ಚಾಮರಾಜನಗರ: ಇಂದಿಲ್ಲಿ ನಿಗದಿ ಆಗಿದ್ದ ಚಾಮರಾಜ ನಗರ ತಾಲೂಕು ಪಂಚಾಯಿತಿ ಅಧ್ಯಕ್ಷರ ಆಯ್ಕೆ ಚುನಾವಣೆ ಸದಸ್ಯರ ಕೋರಂ ಅಭಾವದ ಕಾರಣ ಮುಂದೂಡಲ್ಪಟ್ಟಿತು. ಚಾಮರಾಜನಗರ ತಾಲೂಕು ಪಂಚಾ ಯಿತಿ ಅಧ್ಯಕ್ಷರಾಗಿದ್ದ ಹೆಚ್.ವಿ.ಚಂದ್ರು ಅವರ ರಾಜೀನಾಮೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕೆ ಇಂದು ಚುನಾ ವಣೆ ನಿಗದಿ ಆಗಿತ್ತು. ಯಾನಗಹಳ್ಳಿ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ದೊಡ್ಡಮ್ಮ ಉಮೇ ದುವಾರಿಕೆ ಸಲ್ಲಿಸಿದರು. ಚುನಾವಣೆ ನಡೆ ಯುವ ಸಭೆಗೆ ಬಿಜೆಪಿಯ 17 ಸದಸ್ಯರು ಸೇರಿ ಒಟ್ಟು 18 ಸದಸ್ಯರು ಗೈರು ಹಾಜರಾ…
ಖಾಯಂ ಪೌರಾಯುಕ್ತರ ನೇಮಕಕ್ಕೆ ಆಗ್ರಹಿಸಿ ಜನ ಪ್ರತಿನಿಧಿಗಳ ಧರಣ
June 1, 2018ಚಾಮರಾಜನಗರ: ಚಾಮರಾಜನಗರ ನಗರಸಭೆಯಲ್ಲಿ ಪ್ರಭಾರ ಪೌರಾಯುಕ್ತರಾಗಿ ಕಾರ್ಯ ನಿರ್ವಹಿಸು ತ್ತಿರುವವರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದ ನಗರಸಭೆ ಅಧ್ಯಕ್ಷರು, ಉಪಾ ಧ್ಯಕ್ಷರು, ಸದಸ್ಯರು ನಗರಸಭೆ ಕಚೇರಿ ಮುಂಭಾಗ ಗುರುವಾರದಿಂದ ಅನಿರ್ದಿಷ್ಠಾ ವಧಿ ಧರಣ ಆರಂಭಿಸಿದ್ದಾರೆ. ನಗರಸಭೆ ಕಾರ್ಯಾಲಯದ ಮುಂಭಾಗ ಹಾಕಲಾಗಿರುವ ಶಾಮಿಯಾನದಡಿ ಕುಳಿತು ಧರಣ ಆರಂಭಿಸಿರುವ ಜನಪ್ರತಿನಿಧಿಗಳು, ನಮ್ಮ ಬೇಡಿಕೆ ಈಡೇರುವ ತನಕವೂ ಸಹ ಧರಣ ಮುಂದುವರೆಸುವುದಾಗಿ ಎಚ್ಚರಿಸಿದ್ದಾರೆ. ನಗರಸಭೆಗೆ ಖಾಯಂ ಪೌರಾಯುಕ್ತರನ್ನು ನೇಮಕಗೊಳಿಸದ ಕಾರಣ ಪ್ರಭಾರ ಪೌರಾ ಯುಕ್ತರಾಗಿ ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಫೌಜಿಯಾ ತರನುಂ ಅವರನ್ನು…
ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
June 1, 2018ಚಾಮರಾಜನಗರ: ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ ಬಾಲಕ-ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ ಹಾಗೂ ಬೌದ್ಧ ಜನಾಂಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ. 08226-224370 ಸಂಪರ್ಕಿಸಬಹುದು.
