ಯಳಂದೂರನ್ನು ಪ್ರವಾಸೋದ್ಯಮ ಕೇಂದ್ರವಾಗಿಸಲು ಧ್ರುವನಾರಾಯಣ ಸೂಚನೆ
ಚಾಮರಾಜನಗರ

ಯಳಂದೂರನ್ನು ಪ್ರವಾಸೋದ್ಯಮ ಕೇಂದ್ರವಾಗಿಸಲು ಧ್ರುವನಾರಾಯಣ ಸೂಚನೆ

June 24, 2018

ಯಳಂದೂರು:  ‘ಜಿಲ್ಲೆಯ ಅತ್ಯಂತ ಚಿಕ್ಕ ತಾಲೂಕಾಗಿದ್ದರೂ ಅತ್ಯಂತ ವಿಶೇಷವಾಗಿ ಗುರುತಿಸಿಕೊಂಡಿರುವ ಯಳಂದೂರು ಪಟ್ಟಣವನ್ನು ಪ್ರವಾಸೋದ್ಯಮ ತಾಣವಾಗಿ ರೂಪಿಸಲು ಕ್ರಮವಹಿಸಬೇಕು’ ಎಂದು ಸಂಸದ ಆರ್.ಧ್ರುವನಾರಾಯಣ ಅವರು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ಸೂಚನೆ ನೀಡಿದರು.

ಪಟ್ಟಣದ ಬಳೇಮಂಟಪ, ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲಯ, ಗೌರೇ ಶ್ವರ ದೇಗುಲಕ್ಕೆ ಶನಿವಾರ ಭೇಟಿ ನೀಡಿ ಅವರು ಮಾತನಾಡಿದರು.ಪಟ್ಟಣದಲ್ಲಿರುವ ಬಳೇಮಂಟಪ ರಾಜ್ಯ ದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಕೇಂದ್ರ ಪುರಾತತ್ವ ಇಲಾಖೆಗೆ ಸೇರಿರುವ ಸ್ಮಾರಕವಾಗಿದೆ. ಇದರ ಅನತಿ ದೂರದಲ್ಲಿ ರುವ ಜಹಗೀರ್ದಾರ್ ಬಂಗಲೆಯನ್ನು ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ಈ ಕಟ್ಟಡ ಸಮುಚ್ಚಯ ವನ್ನು ಅಭಿವೃದ್ಧಿಪಡಿಸಲು ಸಣ್ಣಪುಟ್ಟ ಕಾನೂ ನಾತ್ಮಕ ತೊಡಕುಗಳಿದ್ದು, ಇದನ್ನು ನಿವಾರಿ ಸಲು ಕ್ರಮವಹಿಸಬೇಕು ಎಂದು ಅಧಿಕಾರಿ ಗಳಿಗೆ ತಿಳಿಸಿದರು.

ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾ ಲಯ ರಾಜ್ಯ ಪುರಾತತ್ವ ಇಲಾಖೆ ವ್ಯಾಪ್ತಿ ಯಲ್ಲಿದ್ದು ಇದನ್ನು ಕೇಂದ್ರ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ತರಲು ಅಧಿ ಕಾರಿಗಳೊಂದಿಗೆ ಚರ್ಚಿಸಲಾಗುವುದು. ಪುರಾತತ್ವ ಇಲಾಖೆಯಲ್ಲಿ ಸ್ಮಾರಕಗಳ ರಕ್ಷಣೆಗೆ ಹೆಚ್ಚಿನ ಅನುದಾನವಿದ್ದು, ಇದನ್ನು ಬಳಸಿಕೊಳ್ಳಲು ಚಿಂತಿಸಲಾಗಿದೆ ಎಂದರು.

ಕಟ್ಟಡದ ಸುತ್ತ ಇರುವ ಒತ್ತುವರಿ ಕಟ್ಟ ಡಗಳನ್ನು ತಕ್ಷಣ ತೆರವುಗೊಳಿಸಬೇಕು. ಇದರ ಸುತ್ತಲೂ ತಡೆಗೋಡೆಗಳನ್ನು ನಿರ್ಮಾಣ ಮಾಡಿ, ಉದ್ಯಾನವನ ನಿರ್ಮಿಸ ಬೇಕು. ಪಕ್ಕದಲ್ಲೇ ಸಭಾ ಮಂಟಪ ನಿರ್ಮಾಣ ಮಾಡುವ ಉದ್ದೇಶವಿದೆ. ಇದರ ಬಳಿ ಯಲ್ಲಿ ಇರುವ ಮತ್ತೊಂದು ಹಳೆ ಕಟ್ಟಡ ವನ್ನು ದುರಸ್ತಿಗೊಳಿಸಿ ಗ್ರಂಥಾಲಯ ಮಾಡಲು ಚಿಂತನೆ ನಡೆಸಲಾಗಿದೆ. ಇದ ಕ್ಕೆಲ್ಲಾ ಇರುವ ತೊಡಕುಗಳನ್ನು ಜಿಲ್ಲಾಧಿ ಕಾರಿಗಳು ನಿವಾರಿಸಬೇಕು ಎಂದರು.

