ಜಾಲಹಳ್ಳಿ ಹುಂಡಿಯಲ್ಲಿ ಕಂಡಾಯ ಉತ್ಸವ
ಚಾಮರಾಜನಗರ

ಜಾಲಹಳ್ಳಿ ಹುಂಡಿಯಲ್ಲಿ ಕಂಡಾಯ ಉತ್ಸವ

June 27, 2018

ಚಾಮರಾಜನಗರ:  ಚಾಮರಾಜನಗರದ ಜಾಲಹಳ್ಳಿ ಹುಂಡಿಯಲ್ಲಿ ನೂತನ ಕಂಡಾಯವನ್ನು ಗ್ರಾಮಕ್ಕೆ ತಂದು ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು.

ನೂತನ ಕಂಡಾಯವನ್ನು ತರಲಾದ ಹಿನ್ನೆಲೆಯಲ್ಲಿ ಗ್ರಾಮದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮದ ಎಲ್ಲಾ ಬೀದಿಗಳಲ್ಲಿ ತಳಿರು ತೋರಣಗಳನ್ನು ಕಟ್ಟಿ ರಂಗೋಲಿ ಹಾಗೂ ಬಣ್ಣಗಳಿಂದ ಶೃಂಗರಿಸಲಾಗಿತ್ತು. ಗ್ರಾಮದ ಪ್ರತಿಯೊಬ್ಬರ ಮನೆ ಮುಂಭಾಗದಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸಲಾಯಿತು. ಮಂಟೇಸ್ವಾಮಿಯ ಕಂಡಾಯವಾದ್ದರಿಂದ ಇಂದಿನಿಂದ 48 ದಿನಗಳ ಕಾಲ ಪೂಜೆ ಸಲ್ಲಿಸಲಾಗಿ ಈ ವೇಳೆ ಗ್ರಾಮದಲ್ಲಿ ಹಾಗೂ ಜಿಲ್ಲೆಯಾ ದ್ಯಂತ ಉತ್ತಮ ಮಳೆ ಬಿದ್ದು ಬೆಳೆ ಬರ ಲೆಂದು ದೇವರಲ್ಲಿ ಪ್ರಾರ್ಥಿಸಲಾಯಿತು. ನಂತರ ಗ್ರಾಮಸ್ಥರು ಅನ್ನಸಂತರ್ಪಣೆ ನಡೆಸಿ ಮಂಟೇಸ್ವಾಮಿಯ ಕೃಪೆಗೆ ಪಾತ್ರರಾದರು. ಈ ಪೂಜಾ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯ ಸಚಿವ ಸಿ.ಪುಟ್ಟರಂಗಶೆಟ್ಟಿ ಭಾಗವಹಿಸಿ ಪೂಜೆ ಸಲ್ಲಿಸಿದರು.

ಈ ವೇಳೆ ಜಿ.ಪಂ.ಸದಸ್ಯ ಬಾಲರಾಜು, ಕನಿಷ್ಟ ವೇತನ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷ ಉಮೇಶ್, ಯಜ ಮಾನರು, ಮುಖಂಡರು ಸೇರಿದಂತೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.

Translate »