ಅಮಾಯಕರ ಪ್ರಾಣಕ್ಕೆ ಎರವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಹಳ್ಳ
ಚಾಮರಾಜನಗರ

ಅಮಾಯಕರ ಪ್ರಾಣಕ್ಕೆ ಎರವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಹಳ್ಳ

June 27, 2018

ಚಾಮರಾಜನಗರ : ಚಾಮರಾಜನಗರದಿಂದ ಸಂತೇ ಮರಹಳ್ಳಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ-209 ರಸ್ತೆಯ ಕಾಡಹಳ್ಳಿ ಗೇಟ್ ಬಳಿ ಇರುವ ಬೃಹದಾಕಾರ ವಾದ ಹಳ್ಳ ಅಮಾಯಕ ವಾಹನ ಸವಾರರ ಪ್ರಾಣಕ್ಕೆ ಎರವಾಗುತ್ತಿದೆ.

ಚಾಮರಾಜನಗರದಿಂದ ಕೇವಲ ಎರಡು ಕಿಮೀ ಅಂತರದಲ್ಲಿ ಕಾಡಹಳ್ಳಿ ಗೇಟ್ ಇದೆ. ಈ ಗೇಟ್‍ನ ಮುಂಭಾಗ ರಸ್ತೆಯ ಮಧ್ಯ ಭಾಗದಲ್ಲಿ ಭಾರೀ ಹಳ್ಳ ಇದೆ. ಈ ಹಳ್ಳವನ್ನು ಗಮನಿಸದ ಅನೇಕ ವಾಹನ ಸವಾರರು ಹಳ್ಳಕ್ಕೆ ವಾಹನ ಬಿಟ್ಟು ಪ್ರಾಣತೆತ್ತಿದ್ದಾರೆ. ಇದಕ್ಕೆ ಪುಷ್ಠಿ ನೀಡು ವಂತೆ ಭಾನುವಾರ ರಾತ್ರಿ ಚಾಮರಾಜ ನಗರದ ಸಂತೇಮರಹಳ್ಳಿ ಕಡೆಗೆ ಒಂದೇ ಬೈಕ್‍ನಲ್ಲಿ ತೆರಳುತ್ತಿದ್ದ ಕೆಂಪನಪುರ ಗ್ರಾಮದ ಇಬ್ಬರು ವ್ಯಕ್ತಿಗಳು ಮೃತಪಟ್ಟರು. ಇನ್ನೂ ಅನೇಕರು ಬಿದ್ದು ಗಾಯಗೊಂಡಿದ್ದಾರೆ.

ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿ ಬಿದ್ದಿರುವುದು ಇಂದು ನೆನ್ನೆಯಲ್ಲ. ಗುಂಡಿ ಬಿದ್ದು ನಾಲ್ಕೈದು ತಿಂಗಳಾಗಿದೆ. ಇದೇ ರಸ್ತೆ ಯಲ್ಲಿ ಜಿಲ್ಲೆಯ ಅನೇಕ ಜನಪ್ರತಿನಿಧಿಗಳು ಸಂಚರಿಸುತ್ತಾರೆ. ಸ್ಥಳೀಯ ಶಾಸಕರೂ ಆಗಿರುವ ಸಚಿವ ಸಿ. ಪುಟ್ಟರಂಗಶೆಟ್ಟಿ ತಮ್ಮ ಸ್ವಗ್ರಾಮ ಯಳಂದೂರು ತಾಲೂಕಿನ ಉಪ್ಪಿನಮೋಳೆಯಿಂದ ಚಾಮರಾಜ ನಗರಕ್ಕೆ ಬರುವುದು ಇದೇ ರಸ್ತೆಯಲ್ಲಿ. ಇವರಲ್ಲದೇ ಬೆಂಗಳೂರಿನಿಂದ ಕೊಳ್ಳೇ ಗಾಲ ಮಾರ್ಗವಾಗಿ ಚಾಮರಾಜನಗರಕ್ಕೆ ಹಾಗೂ ಮೈಸೂರಿನಿಂದ ಸಂತೇಮರಹಳ್ಳಿ ಮಾರ್ಗವಾಗಿ ಚಾಮರಾಜನಗರಕ್ಕೆ ಆಗಮಿ ಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ಗಳು ಆಗಮಿಸುತ್ತಾರೆ. ರಸ್ತೆ ಮಧ್ಯೆಯಲ್ಲಿಯೇ ಭಾರೀ ಹಳ್ಳ ಇರುವುದು ಇವರ ಗಮನಕ್ಕೆ ಬಂದಿಲ್ಲವೆ ಎಂದು ವಾಹನ ಸವಾರರು ಪ್ರಶ್ನಿಸಿದ್ದಾರೆ. ಈ ಹಳ್ಳಕ್ಕೆ ಬಿದ್ದು ಇನ್ನೆಷ್ಟು ಅಮಾಯಕರು ಬಲಿ ಆಗಬೇಕು ಅಥವಾ ಇನ್ನೆಷ್ಟು ಮಂದಿ ಬಿದ್ದು ಗಾಯಗೊಳ್ಳ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಕೇಂದ್ರವಾದ ಚಾಮರಾಜನಗರ ದಿಂದ ಕೇವಲ ಎರಡು ಕಿ.ಮೀ ದೂರ ದಲ್ಲಿ ಹಾಗೂ ಪ್ರಮುಖ ರಸ್ತೆಯಲ್ಲಿ ಬಿದ್ದಿ ರುವ ಹಳ್ಳವನ್ನೇ ಸರಿಪಡಿಸಲು ಗಮನ ಹರಿಸದ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ಗಳು ಇನ್ನು ಯಾವುದರ ಕಡೆ ಗಮನ ಹರಿಸುತ್ತಾರೆ ಎಂದು ಸ್ಥಳೀಯರು ಆಕ್ರೋಶದಿಂದ ಪ್ರಶ್ನಿಸಿ ದ್ದಾರೆ. ಇದಲ್ಲದೇ ಹಳ್ಳವನ್ನು ಕೂಡಲೇ ಮುಚ್ಚಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.

ಈ ಮೂಲಕ ಅಮಾಯಕರು ಪ್ರಾಣ ಉಳಿಯಬೇಕು. ಇಲ್ಲದಿದ್ದರೆ ಸಂಘ- ಸಂಸ್ಥೆಗಳು, ಸಂಘಟನೆಗಳ ಜೊತೆಗೂಡಿ ಗುಂಡಿ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ ಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಸಿದ್ದಾರೆ.

Translate »