Tag: Chamarajanagar

ರಂಗಮಂದಿರ ಪೂರಕ ಕಾಮಗಾರಿಗೆ ಚಾಲನೆ
ಚಾಮರಾಜನಗರ

ರಂಗಮಂದಿರ ಪೂರಕ ಕಾಮಗಾರಿಗೆ ಚಾಲನೆ

July 1, 2018

ಚಾಮರಾಜನಗರ: ನಗರದ ರಂಗಮಂದಿರಕ್ಕೆ ಪೂರಕವಾಗಿರುವ 125 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ನಗರದ ಜಿಲ್ಲಾಡಳಿತ ಭವನದ ಸಮೀಪವಿರುವ ರಂಗಮಂದಿರಕ್ಕೆ ಹೊಂದಿಕೊಂಡಂತೆ ಚರಂಡಿ, ಮಳೆ ನೀರಿನ ಚರಂಡಿ, ಕಾಂಪೌಂಡ್, ವಾಹನ ನಿಲುಗಡೆ ಪ್ರದೇಶ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಸಚಿವರು, 7.50ಮೀ. ಅಗಲಕ್ಕೆ ಅಡ್ಡಮೋರಿ ನಿರ್ಮಾಣ ಮಾಡಲಾಗುತ್ತದೆ. 90ಮೀ. ಉದ್ದದಷ್ಟು ಮಳೆ ನೀರಿನ ಕಾಂಕ್ರೀಟ್ ಚರಂಡಿ, 315ಮೀ. ಉದ್ದದ ಕಾಂಪೌಂಡನ್ನು…

ಪ್ರೀತಿಸುವಂತೆ ಕಿರುಕುಳ; ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ
ಚಾಮರಾಜನಗರ

ಪ್ರೀತಿಸುವಂತೆ ಕಿರುಕುಳ; ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

June 30, 2018

ಸಾವು-ಬದುಕಿನ ನಡುವೆ ಹೋರಾಟ ಯುವಕ ನಾಪತ್ತೆ ಚಾಮರಾಜನಗರ: ಯುವಕನೊಬ್ಬ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದರಿಂದ ಮನನೊಂದು ವಿದ್ಯಾರ್ಥಿನಿ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿ ಸಿರುವ ಘಟನೆ ತಾಲೂಕಿನ ಅಮ್ಮನಪುರ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕಾಗಲವಾಡಿ ಗ್ರಾಮದ ಟಿ.ಎಸ್. ಸುಬ್ಬಣ್ಣ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಆತ್ಮ ಹತ್ಯೆಗೆ ಯತ್ನಿಸಿದ್ದು, ಈಗ ಸಾವು-ಬದು ಕಿನ ನಡುವೆ ಹೋರಾಡುತ್ತಿದ್ದಾಳೆ. ಘಟನೆಯ ವಿವರ: ಅಮ್ಮನಪುರ ಗ್ರಾಮದ ವಿದ್ಯಾರ್ಥಿನಿ ಕಾಗಲವಾಡಿ ಗ್ರಾಮದ ಟಿ.ಎಸ್. ಸುಬ್ಬಣ್ಣ…

ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷರಾಗಿ ಅಜೇಯ್, ಕಾರ್ಯದರ್ಶಿ ಪ್ರದೀಪ್ ಅಧಿಕಾರ ಸ್ವೀಕಾರ
ಚಾಮರಾಜನಗರ

ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷರಾಗಿ ಅಜೇಯ್, ಕಾರ್ಯದರ್ಶಿ ಪ್ರದೀಪ್ ಅಧಿಕಾರ ಸ್ವೀಕಾರ

June 29, 2018

ಚಾಮರಾಜನಗರ: ಚಾಮರಾಜನಗರ ರೋಟರಿ ಸಿಲ್ಕ್ ಸಿಟಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಹೆಚ್.ಎಂ. ಅಜೇಯ್ ಹಾಗೂ ಕಾರ್ಯದರ್ಶಿ ಯಾಗಿ ಆಲೂರು ಎ.ಎಸ್.ಪ್ರದೀಪ್ ಅಧಿಕಾರ ಸ್ವೀಕರಿಸಿದರು. ನಗರದ ರತ್ನೇಶ್ವರಿ ರೆಸಿಡೆನ್ಸಿ ಬುಧವಾರ ಸಂಜೆ ನಡೆದ ಸಂಸ್ಥೆಯ 2018-19ನೇ ಸಾಲಿನ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಅಧಿಕಾರ ಸ್ವೀಕರಿಸಿದರು. ಪದವಿ ಪ್ರದಾನಿ ಮಾಡಿ ಮಾತನಾಡಿದ 2020-21ನೇ ಸಾಲಿನ ರೋಟರಿ ಜಿಲ್ಲೆ 3181ರ ನಿಯೋಜಿತ ಜಿಲ್ಲಾ ಗೌರ್ನರ್ ಎಂ.ರಂಗನಾಥ್ ಭಟ್, ರೋಟರಿ ಸಂಸ್ಥೆ ವಿಶ್ವಾದ್ಯಂತ ಆರೋಗ್ಯ, ಶಿಕ್ಷಣ ಸೇರಿದಂತೆ ಇತರ ಸಮಾಜ ಸೇವಾ…

