ಆದಿಚುಂಚನಗಿರಿಯಲ್ಲಿ ರಾಜ್ಯಮಟ್ಟದ 22ನೇ ಚುಂಚಾದ್ರಿ ಕಲೋತ್ಸವ: ವಿಜ್ಞಾನಿಗಳ ಸಾಧನೆ ವಿಶ್ವಕ್ಕೇ ಮಾದರಿ
ಮಂಡ್ಯ

ಆದಿಚುಂಚನಗಿರಿಯಲ್ಲಿ ರಾಜ್ಯಮಟ್ಟದ 22ನೇ ಚುಂಚಾದ್ರಿ ಕಲೋತ್ಸವ: ವಿಜ್ಞಾನಿಗಳ ಸಾಧನೆ ವಿಶ್ವಕ್ಕೇ ಮಾದರಿ

July 26, 2018

ಮಂಡ್ಯ: ‘ದೇಶದ ವಿಜ್ಞಾನಿ ಗಳ ಸಾಧನೆ, ಇಡೀ ಪ್ರಪಂಚಕ್ಕೇ ಮಾದರಿಯಾಗಿದೆ. ಒಂದೇ ಬಾರಿಗೆ 105 ಸ್ಯಾಟ್‍ಲೆಟ್‍ಗಳನ್ನು ಉಡಾ ವಣೆ ಮಾಡುವ ಮೂಲಕ ಇತರೆ ದೇಶಗಳು ಮಾಡಲಾಗದ ಸಾಧನೆಯನ್ನು ನಮ್ಮ ವಿಜ್ಞಾನಿ ಗಳು ಮಾಡಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಶ್ರೀಗುರುಪೂರ್ಣಿಮ ಮಹೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ರಾಜ್ಯ ಮಟ್ಟದ 22ನೇ ಚುಂಚಾದ್ರಿ ಕಲೋತ್ಸವ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷದಲ್ಲಿ 200 ವರ್ಷಗಳ ಇತಿಹಾಸವಿರುವ ಅಮೇರಿಕಾ ದೇಶಕ್ಕೆ ನಾವು ಹೋಲಿಸಿಕೊಳ್ಳುತ್ತೇವೆ. ಜಗತ್ತಿನ ಯಾವ ದೇಶವೂ ಸಹ 105 ಸ್ಯಾಟ್‍ಲೆಟ್‍ಗಳನ್ನು ಒಂದೇ ಬಾರಿಗೆ ಉಡಾವಣೆ ಮಾಡುವ ಪ್ರಯತ್ನ ವನ್ನೂ ಮಾಡಿಲ್ಲ. ಆದರೆ, ಭಾರತೀಯರಾದ ನಾವು ಈ ಸಾಧನೆ ಮಾಡಿ ತೋರಿಸಿದ್ದೇವೆ ಎಂದು ವಿಶ್ವಾಸದಿಂದ ನುಡಿದರು.

