ಚಾ.ನಗರ-ರಾಮಸಮುದ್ರ ಬೈಪಾಸ್ ರಸ್ತೆ ಕಾಮಗಾರಿ ಅಪೂರ್ಣ
ಚಾಮರಾಜನಗರ

ಚಾ.ನಗರ-ರಾಮಸಮುದ್ರ ಬೈಪಾಸ್ ರಸ್ತೆ ಕಾಮಗಾರಿ ಅಪೂರ್ಣ

June 24, 2018
  • ರಸ್ತೆ ಮಧ್ಯೆದಲ್ಲಿ ಹರಿಯುತ್ತಿರುವ ಚರಂಡಿ ನೀರು
  • ಹದಗೆಟ್ಟ ರಸ್ತೆಯಲ್ಲಿ ಸಂಚಾರ ದುಸ್ತರ

ಚಾಮರಾಜನಗರ:  ನಗ ರದ ಸಂತೇಮರಹಳ್ಳಿ ವೃತ್ತದ ಬಳಿಯಿ ರುವ ಕೇಂದ್ರಿಯ ವಿದ್ಯಾಲಯದ ಎದುರಿನ (ರಾಷ್ಟ್ರೀಯ ಹೆದ್ದಾರಿ 209)ನಿಂದ ರಾಮಸಮುದ್ರದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆ ಕಾಮಗಾರಿ ಅಪೂರ್ಣಗೊಂಡಿದೆ. ಈ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಹಾಗೂ ಪಾದಚಾರಿಗಳು ದಿನನಿತ್ಯ ಹರ ಸಾಹಸ ಪಡುವಂತಾಗಿದೆ.

ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿನ ಸಂಚಾರ ದಟ್ಟಣೆ ಯನ್ನು ಕಡಿಮೆಗೊಳಿಸಲು ನಗರಸಭೆ ವತಿಯಿಂದ ರಾಮಸಮುದ್ರದ ಕುಲುಮೆ ಯಿಂದ ಸಂತೇಮರಹಳ್ಳಿಯ ಮುಖ್ಯರಸ್ತೆ(ರಾಷ್ಟ್ರೀಯ ಹೆದ್ದಾರಿ 209)ವರೆಗೆ ಬೈಪಾಸ್ ರಸ್ತೆ ನಿರ್ಮಿಸಲಾಗಿದೆ. ಸುಮಾರು 3 ಕಿ.ಮೀ. ಉದ್ದದ ಈ ರಸ್ತೆ ಕಾಮಗಾರಿ ಆರಂಭಗೊಂಡು ವರ್ಷವೇ ಕಳೆದಿದೆ. ಆದರೂ, ಇನ್ನೂ ಪೂರ್ಣ ಗೊಂಡಿಲ್ಲ. ಸುಮಾರು ಅರ್ಧ ಕಿಲೋ ಮೀಟರ್ ರಸ್ತೆ ತೀರ ಹದಗೆಟ್ಟಿದೆ. ರಸ್ತೆ ಮಧ್ಯೆ ಭಾಗದಲ್ಲಿ ಚರಂಡಿ ನೀರು ಹರಿ ಯುತ್ತಿದೆ. ಇಡೀ ರಸ್ತೆಯಲ್ಲಿ ಹಳ್ಳ-ಕೊಳ್ಳಗಳು ಸೃಷ್ಟಿಯಾಗಿದೆ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿ ಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾ ಗಿದೆ. ಈ ಮಾರ್ಗದಲ್ಲಿ 19 ರೈತರ ಜಮೀನು ರಸ್ತೆಗೆ ಸೇರುತ್ತದೆ. ಹಾಗಾಗಿ, ಅವರಿಗೆ ಪರಿಹಾರ ನೀಡಿ ರಸ್ತೆ ನಿರ್ಮಾಣ ಮಾಡುವುದು ಅನಿವಾರ್ಯ. ಆದರೆ, ರೈತರು ತಮಗೆ ನೀಡುವ ಪರಿಹಾರದ ಮೊತ್ತ ಸಾಲುತ್ತಿಲ್ಲ ಎಂದು ಜಾಗ ನೀಡಲು ನಿರಾಕರಿಸುತ್ತಿದ್ದಾರೆ. ಈ ಕಾರಣದಿಂದ ಬೈಪಾಸ್ ರಸ್ತೆ ಕಾಮಗಾರಿ ಅಪೂರ್ಣಗೊಂಡಿದೆ. ಚರಂಡಿ ನಿರ್ಮಾಣವಾಗದೆ ಕಲುಷಿತ ನೀರು ರಸ್ತೆ ಮಧ್ಯದಲ್ಲಿಯೇ ಹರಿಯು ತ್ತಿದ್ದು, ಗಬ್ಬು ನಾರುತ್ತಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಪಾದಚಾರಿಗಳು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಶಾಪ ಹಾಕುತ್ತಾ ತೆರಳುವುದು ಸಾಮಾನ್ಯವಾಗಿದೆ.
ಈ ಮಾರ್ಗದಲ್ಲಿಯೇ ಸೇವಾ ಭಾರತಿ ಶಿಕ್ಷಣ ಸಂಸ್ಥೆ ಹಾಗೂ ಚೆನ್ನಿಪುರ ಮೋಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಡ ಇದೆ.

