ನಗರಸಭೆಯ ಎಲ್ಲಾ ವಾರ್ಡ್‍ನಲೂ ಬಿಎಸ್‍ಪಿ ಸ್ಪರ್ಧೆ
ಚಾಮರಾಜನಗರ

ನಗರಸಭೆಯ ಎಲ್ಲಾ ವಾರ್ಡ್‍ನಲೂ ಬಿಎಸ್‍ಪಿ ಸ್ಪರ್ಧೆ

August 7, 2018

ಚಾಮರಾಜನಗರ:  ‘ಜಿಲ್ಲೆಯ ಕೊಳ್ಳೇಗಾಲ ಹಾಗೂ ಚಾಮರಾಜನಗರ ನಗರಸಭೆಯ ಎಲ್ಲಾ ವಾರ್ಡ್‍ಗಳಿಗೂ ಬಿಎಸ್‍ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು’ ಎಂದು ಪಕ್ಷದ ಜಿಲ್ಲಾಧ್ಯಕ್ಷ ಮಾದಪ್ಪ ಹೇಳಿದರು.

ನಗರದ ಭಾಗ್ಯಹೋಟಲ್‍ನ ಸಭಾಂಗಣದಲ್ಲಿ ನಗರಸಭೆ ಚುನಾವಣಾ ಸಂಬಂಧ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಂಬಂಧ ಕೊಳ್ಳೇಗಾಲ, ಚಾಮರಾಜ ನಗರದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರ ಸಭೆ ಕರೆದು ಚರ್ಚಿಸಲಾ ಯಿತು. ಪ್ರತಿ ವಾರ್ಡ್‍ಗೂ ಹೆಚ್ಚಿನ ಅಭ್ಯರ್ಥಿಗಳ ಸ್ಪರ್ಧೆ ಮಾಡಲು ಬಂದಿ ದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಎನ್. ಮಹೇಶ್ ಅವರು ಶಾಸಕರಾಗಿ, ಶಿಕ್ಷಣ ಸಚಿವರಾದ ಮೇಲೆ ಪಕ್ಷದ ಶಕ್ತಿ ಹೆಚ್ಚಾಗಿದ್ದು, ಸಚಿವರ ನೇತೃತ್ವದಲ್ಲಿ ಜಿಲ್ಲೆಯ ಕೊಳ್ಳೇಗಾಲ, ಚಾಮರಾಜನಗರ ನಗರ ಸಭೆ ಅಧಿಕಾರ ಹಿಡಿಯಲು ನಾವೆಲ್ಲರೂ ಶ್ರಮಿಸಬೇಕಿದೆ ಎಂದರು.

ಸಭೆಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ತಾಲೂಕು ಅಧ್ಯಕ್ಷ ಆಲೂರುಮಲ್ಲು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣ ಮೂರ್ತಿ, ತಾಲೂಕು ಕಾರ್ಯದರ್ಶಿ ಪ್ರಕಾಶ್, ಪತ್ರಿಕಾ ಕಾರ್ಯದರ್ಶಿ ಬ್ಯಾಡ ಮೂಡ್ಲು ಬಸವಣ್ಣ, ನಿವೃತ್ತ ಉಪ ತಹಶೀಲ್ದಾರ್ ಕೃಷ್ಣಯ್ಯ, ಸಂತೇಮರಹಳ್ಳಿ ಹೋಬಳಿ ಅಧ್ಯಕ್ಷ ಮಲ್ಲೇಶಪ್ಪ, ನಗರ ಘಟಕ ಅಧ್ಯಕ್ಷ ಚಿನ್ನಸ್ವಾಮಿ, ಸುಶೀಲ, ಬಿ.ಮಹದೇವಪ್ಪ, ಆಟೋ ಬಸವರಾಜು, ತೀರ್ಥಪ್ರಸಾದ್, ಮಂಜುನಾಥ್ ಇದ್ದರು.

Translate »