ಇಂದು ಅರಕಲವಾಡಿಯಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ
ಚಾಮರಾಜನಗರ

ಇಂದು ಅರಕಲವಾಡಿಯಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ

June 29, 2018

ಚಾಮರಾಜನಗರ: ಚಾಮ ರಾಜನಗರ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ಜೂ.29ರಂದು ಗಡಿ ಗ್ರಾಮವಾದ ಅರಕಲವಾಡಿಯಲ್ಲಿ ನಡೆ ಯಲಿದ್ದು, ಮಧುರೈ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್.ಮಹೇಶ್ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ತಾಲೂಕು ಕಸಾಪ ಅಧ್ಯಕ್ಷ ಬಿ.ಬಸವರಾಜು ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸಮ್ಮೇಳನದ ಸರ್ವಾ ಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಎಂ.ಎನ್. ಮಹೇಶ್ ಅವರು ತಾಲೂಕಿನ ಮಲೆ ಯೂರು ಗ್ರಾಮದವರು. ನಗರದ ಜೆಎಸ್‍ಎಸ್ ಕಾಲೇಜು ಪದವೀಧರರಾಗಿದ್ದು, ತರಾಸು ಕೃತಿಗಳ ವಿಶ್ಲೇಷಣಾತ್ಮಕ ಅಧ್ಯಯನ ಎಂಬ ಮಹಾಪ್ರಬಂಧಕ್ಕಾಗಿ ಪಿಎಚ್‍ಡಿ ಪದವಿ…

ಸಾರ್ವಜನಿಕ ಶೌಚಾಲಯಕ್ಕೆ ಆಗ್ರಹಿಸಿ ಪ್ರತಿಭಟನೆ
ಚಾಮರಾಜನಗರ

ಸಾರ್ವಜನಿಕ ಶೌಚಾಲಯಕ್ಕೆ ಆಗ್ರಹಿಸಿ ಪ್ರತಿಭಟನೆ

June 29, 2018

ಚಾಮರಾಜನಗರ: ನಗರದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸುವಂತೆ ಆಗ್ರಹಿಸಿ ಸುವರ್ಣ ಕನ್ನಡ ಶಿಕ್ಷಣ ವೇದಿಕೆಯ ಕಾರ್ಯಕರ್ತರು ನಗರದ ನಗರಸಭೆ ಕಾರ್ಯಾಲಯದ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು. ಕಾರ್ಯಾಲಯದ ಮುಂದೆ ಜಮಾಯಿಸಿದ ವೇದಿಕೆ ಕಾರ್ಯಕರ್ತರು, ನಗರಸಭಾ ಅಧಿಕಾರಿಗಳು, ಅಧ್ಯಕ್ಷರು, ನದಸ್ಯರು ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಕೇಂದ್ರವಾದ ಚಾಮರಾಜನಗರಕ್ಕೆ ಪ್ರತಿದಿನ ಸಹಸ್ರಾರು ಸಾರ್ವಜನಿಕರು ಆಗಮಿಸುತ್ತಾರೆ. ಆದರೆ ನಗರದ ಪ್ರಮುಖ ವೃತ್ತಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದ ಕಾರಣ ನಾಗರಿಕರು ಪರಿತಪಿಸುವಂತಾಗಿದೆ….

