ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷರಾಗಿ ಅಜೇಯ್, ಕಾರ್ಯದರ್ಶಿ ಪ್ರದೀಪ್ ಅಧಿಕಾರ ಸ್ವೀಕಾರ
ಚಾಮರಾಜನಗರ

ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷರಾಗಿ ಅಜೇಯ್, ಕಾರ್ಯದರ್ಶಿ ಪ್ರದೀಪ್ ಅಧಿಕಾರ ಸ್ವೀಕಾರ

June 29, 2018

ಚಾಮರಾಜನಗರ: ಚಾಮರಾಜನಗರ ರೋಟರಿ ಸಿಲ್ಕ್ ಸಿಟಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಹೆಚ್.ಎಂ. ಅಜೇಯ್ ಹಾಗೂ ಕಾರ್ಯದರ್ಶಿ ಯಾಗಿ ಆಲೂರು ಎ.ಎಸ್.ಪ್ರದೀಪ್ ಅಧಿಕಾರ ಸ್ವೀಕರಿಸಿದರು.

ನಗರದ ರತ್ನೇಶ್ವರಿ ರೆಸಿಡೆನ್ಸಿ ಬುಧವಾರ ಸಂಜೆ ನಡೆದ ಸಂಸ್ಥೆಯ 2018-19ನೇ ಸಾಲಿನ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಅಧಿಕಾರ ಸ್ವೀಕರಿಸಿದರು.

ಪದವಿ ಪ್ರದಾನಿ ಮಾಡಿ ಮಾತನಾಡಿದ 2020-21ನೇ ಸಾಲಿನ ರೋಟರಿ ಜಿಲ್ಲೆ 3181ರ ನಿಯೋಜಿತ ಜಿಲ್ಲಾ ಗೌರ್ನರ್ ಎಂ.ರಂಗನಾಥ್ ಭಟ್, ರೋಟರಿ ಸಂಸ್ಥೆ ವಿಶ್ವಾದ್ಯಂತ ಆರೋಗ್ಯ, ಶಿಕ್ಷಣ ಸೇರಿದಂತೆ ಇತರ ಸಮಾಜ ಸೇವಾ ಕಾರ್ಯಗಳಲ್ಲಿ ರೋಟರಿ ಸಂಪೂರ್ಣವಾಗಿ ತೊಡಗಿಸಿ ಕೊಂಡಿದೆ ಎಂದರು.

ನೂತನ ಅಧ್ಯಕ್ಷ ಹೆಚ್.ಎಂ.ಅಜೇಯ್ ಮಾತನಾಡಿ, ನಾನು ಕಳೆದ 5 ವರ್ಷ ಗಳಿಂದ ರೋಟರಿ ಸಿಲ್ಕ್ ಸಿಟಿ ಸಂಸ್ಥೆ ಯಲ್ಲಿ ಇದ್ದೆ. ಈಗ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತೋಷ ತರಿಸಿದೆ. ನನಗೆ ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳು ವುದು ಎಂದರೆ ಬಹಳ ಇಷ್ಟ. ನಾನು ಇದು ವರೆವಿಗೆ 17 ಬಾರಿ ರಕ್ತದಾನ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಆರೋಗ್ಯ, ಶಿಕ್ಷಣ ಕ್ಷೇತ್ರ ಹಾಗೂ ಅಂಗನವಾಡಿಗಳಿಗೆ ಪ್ರೋತ್ಸಾಹ, ಪರಿಸರ ಸಂರಕ್ಷಣೆಗೆ ಒತ್ತು ನೀಡುವುದಾಗಿ ಭರವಸೆ ನೀಡಿದರು.
ಸಂಸ್ಥೆಯ ನಿರ್ಗಮಿತ ಅಧ್ಯಕ್ಷ ಪಿ.ರಾಜು ಮಾತನಾಡಿ, ಸಂಸ್ಥೆಯು 2017-18ನೇ ಸಾಲಿ ನಲ್ಲಿ ಅನೇಕ ಸಾಮಾಜಿಕ ಕಳಕಳಿಯುಳ್ಳ ಸೇವಾ ಕಾರ್ಯಕ್ರಮವನ್ನು ನಡೆಸಿದೆ. ಇದ ರಲ್ಲಿ ಸಂಪಿಗೆ ರಸ್ತೆಗೆ ಸಂಪಿಗೆ ಗಿಡಗಳನ್ನು ಹಾಕಿರುವುದು. ಹಲವಾರು ಮಂದಿಗೆ ಶ್ರಾವಣೋಪಕರಣ ವಿತರಣೆ, ರಕ್ತದಾನ, ಆರೋಗ್ಯ ತಪಾಸಣಾ ಶಿಬಿರಗಳು ಅತ್ಯಂತ ಯಶಸ್ವಿಯಾಗಿ ನಡೆದು ಜನ-ಸಾಮಾ ನ್ಯರಿಗೆ ಉಪಯೋಗ ಆಗಿರುವುದು ನನಗೆ ಸಂತಸ ತರಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಸಹಾಯಕ ಗವ ರ್ನರ್ ಬಿ.ಎನ್.ಸುರೇಶ್, ವಲಯ ಪ್ರತಿ ನಿಧಿ ಕೆ.ಜಿ.ರಾಮಚಂದ್ರ, ಜಿಲ್ಲಾ ಮಾಜಿ ಗೌರ್ನರ್ ಡಾ.ಆರ್.ಎಸ್.ನಾಗಾರ್ಜುನ್, ನಿಯೋಜಿತ ಅಧ್ಯಕ್ಷ ಬಿ.ರವಿಶಂಕರ್, ಮಾಜಿ ಅಧ್ಯಕ್ಷರಾದ ದೊಡ್ಡರಾಯಪೇಟೆ ಗಿರೀಶ್, ಡಿ.ಪಿ.ವಿಶ್ವಾಸ್, ಬಿ.ವಿ.ವೆಂಕಟ ನಾಗಪ್ಪಶೆಟ್ಟಿ, ಪ್ರಶಾಂತ್, ಚೇತನ್ಯ ಹೆಗಡೆ, ಡಾ.ಅಭಯ್ ಕುಮಾರ್, ಸದಸ್ಯರಾದ ಶರತ್ ಸುಂದರ್, ಆಶ್ರಿತ ಅರಸ್, ಶ್ರೀಧರ್, ಸಂತೋಷ್, ಅಕ್ಷಯ್, ಲೋಕೇಶ್, ಎ.ಬಿ. ಮಲ್ಲೇಶ್, ಡಾ.ಗಿರೀಶ್ ಇತರರು ಉಪಸ್ಥಿ ತರಿದ್ದರು. ಪಿ.ರಾಜು ಸ್ವಾಗತಿಸಿದರು. ದೊಡ್ಡ ರಾಯಪೇಟೆ ಗಿರೀಶ್ ನಿರೂಪಿಸಿದರು. ಅಜೇಯ್ ವಂದಿಸಿದರು. ಇದೇ ವೇಳೆ ಎಂ.ಎ. ಪದವಿಯಲ್ಲಿ ಚಿನ್ನದ ಪದಕ ಪಡೆದ ವನಜಾ ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ಪುಟ್ಟಣ್ಣ, ಯುವ ನೈಸರ್ಗಿಕ ಕೃಷಿಕ ಸಿ.ವಿ.ಶ್ರೀನಿಧಿ ಅವರನ್ನು ಸನ್ಮಾನಿಸಲಾಯಿತು.

Translate »