ಮಾದಪ್ಪನ ಹುಂಡಿಯಲ್ಲಿ ಕೋಟಿ ರೂ.ಗು ಹೆಚ್ಚು ಹಣ ಸಂಗ್ರಹ
ಚಾಮರಾಜನಗರ

ಮಾದಪ್ಪನ ಹುಂಡಿಯಲ್ಲಿ ಕೋಟಿ ರೂ.ಗು ಹೆಚ್ಚು ಹಣ ಸಂಗ್ರಹ

June 29, 2018

ಕೊಳ್ಳೇಗಾಲ: ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀಮಲೇಮಹದೇಶ್ವರ ಬೆಟ್ಟದಲ್ಲಿರುವ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದ ಹುಂಡಿಗಳನ್ನು ಎಣಿಕೆ ಮಾಡಲಾಗಿದ್ದು, 1.08 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ.

ಇಂದು ಬೆಳಿಗ್ಗೆ ಶ್ರೀ ಸಾಲೂರು ಬೃಹನ್ಮಠದ ಶ್ರೀ ಪಟ್ಟದ ಗುರುಸ್ವಾಮಿ ಮತ್ತು ಶ್ರೀ ಮಲೇಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪ ಅವರ ನೇತೃತ್ವದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಹುಂಡಿಗಳ ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರುಗಳಾದ ಕೊಪ್ಪಾಳಿ ಮಹದೇವನನಾಯಕ, ಡಿ.ದೇವರಾಜು, ಡಿ.ಮಹದೇವಪ್ಪ, ಜವರೇಗೌಡ, ಪ್ರಾಧಿಕಾರದ ಉಪ ಕಾರ್ಯದರ್ಶಿ ರಾಜಶೇಖರ್, ಅಧೀಕ್ಷಕ ಎಂ.ಬಸವರಾಜು, ಲೆಕ್ಕ ಅಧೀಕ್ಷಕ ಮಹದೇವಸ್ವಾಮಿ, ಬಿ.ಮದರಾಜು ಹಾಗೂ ದೇವಸ್ಥಾನದ ಎಲ್ಲಾ ನೌಕರರು ಪಾಲ್ಗೊಂಡಿದ್ದರು. ಒಟ್ಟು ಎಣಿಕೆಯಲ್ಲಿ 1,08,14,533 ರೂ.ಗಳು ಸಂಗ್ರಹವಾಗಿತ್ತು. ಅಲ್ಲದೇ 102 ಗ್ರಾಂ ಚಿನ್ನದ ಪದಾರ್ಥಗಳು ಹಾಗೂ 1 ಕೆಜಿ 596 ಗ್ರಾಂ ಬೆಳ್ಳಿಯ ಪದಾರ್ಥಗಳು ದೊರೆತಿದೆ.

ಈ ವೇಳೆ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮೋಹನ್ ಕುಮಾರ್, ಎಸ್‍ಬಿಐ ವ್ಯವಸ್ಥಾಪಕ ಸೆಂದಿಲ್ ನಾಥನ್ ಹಾಗೂ ಸಿಬ್ಬಂದಿ ಹಾಜರಿದ್ದರು. ಹುಂಡಿ ಎಣಿಕೆ ಕಾರ್ಯಕ್ಕೆ ಮಹದೇಶ್ವರ ಬೆಟ್ಟದ ಆರಕ್ಷಕ ಸಿಬ್ಬಂದಿ ವ್ಯಾಪಕ ಬಂದೋಬಸ್ತ್ ನೀಡಿದ್ದರು.

Translate »