ಬೈಕ್-ಲಾರಿ ಡಿಕ್ಕಿ: ಬೈಕ್ ಸವಾರ ಸಾವು
ಚಾಮರಾಜನಗರ

ಬೈಕ್-ಲಾರಿ ಡಿಕ್ಕಿ: ಬೈಕ್ ಸವಾರ ಸಾವು

June 28, 2018

ಚಾಮರಾಜನಗರ:  ತಾಲೂಕಿನ ಹರದನಹಳ್ಳಿ ಗ್ರಾಮದ ಬಳಿ ಬುಧವಾರ ಸಂಜೆ ಲಾರಿ-ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಮೃತಪಟ್ಟ ವ್ಯಕ್ತಿಯನ್ನು ನಂಜನಗೂಡು ತಾಲೂಕು ಹಲ್ಲರೆ ಗ್ರಾಮದ ಶಿವರಾಜು (27) ಎಂದು ಗುರುತಿಸಲಾಗಿದೆ. ಕಾರ್ಯನಿಮಿತ್ತ ವೆಂಕಟಯ್ಯನ ಛತ್ರಕ್ಕೆ ತೆರಳಿದ್ದ ಶಿವರಾಜು ಚಾ.ನಗರದತ್ತ ಬರುತ್ತಿರುವಾಗ ಇವರ ಬೈಕ್‍ಗೆ ಲಾರಿ ಡಿಕ್ಕಿ ಹೊಡೆಯಿತೆನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಶಿವರಾಜು ಅವರ ತಲೆಗೆ ತೀವ್ರ ಪೆಟ್ಟು ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾ.ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಮಾಯಕರ ಪ್ರಾಣಕ್ಕೆ ಎರವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಹಳ್ಳ
ಚಾಮರಾಜನಗರ

ಅಮಾಯಕರ ಪ್ರಾಣಕ್ಕೆ ಎರವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಹಳ್ಳ

June 27, 2018

ಚಾಮರಾಜನಗರ : ಚಾಮರಾಜನಗರದಿಂದ ಸಂತೇ ಮರಹಳ್ಳಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ-209 ರಸ್ತೆಯ ಕಾಡಹಳ್ಳಿ ಗೇಟ್ ಬಳಿ ಇರುವ ಬೃಹದಾಕಾರ ವಾದ ಹಳ್ಳ ಅಮಾಯಕ ವಾಹನ ಸವಾರರ ಪ್ರಾಣಕ್ಕೆ ಎರವಾಗುತ್ತಿದೆ. ಚಾಮರಾಜನಗರದಿಂದ ಕೇವಲ ಎರಡು ಕಿಮೀ ಅಂತರದಲ್ಲಿ ಕಾಡಹಳ್ಳಿ ಗೇಟ್ ಇದೆ. ಈ ಗೇಟ್‍ನ ಮುಂಭಾಗ ರಸ್ತೆಯ ಮಧ್ಯ ಭಾಗದಲ್ಲಿ ಭಾರೀ ಹಳ್ಳ ಇದೆ. ಈ ಹಳ್ಳವನ್ನು ಗಮನಿಸದ ಅನೇಕ ವಾಹನ ಸವಾರರು ಹಳ್ಳಕ್ಕೆ ವಾಹನ ಬಿಟ್ಟು ಪ್ರಾಣತೆತ್ತಿದ್ದಾರೆ. ಇದಕ್ಕೆ ಪುಷ್ಠಿ ನೀಡು ವಂತೆ ಭಾನುವಾರ ರಾತ್ರಿ ಚಾಮರಾಜ…

ಜಾಲಹಳ್ಳಿ ಹುಂಡಿಯಲ್ಲಿ ಕಂಡಾಯ ಉತ್ಸವ
ಚಾಮರಾಜನಗರ

ಜಾಲಹಳ್ಳಿ ಹುಂಡಿಯಲ್ಲಿ ಕಂಡಾಯ ಉತ್ಸವ

June 27, 2018

ಚಾಮರಾಜನಗರ:  ಚಾಮರಾಜನಗರದ ಜಾಲಹಳ್ಳಿ ಹುಂಡಿಯಲ್ಲಿ ನೂತನ ಕಂಡಾಯವನ್ನು ಗ್ರಾಮಕ್ಕೆ ತಂದು ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ನೂತನ ಕಂಡಾಯವನ್ನು ತರಲಾದ ಹಿನ್ನೆಲೆಯಲ್ಲಿ ಗ್ರಾಮದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮದ ಎಲ್ಲಾ ಬೀದಿಗಳಲ್ಲಿ ತಳಿರು ತೋರಣಗಳನ್ನು ಕಟ್ಟಿ ರಂಗೋಲಿ ಹಾಗೂ ಬಣ್ಣಗಳಿಂದ ಶೃಂಗರಿಸಲಾಗಿತ್ತು. ಗ್ರಾಮದ ಪ್ರತಿಯೊಬ್ಬರ ಮನೆ ಮುಂಭಾಗದಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸಲಾಯಿತು. ಮಂಟೇಸ್ವಾಮಿಯ ಕಂಡಾಯವಾದ್ದರಿಂದ ಇಂದಿನಿಂದ 48 ದಿನಗಳ ಕಾಲ ಪೂಜೆ ಸಲ್ಲಿಸಲಾಗಿ ಈ ವೇಳೆ ಗ್ರಾಮದಲ್ಲಿ ಹಾಗೂ ಜಿಲ್ಲೆಯಾ ದ್ಯಂತ ಉತ್ತಮ ಮಳೆ ಬಿದ್ದು ಬೆಳೆ…