ಜತೆಗೆ, ಇಡೀ ಜಿಲ್ಲಾ ಕೇಂದ್ರಕ್ಕೆ ಹೂ ಸರಬರಾಜು ಆಗುವ ಚನ್ನಿಪುರ ಮೋಳೆ ಗ್ರಾಮಕ್ಕೂ ಈ ರಸ್ತೆಯನ್ನು ಸಂದಿ ಸಿಯೇ ಹೋಗಬೇಕು. ಹಾಗಾಗಿ, ದಿನ ನಿತ್ಯ ನೂರಾರು ಮಂದಿ ಸಾರ್ವಜನಿಕರು, ವಿದ್ಯಾರ್ಥಿಗಳು ಓಡಾಡುತ್ತಾರೆ. ಆದರೆ, ಹದಗೆಟ್ಟ ರಸ್ತೆಯ ಮೇಲೆ ಕೊಳಚೆ ನೀರು ಹರಿಯು ತ್ತಿರುವುದರಿಂದ ಅವರೆಲ್ಲ ಮೂಗು ಮುಚ್ಚಿ ಕೊಂಡು ತೆರಳಬೇಕಾದ ಸ್ಥಿತಿ ನಿರ್ಮಾವಾಗಿದೆ. ಬೈಪಾಸ್ ರಸ್ತೆ ಕಾಮಗಾರಿ ಅಪೂರ್ಣಗೊಂಡು ವರ್ಷವೇ ಕಳೆಯಿತು. ಆದರೂ ಸಹ ಇದನ್ನು ಪೂರ್ಣಗೊಳಿಸಲು ಯಾರೊಬ್ಬರೂ ಹೆಚ್ಚಿನ ಗಮನಹರಿಸಲಿಲ್ಲ. ಈ ಬಗ್ಗೆ ಕ್ಷೇತ್ರದ ಶಾಸಕರೂ ಆದ ಸಚಿವ ಸಿ.ಪುಟ್ಟರಂಗಶೆಟ್ಟ ಅವರನ್ನು ನಗರದಲ್ಲಿ ನಡೆದ ಸಂವಾದ ಕಾರ್ಯಕ್ರಮ ದಲ್ಲಿ ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಬೈಪಾಸ್ ರಸ್ತೆ ನಿರ್ಮಾಣದಿಂದ ಜಮೀನು ಕಳೆದುಕೊಳ್ಳುವ ರೈತರು ತಮಗೆ ನೀಡುವ ಪರಿಹಾರ ಸಾಲದು. ಹೆಚ್ಚಿನ ಪರಿಹಾರ ನೀಡುವಂತೆ ಬೇಡಿಕೆ ಇಟ್ಟಿರುವ ಕಾರಣ ಬೈಪಾಸ್ ರಸ್ತೆ ಕಾಮ ಗಾರಿ ಪೂರ್ಣಗೊಂಡಿಲ್ಲ. ಇದನ್ನು ತಕ್ಷ ಣವೇ ಸರಿಪಡಿಸುವ ಭರವಸೆ ನೀಡಿದ್ದರು. ಈ ಭರವಸೆಯಂತೆ ಸಚಿವ ಸಿ.ಪುಟ್ಟ ರಂಗಶೆಟ್ಟಿ ನಗರದಲ್ಲಿ ನಡೆಸಿದ ಪ್ರಥಮ ಅಧಿಕಾರಿಗಳ ಸಭೆಯಲ್ಲಿ ಬೈಪಾಸ್ ರಸ್ತೆ ಪೂರ್ಣಗೊಳ್ಳಲು ಇರುವ ಅಡ್ಡಿ-ಆತಂಕ ಗಳನ್ನು ಕೂಡಲೇ ನಿವಾರಿಸಬೇಕು. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ನಗರಸಭಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರಾಮಸಮುದ್ರದ ಮುಖ್ಯ ರಸ್ತೆಯಿಂದ ನಗರದ ಸಂತೇಮರಹಳ್ಳಿ ಮುಖ್ಯ ರಸ್ತೆವರೆಗೆ ಬೈಪಾಸ್ ರಸ್ತೆ ನಿರ್ಮಿಸಲಾಗಿದೆ. ಆದರೆ ಈ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ರಸ್ತೆಯ ಮಧ್ಯಭಾಗಕ್ಕೆ ಚರಂಡಿ ನೀರನ್ನು ಬಿಡಲಾಗಿದೆ. ಇದರಿಂದ ದುರ್ವಾಸನೆ ಬೀರುತ್ತಿದೆ. ರಸ್ತೆ ತುಂಬಾ ಹಳ್ಳ-ಕೊಳ್ಳ ಸೃಷ್ಟಿಯಾಗಿರುವುದರಿಂದ ರಸ್ತೆಯಲ್ಲಿ ಸಂಚರಿಸು ವುದೇ ಸಾಹಸದ ಕೆಲಸವಾಗಿದೆ. ಇನ್ನಾದರೂ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. –ಪ್ರದೀಪ್ ಕುಮಾರ್, ರಾಮಸಮುದ್ರ

