ತಂತ್ರಜ್ಞಾನವಿಲ್ಲದೇ ಬೆಳವಣ ಗೆ ಅಸಾಧ್ಯ: ಇ.ಎಸ್.ಚಕ್ರವರ್ತಿ
ಮಂಡ್ಯ

ತಂತ್ರಜ್ಞಾನವಿಲ್ಲದೇ ಬೆಳವಣ ಗೆ ಅಸಾಧ್ಯ: ಇ.ಎಸ್.ಚಕ್ರವರ್ತಿ

June 24, 2018

ನಾಗಮಂಗಲ:  ಕಲಿಕೆ ಎಂಬುದು ವಿದ್ಯಾರ್ಥಿಗಳಿಗೆ ಪದವಿ ಪಡೆದಾಕ್ಷಣ ಮುಗಿದು ಹೋಗುವುದಿಲ್ಲ. ನಿಜವಾದ ಕಲಿಕೆ ಇಂದಿನಿಂದ ಆರಂಭ ವಾಗುತ್ತದೆ ಎಂದು ಬೆಂಗಳೂರಿನ ಟಾಟಾ ಕನ್ಸಲ್ಟೆಂನ್ಸಿ ಸಂಸ್ಥೆ ಮುಖ್ಯಸ್ಥ ಇ.ಎಸ್.ಚಕ್ರ ವರ್ತಿ ಹೇಳಿದರು.
ತಾಲೂಕಿನ ಬಿ.ಜಿ.ನಗರದ ಬಿಜಿಎಸ್ ಆಡಿಟೋರಿಯಂನಲ್ಲಿ ಶನಿವಾರ ನಡೆದ ಬಿಜಿಎಸ್ ತಾಂತ್ರಿಕ ಶಿಕ್ಷಣ ಮಹಾವಿದ್ಯಾ ಲಯದ ಅಂತಿಮ ವರ್ಷದ ವಿದ್ಯಾರ್ಥಿ ಗಳ ಘಟಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಂತ್ರಜ್ಞಾನವಿಲ್ಲದೇ ಯಾವ ಬೆಳವಣಿಗೆಯೂ ಸಾಧ್ಯವಾಗುವುದಿಲ್ಲ. ತಂತ್ರಜ್ಞಾನ ತಯಾರು ಮಾಡಿದ ಮಾನವರು ಯಂತ್ರ ಗಳಲ್ಲಿರುವ ತಂತ್ರಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳ ಸಂಬಂಧಗಳನ್ನು ಬೆಳೆಸಿ ಕೊಂಡಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬಹುದಾಗಿದೆ ಎಂದರು.

ಪದವಿ ಮುಗಿಸಿ ಉದ್ಯೋಗ ಹರಸಿ ಹೊರ ಜಗತ್ತಿಗೆ ಹೋಗುತ್ತಿರುವ ಪದವೀಧರರಿಗೆ ಕೈಗಾರಿಕಾ ಕ್ಷೇತ್ರದಲ್ಲಿ ವಿಫುಲ ಅವಕಾಶ ಗಳಿವೆ. ಆದರೆ ಅವುಗಳನ್ನು ಸದ್ಬಳಕೆ ಮಾಡಿ ಕೊಳ್ಳಲು ಸರಿಯಾದ ಮಾರ್ಗದರ್ಶಕರು ಬೇಕು. ವಿದ್ಯಾರ್ಥಿಗಳಿಗೆ ಸಮಾಜದ ಯಾವ ದಿಕ್ಕಿನಲ್ಲಿ ಹೋದರೆ ಗುರಿ ಮುಟ್ಟಬಹುದು ಎಂಬುದನ್ನು ಹೇಳಿ ಕೊಡಬೇಕು. ಒಬ್ಬ ಸಾಮಾನ್ಯ ಮಾರ್ಗ ದರ್ಶಕ ತನಗೆಷ್ಟು ಗೊತ್ತಿದೆಯೋ ಅಷ್ಟನ್ನೂ ಹೇಳಿ ಕೊಡು ತ್ತಾನೆ. ಆದರೆ ಅತ್ಯುತ್ತಮ ಮಾರ್ಗದರ್ಶಕ ತನಗೆ ಗೊತ್ತಿರುವುದೆಲ್ಲವನ್ನೂ ಹೇಳಿಕೊಟ್ಟು ಪ್ರೋತ್ಸಾಹಿಸುವ ಜೊತೆಗೆ ಪ್ರೇರೇಪಿ ಸುತ್ತಾರೆ. ಅಂತಹ ಮಾರ್ಗದರ್ಶಕರು ಇಂದಿನ ದಿನಮಾನಗಳಲ್ಲಿ ಅವಶ್ಯಕತೆ ಯಿದೆ ಎಂದರು.

ಸಮಾರಂಭದ ಸಾನಿಧ್ಯವಹಿಸಿ ಮಾತ ನಾಡಿದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ವಿದ್ಯಾರ್ಥಿಗಳು ತಮ್ಮ ಶೈಕ್ಷಣ ಕ ಅವಧಿಯಲ್ಲಿ ಪರಿಶ್ರಮದಿಂದ ಜ್ಞಾನಾರ್ಜನೆಗೆ ಹೆಚ್ಚು ಒತ್ತು ನೀಡಿ, ಸಂಸ್ಕಾರಯುತ ಶಿಕ್ಷಣ ಪಡೆಯಲು ಮುಂದಾಗಬೇಕು. ಅಂತಹ ಶಿಕ್ಷಣವನ್ನು ಶ್ರೀಮಠದ ಶಿಕ್ಷಣ ಸಂಸ್ಥೆಗಳು ನೀಡುತ್ತಿದ್ದು, ನಗರ ಪ್ರದೇಶದ ಶಿಕ್ಷಣ ಸಂಸ್ಥೆಗಳೊಂದಿಗೆ ನಮ್ಮ ಸಂಸ್ಥೆಗಳನ್ನು ಹೋಲಿಸಿದರೆ, ಅತಿಕಡಿಮೆ ಶುಲ್ಕವನ್ನು ಪಡೆದು ಸಂಸ್ಕಾರಯುತ ಶಿಕ್ಷಣ ನೀಡು ತ್ತಿದ್ದೇವೆ ಎಂದರು.

ವೇದಿಕೆಯಲ್ಲಿ 2017-18ನೇ ಸಾಲಿನ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಇದೇ ವೇಳೆ ವಿವಿಧ ವಿಭಾಗಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾ ಯಿತು. ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಚಂದ್ರಶೇಖರ್‍ಶೆಟ್ಟಿ ಮಾತ ನಾಡಿದರು. ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಟಿ.ಕೆ. ಸುಬ್ಬರಾಯ, ಪ್ರಾಂಶುಪಾಲ ಡಾ.ಎಂ.ಜಿ. ಶಿವರಾಮ್, ಬಿಜಿಎಸ್ ಐಟಿ ಪ್ರಾಂಶುಪಾಲ ಡಾ.ಬಿ.ಕೆ. ನರೇಂದ್ರ, ಉಮೇಶ್ ಸೇರಿ ದಂತೆ ಹಲವರು ಹಾಜರಿದ್ದರು.

Translate »