ಡೆಂಗ್ಯೂ ನಿಯಂತ್ರಣದಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖ
June 1, 2018ಚಾಮರಾಜನಗರ: ಮಳೆ ಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಡೆಂಗ್ಯೂ ಜ್ವರವನ್ನು ಆರಂಭಿಕ ಹಂತದಲ್ಲಿಯೇ ತಡೆಗಟ್ಟಲು ಜನರ ಸಹಭಾಗಿತ್ವ ರೂಪಿಸು ವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾ ದದ್ದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್ ಅಭಿಪ್ರಾಯಪಟ್ಟರು. ನಗರದ ಜಿಲ್ಲಾ ಆರೋಗ್ಯ ಇಲಾಖೆಯ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂ ತ್ರಣ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಏರ್ಪಡಿಸಲಾ…
ನಾಳೆಯಿಂದ ಕಾಲುಬಾಯಿ ಜ್ವರ ಲಸಿಕೆ ಆಂದೋಲನ
May 31, 2018ಚಾಮರಾಜನಗರ: ಜಿಲ್ಲೆ ಯಲ್ಲಿ ಜೂ 1ರಿಂದ 25ರವರೆಗೆ ಜಾನು ವಾರುಗಳಿಗೆ ತಗಲುವ ಕಾಲು ಬಾಯಿ ಜ್ವರವನ್ನು ತಡೆಯಲು 14ನೇ ಸುತ್ತಿನ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದ್ದು, ಜಿಲ್ಲೆಯ ಒಟ್ಟು 2,50,423 ಜಾನುವಾರುಗಳಿಗೆ ಲಸಿಕೆ ಹಾಕಲು ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಾನುವಾರುಗಳಿಗೆ ಲಸಿಕೆ ನೀಡಲು ಜಾನು ವಾರು ಸಂಖ್ಯೆಗಳಿಗೆ ಅನುಗುಣವಾಗಿ 27 ಲಸಿಕಾ ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ 5 ರಿಂದ 6 ಮಂದಿ ಅರೆ ತಾಂತ್ರಿಕ ಸಿಬ್ಬಂದಿ ಇದ್ದು…
ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ: ಜಿಲ್ಲೆಯಲ್ಲಿ ಯಶಸ್ವಿ
May 31, 2018ಚಾಮರಾಜನಗರ:ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ದೇಶ ದ್ಯಾಂತ ನಡೆಯುತ್ತಿರುವ ರಾಷ್ಟ್ರೀಯ ಬ್ಯಾಂಕ್ಗಳ ಮುಷ್ಕರ ಜಿಲ್ಲೆಯಲ್ಲಿ ಯಶಸ್ವಿಯಾಯಿತು. ನಗರದ ಪ್ರಮುಖ ರಾಷ್ಟ್ರೀಯ ಬ್ಯಾಂಕ್ ಗಳಾದ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಿಡಿಕೇಂಟ್ ಬ್ಯಾಂಕ್, ವಿಜಯ ಬ್ಯಾಂಕ್, ಕೆನರಾ ಬ್ಯಾಂಕ್ ಸೇರಿದಂತೆ ಜಿಲ್ಲೆಯ ಎಲ್ಲ ರಾಷ್ಟ್ರೀಕೃತ ಬ್ಯಾಂಕ್ಗಳು ಬಂದ್ ಆಗಿ ದವು. ಬಂದ್ಗೆ ರಾಷ್ಟ್ರೀಕೃತ ಬ್ಯಾಂಕ್ನ ಎಟಿಎಂ ಕೇಂದ್ರಗಳ ಸಿಬ್ಬಂದಿಯು ಬೆಂಬಲ ಸೂಚಿಸಿದರಿಂದ ಎಟಿಎಂ ಕೇಂದ್ರಗಳು ಬಾಗಿಲು ತೆರಯಲಿಲ್ಲ. ಉಳಿದಂತೆ ಖಾಸಗಿ ಬ್ಯಾಂಕ್ಗಳು ಎಂದಿನಂತೆ ಕಾರ್ಯನಿರ್ವಹಿಸಿತ್ತು. ಸಾರ್ವಜನಿಕರ ಪರದಾಟ: ವಿವಿಧ…
ಬನ್ನಿ ವಿದ್ಯಾರ್ಥಿಗಳೇ, ಕಳೆಯಿತು ಆ ಬೇಸಿಗೆ ರಜೆ: ಮೆರವಣಿಗೆ ಮೂಲಕ ಸಿಹಿ ನೀಡಿ ಶಾಲೆಗೆ ಸ್ವಾಗತ
May 30, 2018ಚಾಮರಾಜನಗರ: ಕಳೆದ 45 ದಿನಗಳಿಂದ ಬೇಸಿಗೆ ರಜೆಯ ಮೂಡ್ನಲ್ಲಿದ್ದು, ಎಂಜಾಯ್ ಮಾಡುತ್ತಿದ್ದ ವಿದ್ಯಾರ್ಥಿಗಳು, ಮಂಗಳವಾರದ ಒಲ್ಲದ ಮನಸ್ಸಿನಿಂದಲೇ ಶಾಲೆಗೆ ತೆರಳಿದರು. ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಸಿಹಿ ಊಟ ಹಾಕುವ ಮೂಲಕ ವಿದ್ಯಾರ್ಥಿಗಳನ್ನು ಹೃತ್ಪೂ ರ್ವಕವಾಗಿ ಸ್ವಾಗತಿಸಲಾಯಿತು. ಆದರೆ ಚಾಮರಾಜನಗರದಲ್ಲಿ ಸರ್ಕಾರಿ ಶಾಲೆ ಯೊಂದರಲ್ಲಿ ವಿದ್ಯಾರ್ಥಿಗಳನ್ನು ಗೊರವರ ಕುಣ ತದೊಂದಿಗೆ ಹೂ ನೀಡಿ, ಸಿಹಿ ವಿತ ರಿಸಿ ಬರಮಾಡಿಕೊಳ್ಳಲಾಯಿತು. ಹಳೇ ವಿದ್ಯಾರ್ಥಿನಿಯರು ಕಳಸ ಹೊತ್ತು ಪೂರ್ಣಕುಂಬ ಸ್ವಾಗತದೊಂದಿಗೆ ನೂತನ ವಿದ್ಯಾರ್ಥಿಗಳನ್ನು ಬರಮಾಡಿ ಕೊಂಡಿದ್ದು ವಿಶೇಷವಾಗಿತ್ತು. ಚಾಮರಾಜನಗರ ಚೆನ್ನಿಪುರದಮೋಳೆ ಬಡಾವಣೆಯಲ್ಲಿ…
ಮುಂದುವರೆದ ಗ್ರಾಮೀಣ ಅಂಚೆ ನೌಕರರ ಮುಷ್ಕರ: ಅಂಚೆ ನೌಕರರ ಬೇಡಿಕೆ ಬಗ್ಗೆ ಪ್ರಧಾನಿಗೆ ಪತ್ರ
May 30, 2018ಚಾಮರಾಜನಗರ: ಗ್ರಾಮೀಣ ಅಂಚೆ ನೌಕರರ ಬೇಡಿಕೆ ಗಳನ್ನು ಈಡೇರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಬಂಧಪಟ್ಟ ಅಧಿಕಾರಿ ಗಳಿಗೆ ಪತ್ರ ಬರೆಯುವುದಾಗಿ ಕೊಳ್ಳೇ ಗಾಲದ ಶಾಸಕ ಎನ್.