ಬಳೇ ಮಂಟಪ ವೀಕ್ಷಣೆ: ಪಟ್ಟಣದ ಹೃದಯ ಭಾಗದಲ್ಲಿರುವ ಬಳೇಮಂಟಪ್ಪ ಬಿರುಕು ಕಾಣ ಸಿರುವ ಬಗ್ಗೆ ಇತ್ತೀಚೆಗೆ ಸಾರ್ವ ಜನಿಕರ ದೂರು ನೀಡಿದರು. ಇದರನ್ವಯ ಅಧಿಕಾರಿಗಳೊಂದಿಗೆ ಸಂಸದ ಧ್ರುವ ನಾರಾಯಣ ಭೇಟಿ ನೀಡಿ ಪರಿಶೀಲಿಸಿದರು.
ಅಂಬೇಡ್ಕರ್, ವಾಲ್ಮೀಕಿ ಸಮುದಾಯ ಭನವಗಳಿಗೆ ಭೇಟಿ: ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಹಾಗೂ ವಾಲ್ಮೀಕಿ ಸಮುದಾಯ ಭವನಗಳಿಗೆ ಸಂಸದ ಧ್ರುವ ನಾರಾಯಣ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.

ವಾಲ್ಮೀಕಿ ಭವನದ ಕಾಮಗಾರಿ ಹಣ ವಿದ್ದರೂ ಭೂಸೇನಾ ನಿಗಮ ಕೆಲಸದಲ್ಲಿ ವಿಳಂಬ ಮಾಡುತ್ತಿದೆ. ಇದರ ಬಗ್ಗೆ ದೂರು ಗಳು ಕೇಳಿ ಬಂದಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಕೇಂದ್ರ ಪುರಾತತ್ವ ಇಲಾಖೆಯ ನಿರ್ದೇ ಶಕಿ ಮೂರ್ತೇಶ್ವರಿ, ಮಾಜಿ ಶಾಸಕ ಎಸ್. ಬಾಲರಾಜು, ಜಿಲ್ಲಾ ಪಂಚಾಯಿತಿ ಉಪಾ ಧ್ಯಕ್ಷ ಜೆ.ಯೋಗೇಶ್, ತಾಪಂ ಅಧ್ಯಕ್ಷ ನಿರಂ ಜನ್, ಸದಸ್ಯರಾದ ವೆಂಕಟೇಶ್, ಸಿದ್ದ ರಾಜು, ನಂಜುಂಡಯ್ಯ, ಎಚ್.ವಿ. ಚಂದ್ರು, ಪಪಂ ಅಧ್ಯಕ್ಷ ನಿಂಗರಾಜು, ಸದಸ್ಯರಾದ ಬಿ.ರವಿ, ಜೆ.ಶ್ರೀನಿವಾಸ್, ವೈ.ವಿ.ಉಮಾ ಶಂಕರ್ ಮುಖಂಡರಾದ ವಡಗೆರೆದಾಸ್, ಮಾಂಬಳ್ಳಿ ಮಹಾದೇವ, ಡಿ.ಎನ್.ನಟ ರಾಜು, ಚಾಮಲಾಪುರ ವಿಜಯ್, ದೊಡ್ಡಯ್ಯ, ದೇವರಾಜು, ನಂಜಯ್ಯ, ಮದ್ದೂರು ನಂಜಯ್ಯ, ತಹಶೀಲ್ದಾರ್ ಬಸವರಾಜು ಚಿಗರಿ, ಇಒ ಎಂ.ವಿ.ರಾಜು, ಎಇಇ ಕಾಂತರಾಜು, ಮುಖ್ಯಾಧಿಕಾರಿ ಎಸ್.ಉಮಾಶಂಕರ್ ಇತರರು ಇದ್ದರು.

Translate »