ಕೊಳ್ಳೇಗಾಲದಲ್ಲಿ ಅದ್ಧೂರಿ ಪಂಚಲಿಂಗ ವರ್ದಂತಿ ಉತ್ಸವ
ಚಾಮರಾಜನಗರ

ಕೊಳ್ಳೇಗಾಲದಲ್ಲಿ ಅದ್ಧೂರಿ ಪಂಚಲಿಂಗ ವರ್ದಂತಿ ಉತ್ಸವ

June 24, 2018

ಕೊಳ್ಳೇಗಾಲ: ನಗರದ ದೇವಾಂಗಪೇಟೆಯಲ್ಲಿ ಪಂಚಲಿಂಗ ವರ್ದಂತಿ ಹಿನ್ನೆಲೆಯಲ್ಲಿ ಕುಲ ಗುರುಗಳ ಸಮ್ಮುಖದಲ್ಲಿ ಚಂದ್ರಶೇಖರಸ್ವಾಮಿ ರಥದಲ್ಲಿ ಉತ್ಸವಮೂರ್ತಿಯ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಚೌಡೇಶ್ವರಿ ದೇವಾಲಯದಲ್ಲಿ ಹೂ ಹಾಗೂ ಬಣ್ಣ, ಬಣ್ಣದ ವಿದ್ಯುತ್ ದೀಪಗಳಿಂದ ಚಂದ್ರಶೇಖರಸ್ವಾಮಿ ರಥವನ್ನು ಶೃಂಗರಿ ಸಲಾಗಿತ್ತು. ಬಳಿಕ, ವಿಶೇಷ ಪೂಜೆ ಸಲ್ಲಿಸಿ, ಪ್ರತ್ಯೇಕವಾಗಿ ರಾಮಲಿಂಗ ಚೌಡೇಶ್ವರಿ ಸಮೇತ ಉತ್ಸವಮೂರ್ತಿಯನ್ನು ಆಂಧ್ರದೇವಾಂಗ ಕುಲ ಗುರುಗಳಾದ ವೇದಬ್ರಹ್ಮ ಪರಸಂ ಮಹೇಶ್ ಸ್ವಾಮೀಜಿ, ಮೇಡಂ ಮಲ್ಲಿ ಕಾರ್ಜುನ ಸ್ವಾಮೀಜಿ, ಪೂಲಾ ಕುಮಾರ ಸ್ವಾಮೀಜಿ ನೇತೃತ್ವದಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯಲ್ಲಿ ನೂತನವಾಗಿ ದೇವಾಂಗ ಕುಲಕ್ಕೆ ಆಯ್ಕೆಯಾದ ಯಜ ಮಾನರಾದ ಕೆ.ರವೀಂದ್ರನಾಥ್, ನೂತನ ಶೆಟ್ಟಗಾರರಾದ ರಂಗಸ್ವಾಮಿ, ಬಂಗಾ ರಯ್ಯ, ರಂಗಯ್ಯ, ವೀರಭದ್ರಯ್ಯ, ಬಾಲ ಚಂದ್ರ, ದೇವರಾಜು, ಸುರೇಶ್, ಮನೋ ಹರ್, ಚಂದ್ರಶೇಖರಯ್ಯ, ದೇವರಾಜು, ನಾಗರಾಜು ಸೇರಿದಂತೆ ಇತರರು ಪಾಲ್ಗೊಂಡು ಕುಲಗುರುಗಳ ಆಶೀರ್ವಾದ ಪಡೆದರು.

ಮೆರವಣಿಗೆಯುದ್ದಕ್ಕೂ ಕುಲಗುರು ಗಳಿಗೆ ಪಾದ ಪೂಜೆ ಉತ್ಸವಮೂರ್ತಿಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾ ರತಿ ನಡೆಯಿತು. ಮಾರಿಗುಡಿಗೆ ಮೆರವಣಿಗೆ ತೆರಳುತ್ತಿದ್ದಂತೆ ನಾಗರಿಕ ಹಿತರಕ್ಷಣಾ ಸಮಿ ತಿಯ ಸಂಸ್ಥಾಪಕ ಅಧ್ಯಕ್ಷ ಎಂ.ನಟರಾಜ ಮಾಳಿಗೆ, ತಮಿಳು ಸಮುದಾಯದ ಈಶ್ವರ್, ಮಳವಳ್ಳಿ ಸುಬ್ರಮಣ್ಯ, ಬಟ್ಟೆ ಅಂಗಡಿ ಮಾಲೀಕ ಎಂ.ಎನ್.ಸುಬ್ರಮಣ್ಯಂ, ಆಂಧ್ರ ದೇವಾಂಗ ಹಿತರಕ್ಷಣಾ ವೇದಿಕೆ ಬೀರನ ಬೀದಿಯ ಅಣ್ಣಾದ್ರಯ್ಯ, ಯುವಕ ಬಳಗ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಪರ ಮೇಶ್ವರಯ್ಯ, ಸದಸ್ಯ ಸುಬ್ರಣ್ಯ, ರಾಜ ರಾಜೇಶ್ವರಿ ಕಲ್ಯಾಣ ಮಂಟಪದ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ಸಿಡಿ ಬಾಬು, ಪಿ.ಎನ್.ಶಿವಕುಮಾರ್ ಸೇರಿದಂತೆ ಇತರರು ನೂತನ ಯಜಮಾನರು ಹಾಗೂ ಶೆಟ್ಟಗಾರ ರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದೇವಾಂಗ ಸಮಾಜ ಮುಖಂಡರಾದ ನಿರಂಜನ್ ರವೀಂದ್ರ, ಗೋಪಿ, ಶಶಿಧರ್, ಬಾಬು, ಸೆಂದಿಲ್, ಶರವಣ, ಪರಮೇಶ್ವರಯ್ಯ, ಶಿವಾನಂದಸ್ವಾಮಿ, ನಾಗರಾಜು, ಬಾಸ್ಕರ್, ಬಾಬು, ರಮೇಶ್, ರಾಜೇಶ್‍ಪ್ರಕಾಶ್, ಷಣ್ಮುಖ, ಕೇಶವಮೂರ್ತಿ, ಜಿ.ಎಸ್. ನಾಗೇಂದ್ರ, ಚಿಂತು ಪರಮೇಶ್, ವೀರೂಪಾಕ್ಷ, ಎನ್.ಎಸ್.ರಾಜು, ಒ.ಸಿ. ಶಿವಕುಮಾರ್, ಸುರೇಶ್ ಬಾಬು ಸೇರಿ ದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

Translate »