ಸಮಾಜಕ್ಕೆ ಸತ್ಪ್ರಜೆಗಳ ಅವಶ್ಯಕತೆಯಿದೆ. ನಮ್ಮ ರಾಜ್ಯ, ದೇಶದಲ್ಲಿ ವಿದ್ಯೆ ಪಡೆದು ಪದವೀಧರರಾಗಿ ನಿರುದ್ಯೋಗದಿಂದ ಇರುವ ಬಹಳಷ್ಟು ಜನರನ್ನು ನೋಡುತ್ತಿದ್ದೇವೆ. ಆದರೆ, ಇಡೀ ಪ್ರಪಂಚಕ್ಕೆ ಅತಿ ಹೆಚ್ಚು ಇಂಜಿನಿಯರ್‍ಗಳನ್ನು ತಯಾರು ಮಾಡಿ ಕೊಡುತ್ತಿರುವ ದೇಶ ನಮ್ಮದು. ಜಗತ್ತಿನ ಹಲವು ದೇಶಗಳ ಪ್ರತಿಷ್ಠಿತ ಕಂಪನಿ ಹಾಗೂ ಆಸ್ಪತ್ರೆಗಳಲ್ಲಿ ನಮ್ಮ ದೇಶದ ಇಂಜಿನಿಯರ್ ಹಾಗೂ ವೈದ್ಯರು ಕೆಲಸ ಮಾಡುತ್ತಿದ್ದಾರೆ. ನಾಸಾದಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಅತಿಹೆಚ್ಚು ವಿಜ್ಞಾನಿಗಳು ಭಾರತ ದವರಾಗಿದ್ದಾರೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಚಿತ್ರನಟ ರಮೇಶ್ ಅರವಿಂದ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ನಕ್ಷತ್ರಗಳ ಕುಡಿಗಳಿದ್ದಂತೆ. ಪ್ರತಿಯೊಬ್ಬ ಮಕ್ಕಳಲ್ಲಿಯೂ ವಿಶೇಷ ಪ್ರತಿಭೆ ಅಡಕವಾಗಿರು ತ್ತದೆ. ಅದನ್ನು ಬಳಸಿಕೊಂಡು ಜಗತ್ತಿಗೆ ಏನಾದ ರೊಂದು ಕೊಡುಗೆ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ವಿದ್ಯಾರ್ಥಿಗಳ ಅಂತರಾತ್ಮದಲ್ಲಿ ಅವರಿಗಿಂತಲೂ ಶಕ್ತಿಯುಳ್ಳ ಉತ್ತಮ ವ್ಯಕ್ತಿಯಿರುತ್ತಾನೆ. ಆ ಶಕ್ತಿಯನ್ನು ಹೊರತರಲು ಪ್ರತಿ ದಿನ ಪ್ರತಿ ಕ್ಷಣ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದ ಅವರು, ಪ್ರತಿಯೊಬ್ಬ ವಿದ್ಯಾರ್ಥಿ ಗಳೂ ಸಮಾಜದ ವಿಶೇಷ ಶಕ್ತಿಗಳಾಗಿ ಹೊರ ಹೊಮ್ಮುವ ನಿಟ್ಟಿನಲ್ಲಿ ಇಂದಿನಿಂದಲೇ ಪಣ ತೊಡಬೇಕು. ಇದಕ್ಕೆ ಪೂರಕವಾಗಿ ಶ್ರೀಮಠವು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಪ್ರಸ್ತುತ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ರ್‍ಯಾಂಕ್ ಹಾಗೂ ಪದವಿಗಿಂತ ಶಿಷ್ಟಾಚಾರ ಮತ್ತು ಮಾನವೀಯ ಮೌಲ್ಯಗಳು ಅತ್ಯವಶ್ಯಕ. ಇಂತಹ ಉತ್ತಮ ಸಂಸ್ಕಾರವನ್ನು ಕಲಿಸಿಕೊಡುವಲ್ಲಿ ಶ್ರೀಮಠವು ಇತರೆ ಸಂಸ್ಥೆಗಳಿಗಿಂತ ಒಂದು ಹೆಜ್ಜೆ ಮುಂದಿದೆ ಎಂದರು.

ವಿದ್ಯಾರ್ಥಿ ಪೋಷಕರು ಮಕ್ಕಳ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿರುತ್ತಾರೆ. ಅದಕ್ಕೆ ಪೂರಕವಾಗಿ ಶ್ರೀಮಠವು ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕøತಿ ಸಂಸ್ಕಾರದ ಜೊತೆಗೆ ಆಧ್ಯಾತ್ಮವನ್ನು ಕಲಿಸುತ್ತಿದೆ. ಅವುಗಳನ್ನು ಉಳಿಸಿ ಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕರಾಗಿರಬೇಕು. ವಿದ್ಯಾರ್ಥಿ ಜೀವನದಲ್ಲಿ ಮಾನವರಾಗಿ ಮಾನ ವೀಯ ಮೌಲ್ಯಗಳನ್ನು ರೂಢಿಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇದೇ ವೇಳೆ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸುವ ಸಲುವಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಜ್ಞಾನಜ್ಯೋತಿ ಎಂಬ ಪುಸ್ತಕ ಬಿಡುಗಡೆ ಮಾಡಿದರು. ಚಿತ್ರಕಲಾ ಶಿಕ್ಷಕ ಶಂಕರಪ್ಪ ಅವರಿಂದ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಭಾವಚಿತ್ರ ಬಿಡಿಸುವ ಮೂಲಕ ಕಲೋತ್ಸವಕ್ಕೆ ಚಾಲನೆ ನೀಡಲಾಯಿತು.

ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥಸ್ವಾಮೀಜಿ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿದರು. ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‍ನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶಾಸಕ ಸುರೇಶ್‍ಗೌಡ, ಪುರಸಭೆ ಅಧ್ಯಕ್ಷ ವಿಜಯ ಕುಮಾರ್ ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು, ಗಣ್ಯರು ಹಾಜರಿದ್ದರು.

 

Translate »