ವಿವಿಧೆಡೆ ರಸ್ತೆ ಕಾಮಗಾರಿ ಪರಿಶೀಲಿಸಿದ ಡಿಸಿ ಕಾವೇರಿ
ಚಾಮರಾಜನಗರ

ವಿವಿಧೆಡೆ ರಸ್ತೆ ಕಾಮಗಾರಿ ಪರಿಶೀಲಿಸಿದ ಡಿಸಿ ಕಾವೇರಿ

June 27, 2018

ಚಾಮರಾಜನಗರ:  ಚಾಮ ರಾಜನಗರ ಪಟ್ಟಣದ ವಿವಿಧೆಡೆ ಪ್ರಗತಿಯಲ್ಲಿ ರುವ ರಸ್ತೆ ಹಾಗೂ ಚರಂಡಿ ಕಾಮಗಾರಿ ಯನ್ನು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಇಂದು ಪರಿಶೀಲನೆ ನಡೆಸಿದರು. ಮೊದಲು ನಗರದ ಗಾಳೀಪುರ ಬಡಾವಣೆಯಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಿದ ಜಿಲ್ಲಾಧಿಕಾರಿಯವರು ನಾಗರಿಕರಿಗೆ ಅನುಕೂಲವಾಗುವಂತೆ ಕಾಮಗಾರಿ ಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಂತರ ದೊಡ್ಡ ಅಂಗಡಿ ಬೀದಿ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ರಸ್ತೆ ಬಳಿ ನಡೆಯುತ್ತಿರುವ ಕಾಮಗಾರಿ ಹಾಗೂ ಅನ್ವರ್‍ಪಾಷ ಕಲ್ಯಾಣ ಮಂಟಪದ ರಸ್ತೆಗೆ ಭೇಟಿ…

ಚಾ.ನಗರ-ರಾಮಸಮುದ್ರ ಬೈಪಾಸ್ ರಸ್ತೆ ಕಾಮಗಾರಿ ಅಪೂರ್ಣ
ಚಾಮರಾಜನಗರ

ಚಾ.ನಗರ-ರಾಮಸಮುದ್ರ ಬೈಪಾಸ್ ರಸ್ತೆ ಕಾಮಗಾರಿ ಅಪೂರ್ಣ

June 24, 2018

ರಸ್ತೆ ಮಧ್ಯೆದಲ್ಲಿ ಹರಿಯುತ್ತಿರುವ ಚರಂಡಿ ನೀರು ಹದಗೆಟ್ಟ ರಸ್ತೆಯಲ್ಲಿ ಸಂಚಾರ ದುಸ್ತರ ಚಾಮರಾಜನಗರ:  ನಗ ರದ ಸಂತೇಮರಹಳ್ಳಿ ವೃತ್ತದ ಬಳಿಯಿ ರುವ ಕೇಂದ್ರಿಯ ವಿದ್ಯಾಲಯದ ಎದುರಿನ (ರಾಷ್ಟ್ರೀಯ ಹೆದ್ದಾರಿ 209)ನಿಂದ ರಾಮಸಮುದ್ರದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆ ಕಾಮಗಾರಿ ಅಪೂರ್ಣಗೊಂಡಿದೆ. ಈ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಹಾಗೂ ಪಾದಚಾರಿಗಳು ದಿನನಿತ್ಯ ಹರ ಸಾಹಸ ಪಡುವಂತಾಗಿದೆ. ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿನ ಸಂಚಾರ ದಟ್ಟಣೆ ಯನ್ನು ಕಡಿಮೆಗೊಳಿಸಲು ನಗರಸಭೆ ವತಿಯಿಂದ ರಾಮಸಮುದ್ರದ ಕುಲುಮೆ ಯಿಂದ…

1 61 62 63 64 65 74
Translate »