ಕಾಡುಹಂದಿ ದಾಳಿಗೆ ಸಾವಿರಾರು ರೂ. ಮೌಲ್ಯದ ಬೆಳೆ ನಾಶ
ಚಾಮರಾಜನಗರ

ಕಾಡುಹಂದಿ ದಾಳಿಗೆ ಸಾವಿರಾರು ರೂ. ಮೌಲ್ಯದ ಬೆಳೆ ನಾಶ

June 29, 2018

ಗುಂಡ್ಲುಪೇಟೆ:  ತಾಲೂಕಿನ ದೇವರಹಳ್ಳಿ ಗ್ರಾಮದ ಕಾಡಂಚಿನ ಜಮೀನುಗಳಲ್ಲಿ ಕಾಡುಹಂದಿ ಗಳ ದಾಳಿಯಿಂದ ರೈತರ ಸಾವಿರಾರು ರೂಪಾಯಿಗಳ ಮೌಲ್ಯದ ಬೆಳೆ ನಷ್ಟವಾಗಿದೆ.

ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿ ಗೊಳಪಡುವ ಗೋಪಾಲಸ್ವಾಮಿ ಬೆಟ್ಟ ವಲಯದ ಕಾಡಂಚಿನ ದೇವರಹಳ್ಳಿ ಗ್ರಾಮದ ಸಿದ್ದಪ್ಪ, ಮಹದೇವಪ್ಪ, ರಾಜಪ್ಪ, ಕೆಂಪಣ್ಣ, ಗಿರೀಶ್ ಎಂಬುವರ ಜಮೀ ನುಗಳಿಗೆ ದಾಳಿ ನಡೆಸಿದ ಕಾಡುಹಂದಿ ಗಳು ಅಲ್ಲಿ ಬೆಳೆದಿದ್ದ ಜೋಳ ಹಾಗೂ ಸೂರ್ಯಕಾಂತಿ ಬೆಳೆಗಳನ್ನು ಸಂಪೂರ್ಣ ನಾಶಗೊಳಿಸಿವೆ.

ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ ಅರಣ್ಯಾಧಿಕಾರಿಗಳು ಹಂದಿಯಿಂದಾದ ಬೆಳೆ ನಷ್ಟಕ್ಕೆ ಯಾವುದೇ ಪರಿಹಾರ ನೀಡು ವುದಿಲ್ಲ ಎನ್ನುತ್ತಿದ್ದಾರೆ. ಕಾಡುಹಂದಿ ಗಳನ್ನು ಓಡಿಸಲು ಪಟಾಕಿಯನ್ನು ನೀಡಲೂ ನಿರಾಕರಿಸುತ್ತಿದ್ದಾರೆ. ಕಾಡು ಹಂದಿಗಳನ್ನು ನಿಯಂತ್ರಣ ಮಾಡುತ್ತಿಲ್ಲ ಅಥವಾ ಕೊಲ್ಲಲು ಅನುಮತಿಯನ್ನೂ ನೀಡುತ್ತಿಲ್ಲ.ಇದರಿಂದ ರೈತರ ಬೆಳೆಗಳು ನಾಶವಾಗುತ್ತಿವೆ ಎಂದು ರೈತರು ಆರೋ ಪಿಸಿದ್ದಾರೆ. ಆದ್ದರಿಂದ ಬೆಳೆ ನಷ್ಟ ಪರಿ ಹಾರ ನೀಡಬೇಕು ಇಲ್ಲದಿದ್ದರೆ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತ ಸಂಘದ ಜಿಲ್ಲಾ ಸಂಚಾಲಕ ಶಿವ ಪುರ ಮಹದೇವಪ್ಪ ಎಚ್ಚರಿಕೆ ನೀಡಿದ್ದಾರೆ.

Translate »