿ ಸಾಹಿತ್ಯ ಸಾಂಸ್ಕೃತಿಕಯುವ ಸಂಘಟನೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಏರ್ಪಡಿಸಿದ್ದ ‘ಪರಿವರ್ತನ’ ಮಕ್ಕಳ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ…
ಉನ್ನತ ಶಿಕ್ಷಣ ಪಡೆಯಲು ನಾಯಕ ಸಮುದಾಯ ವಿದ್ಯಾರ್ಥಿಗಳಿಗೆ ಸಲಹೆ
August 7, 2018ಚಾಮರಾಜನಗರ: ‘ನಾಯಕ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ವ್ಯಾಸಂಗ ಮಾಡಬೇಕು’ ಎಂದು ತಾಪಂ ಸದಸ್ಯ ಎಚ್.ವಿ.ಚಂದ್ರು ಸಲಹೆ ನೀಡಿದರು. ನಗರದ ಶ್ರೀಮಹರ್ಷಿ ವಾಲ್ಮೀಕಿ ಭವನದಲ್ಲಿ ನಾಯಕ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ 5ನೇ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭದಲ್ಲಿ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು. ನಾಯಕ ಜನಾಂಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯುವ ಅವಕಾಶವಿದೆ. ಸಮುದಾಯದ ಮಕ್ಕಳ ಎಸ್‍ಎಸ್‍ಎಲ್‍ಸಿ, ಪಿಯುಸಿಗೆ ಶಿಕ್ಷಣವನ್ನು ಮೊಟಕುಗೊಳಿಸದೇ ಉನ್ನತ ಶಿಕ್ಷಣ ವ್ಯಾಸಂಗಮಾಡಿ…
ನಗರಸಭೆಯ ಎಲ್ಲಾ ವಾರ್ಡ್‍ನಲೂ ಬಿಎಸ್‍ಪಿ ಸ್ಪರ್ಧೆ
August 7, 2018ಚಾಮರಾಜನಗರ: ‘ಜಿಲ್ಲೆಯ ಕೊಳ್ಳೇಗಾಲ ಹಾಗೂ ಚಾಮರಾಜನಗರ ನಗರಸಭೆಯ ಎಲ್ಲಾ ವಾರ್ಡ್‍ಗಳಿಗೂ ಬಿಎಸ್‍ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು’ ಎಂದು ಪಕ್ಷದ ಜಿಲ್ಲಾಧ್ಯಕ್ಷ ಮಾದಪ್ಪ ಹೇಳಿದರು. ನಗರದ ಭಾಗ್ಯಹೋಟಲ್‍ನ ಸಭಾಂಗಣದಲ್ಲಿ ನಗರಸಭೆ ಚುನಾವಣಾ ಸಂಬಂಧ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಂಬಂಧ ಕೊಳ್ಳೇಗಾಲ, ಚಾಮರಾಜ ನಗರದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರ ಸಭೆ ಕರೆದು ಚರ್ಚಿಸಲಾ ಯಿತು. ಪ್ರತಿ ವಾರ್ಡ್‍ಗೂ ಹೆಚ್ಚಿನ ಅಭ್ಯರ್ಥಿಗಳ ಸ್ಪರ್ಧೆ ಮಾಡಲು ಬಂದಿ ದ್ದಾರೆ. ಕಳೆದ ವಿಧಾನಸಭಾ ಚುನಾವಣೆ…
ಅರಣ್ಯಾಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿ ಬಂಧನ
August 7, 2018ಗುಂಡ್ಲುಪೇಟೆ: ಸೂಕ್ಷ್ಮ ಪರಿಸರ ವಲಯದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡದಂತೆ ನೊಟೀಸ್ ನೀಡಲು ಹೋಗಿದ್ದ ವಲಯ ಅರಣ್ಯಾಧಿಕಾರಿ ಮೇಲೆ ಹಲ್ಲೆ ನಡೆಸಲೆತ್ನಿಸಿದ್ದ ಆರೋಪಿಯನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಹಿಮವದ್ ಗೋಪಾಲಸ್ವಾಮಿಬೆಟ್ಟ ಅರಣ್ಯ ವಲಯದ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಅನುಮತಿ ಇಲ್ಲದೆ ರೆಸಾರ್ಟ್ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಸುನಿಲ್ ಎಂಬುವರಿಗೆ ನೋಟೀಸ್ ನೀಡಲು ಹೋಗಿದ್ದಾಗ ತಮ್ಮ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಲು ಮುಂದಾಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರ್‍ಎಫ್‍ಒ ಪುಟ್ಟಸ್ವಾಮಿ…
ಕುದೇರಿನಲ್ಲಿ ಹಾಲಿನ ಡೈರಿ ಕಾಮಗಾರಿ ಪರಿಶೀಲನೆ
August 6, 2018ಚಾಮರಾಜನಗರ: ತಾಲೂಕಿನ ಕುದೇರು ಗ್ರಾಮಕ್ಕೆ ಸಂಸದ ಆರ್.ಧ್ರುವನಾರಾಯಣ ಭೇಟಿ ನೀಡಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಹಾಲಿನ ಡೈರಿ ಕಾಮಗಾರಿಯನ್ನು ವೀಕ್ಷಿಸಿದರು. 3 ಲಕ್ಷ ಲೀಟರ್ ಯೋಜನಾ ಸಾಮಥ್ರ್ಯದ ಹಾಲು ಸಂಸ್ಕರಣಾ ಘಟಕ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಬಹುತೇಕ ಪೂರ್ಣಗೊಂಡಿರುವ ವಿವಿಧ ಘಟಕಗಳನ್ನು ಪರಿಶೀಲಿಸಿದರು. 2 ಲಕ್ಷ ಲೀಟರ್ ಸಾಮಥ್ರ್ಯದ ಯುಎಚ್‍ಟಿ ಹಾಲಿನ ಘಟಕ, 30 ಸಾವಿರ ಲೀಟರ್ ಸಾಮಥ್ರ್ಯದ ಮೊಸರು ತಯಾರಿಕಾ ಸ್ಥಾವರ, 4 ಸಾವಿರ ಕೆಜಿ ಬೆಣ್ಣೆ, 3 ಸಾವಿರ ಲೀಟರ್ ತುಪ್ಪ…