ಜೂ.29ರಂದು ಮೈಸೂರಲ್ಲಿ ಉದ್ಯೋಗ ಮೇಳ
ಮೈಸೂರು

ಜೂ.29ರಂದು ಮೈಸೂರಲ್ಲಿ ಉದ್ಯೋಗ ಮೇಳ

June 27, 2018

ಮೈಸೂರು: ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿರುವ ಜಿಲ್ಲಾ ಉದ್ಯೋಗ ವಿನಿಯಮ ಕಚೇರಿ ಹಾಗೂ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜೂ.29 ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಈ ಮೇಳದಲ್ಲಿ ಮೈಸೂ ರಿನ ಸುರಂಭಿ ಪ್ಲಾನ್‍ಟೆಕ್, ಬಿ.ಎಸ್.ಗೌಡ ಎಂಟರ್ ಪ್ರೈಸಸ್, ಯುರೇಕಾಫೋಬ್ರ್ಸ್, ತೇಜಸ್ವಿನಿ ಎಂಟರ್ ಪ್ರೈಸಸ್, ಹಿಂದೂಜಾ ಗ್ಲೋಬಲ್ ಸಲ್ಯೂಷನ್, ರಾಜಾ ಬಯೋಟಿಕ್, ಗ್ರಾಸ್ ರೋಡ್, ಉಡ್‍ಲ್ಯಾಂಡ್, ರಾಣಿಮದ್ರಾಸ್ ಪ್ರೈವೇಟ್ ಲಿ., ಬೆಂಗಳೂರಿನ ರೀಟೇಲ್ ವಕ್ರ್ಸ್ ಇಂಡಿಯಾ ಇನ್ನಿತರೆ ಖಾಸಗಿ ನಿಯೋಜಕರು ಭಾಗವಹಿಸಲಿ ದ್ದಾರೆ. ಈ ಆಯ್ಕೆ ಪ್ರಕ್ರಿಯೆ ಎಸ್‍ಎಸ್‍ಎಲ್‍ಸಿ ಉತ್ತೀರ್ಣ ಅಥವಾ ಅನುತ್ತೀರ್ಣ, ಪಿಯುಸಿ, ಜೆಓಸಿ, ಐಟಿಐ, ಡಿಪ್ಲೋಮಾ ಯಾವುದೇ ಪದವಿಗಳಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗಾಗಿ ನಡೆಯಲಿದೆ. ಅರ್ಹ ನಿರುದ್ಯೋಗಿ ಪುರುಷ ಅಥವಾ ಮಹಿಳಾ ಅಭ್ಯರ್ಥಿಗಳು ತ್ಮಮ ಸ್ವಂತ ಪರಿಚಯ ಪತ್ರ (BIO-DATA) ದೊಂದಿಗೆ ಹಾಜರಾಗು ವುದು. ಹೆಚ್ಚಿನ ಮಾಹಿತಿಗೆ ಡಿ.ಎಂ.ರಾಣಿ ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮೈಸೂರು-07 ಇವರನ್ನು ಕಚೇರಿ ಸಮಯದಲ್ಲಿ ಅಥವಾ ದೂರವಾಣಿ ಸಂಖ್ಯೆ 0821-2489972ರಲ್ಲಿ ಸಂಪರ್ಕಿಸಬಹುದು.

Translate »