ಮಹೇಶ್ ಹೇಳಿದರು. ನಗರದ ಸಂತೇಮರಹಳ್ಳಿ ರಸ್ತೆಯಲ್ಲಿ ರುವ ಕೇಂದ್ರ ಅಂಚೆ ಕಚೇರಿಯ ಆವರಣ ದಲ್ಲಿ ಶ್ರೀಕಮಲೇಶಚಂದ್ರ ಸಮಿತಿ ವರದಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರು ನಡೆಸುತ್ತಿ ರುವ ಅನಿರ್ಧಿಷ್ಠಾವಧಿ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾನಿರತರಿಂದ ಮನವಿ ಸ್ವೀಕರಿಸಿ ಮಾತನಾಡಿದರು. ಗ್ರಾಮೀಣ ಅಂಚೆ ನೌಕರರ ನ್ಯಾಯ ಯುತ ಹೋರಾಟಕ್ಕೆ…
ತೈಲ ಬೆಲೆ ಇಳಿಕೆಗೆ ಒತ್ತಾಯಿಸಿ ಜೆಡಿಎಸ್-ಬಿಎಸ್ಪಿ ಪ್ರತಿಭಟನೆ
May 30, 2018ಚಾಮರಾಜನಗರ: ಪೆಟ್ರೋಲ್, ಡಿಸೇಲ್ ಬೆಲೆ ಇಳಿಸುವಂತೆ ಒತ್ತಾಯಿಸಿ ಜೆಡಿಎಸ್, ಬಿಎಸ್ಪಿ ಕಾರ್ಯ ಕರ್ತರು ಕೇಂದ್ರ ಸರ್ಕಾರ ವಿರುದ್ಧ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಶ್ರೀಚಾಮರಾಜೇಶ್ವರ ಉದ್ಯಾನ ವನದ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಒಂಟಿ ಎತ್ತಿನಗಾಡಿ ಮೇಲೆ ಸ್ಕೂಟಿ ನಿಲ್ಲಿಸಿ, ಗಾಡಿ ಮುಂಭಾಗ ದಲ್ಲಿ ಪ್ರಧಾನಿ ನರೇಂದ್ರಮೋದಿ ಭಾವಚಿತ್ರ ಹಾಕಿ ಭುವನೇಶ್ವರಿ ವೃತ್ತಕ್ಕೆ ಎಳೆದು ತಂದರು ಅಲ್ಲಿ ಕೆಲಕಾಲ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರಮೋದಿ ವಿರುದ್ಧ ಧಿಕ್ಕಾ ರದ ಘೋಷಣೆ ಕೂಗಿ ಮೋದಿ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು….
ಈರುಳ್ಳಿ ಬೆಳೆಗೆ ನೇರಳೆ ಎಲೆ ಮಚ್ಚೆ ರೋಗ: ನಿಯಂತ್ರಣಕ್ಕೆ ಸಲಹೆ
May 30, 2018ಚಾಮರಾಜನಗರ: ತೋಟಗಾರಿಕೆ ಇಲಾಖೆಯು ಈರುಳ್ಳಿ ಎಲೆಯ ಮೇಲೆ ಮಚ್ಚೆರೋಗ ಲಕ್ಷಣಗಳು ಹಾಗೂ ಹತೋಟಿ ಕ್ರಮಗಳ ಕುರಿತು ಈರುಳ್ಳಿ ಬೆಳೆಗಾರರಿಗೆ ಮಾಹಿತಿ ನೀಡಿದೆ. ಈರುಳ್ಳಿ ಎಲೆಯ ಮೇಲೆ ಮೊದಲಿಗೆ ಸಣ್ಣನೆಯ ತಗ್ಗಾದ ಬಿಳಿ ಮಚ್ಚೆಗಳು ಕಾಣ ಸಿ ಕೊಂಡು ನಂತರ ನೇರಳೆ ಬಣ್ಣಕ್ಕೆ ತಿರುಗುತ್ತದೆ. ಆಮೇಲೆ ದೊಡ್ಡದಾಗಿ ಎಲೆಗಳು ಒಣಗುತ್ತವೆ. ಮುಂಗಾರಿನಲ್ಲಿ ಈ ರೋಗದ ತೀವ್ರತೆ ಹೆಚ್ಚಾಗಿ ಹರಡುತ್ತದೆ. ಮಳೆ ಹಾಗೂ ಮೋಡ ಕವಿದ ವಾತಾವರಣ ರೋಗ ಹರಡಲು ಅನುಕೂಲವಾಗಿದ್ದು, ಹೆಚ್ಚು ನೀರು ನಿಂತ ತಾಕಿನಲ್ಲೂ ಸಹ ರೋಗ…