ಸಚಿವರ ಈ ಸೂಚನೆಯನ್ನು ಅಧಿ ಕಾರಿಗಳು ಎಷ್ಟು ಬೇಗ ಜಾರಿಗೆ ತರುತ್ತಾರೆ. ಅಪೂರ್ಣಗೊಂಡಿರುವ ಬೈಪಾಸ್ ರಸ್ತೆ ಕಾಮಗಾರಿ ಎಂದು ಪೂರ್ಣಗೊಳ್ಳುತ್ತದೋ ಎಂಬುದನ್ನು ಕಾದು ನೋಡಬೇಕಾಗಿದೆ.

ಬೈಪಾಸ್ ರಸ್ತೆ ಕಾಮಗಾರಿ ಅಪೂರ್ಣಗೊಂಡಿರುವ ವಿಷಯ ತಿಳಿದಿದೆ. ಇದಕ್ಕೆ ಕಾರಣ ಈ ಮಾರ್ಗದಲ್ಲಿ 19 ಜನ ರೈತರಿಗೆ ಸೇರಿದ ಜಮೀನಿನ ಕೆಲ ಭಾಗ ರಸ್ತೆಗೆ ಸೇರಲಿದೆ. ಈ ರೈತರಿಗೆ ಪರಿಹಾರ ನಿಗದಿಪಡಿಸಲಾಗಿತ್ತು. ಆದರೆ, ರೈತರು ನಿಗದಿಪಡಿಸಿರುವ ಪರಿಹಾರದ ಮೊತ್ತವನ್ನು ಒಪ್ಪುತ್ತಿಲ್ಲ. ಹೀಗಾಗಿ ಸಮಸ್ಯೆ ಉಂಟಾಗಿದೆ. ಕ್ಷೇತ್ರದ ಶಾಸಕರು ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದ್ದಾರೆ. ತಕ್ಷಣದಲ್ಲಿಯೇ ಸಮಸ್ಯೆ ಬಗೆಹರಿದು ಅಪೂರ್ಣಗೊಂಡಿರುವ ಬೈಪಾಸ್ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ. -ಆರ್.ಎಂ.ರಾಜಪ್ಪ, ಉಪಾಧ್ಯಕ್ಷರು, ನಗರಸಭೆ

Translate »